ಮಂಗಳೂರು: ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆ ಮಂಗಳೂರು ತನ್ನ 2 ನೇ ವರ್ಷದ ರಚನಾತ್ಮಕ ಹೃದಯ ಮದ್ಯಸ್ಥಿಕೆಗಳೊಂದಿಗೆ ವಿಶ್ವ ಹೃದಯ ದಿನಾಚರಣೆಯನ್ನು TAVR/TAVI, TMVR, TTVR, ಮತ್ತು MitraClip ಕಾರ್ಯ ವಿಧಾನಗಳಂತಹ ಮುಂದುವರಿದ ರಚನಾತ್ಮಕ ಹೃದಯ ಮಧ್ಯಸ್ಥಿಕೆಯ ಚಿಕಿಸ್ತಾ ವಿಧಾನದಿಂದ ಯಶಸ್ವಿಯಾಗಿ ಗುಣ ಮುಖ ಹೊಂದಿದ ರೋಗಿಗಳನ್ನು ಸನ್ಮಾನಿಸುವ ಮೂಲಕ ಆಸ್ಪತ್ರೆಯ ಸಭಾಂಗಣದಲ್ಲಿ ಆಚರಿಸಲಾಯಿತ್ತು .
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮಾತನಾಡಿ , ಇಂದಿನ ಯುವ ಪೀಳಿಗೆಯಲ್ಲಿ ಹೃದಯಕ್ಕೆ ಸಮಂಧಿಸಿದ ಕಾಯಿಲೆಗಳ ಉಲ್ಬಣಗಳು ಜಾಸ್ತಿ ಆಗ್ತಾ ಇದೆ . ಇದಕ್ಕೆ ನಮ್ಮ ದೈನಂದಿನ ಆಹಾರ ಪದ್ಧತಿ , ಜೀವನ ಶೈಲಿ , ವ್ಯಾಯಾಮ ಇಲ್ಲದ ದಿನಚರಿ , ದೈಹಿಕ ಚಟುವಟಿಕೆಗಳನ್ನು ಮಾಡಲು ಉದಾಸೀನ ಮುಂತಾದ ಅಂಶಗಳು ನಮ್ಮ ಆರೋಗ್ಯವನ್ನು ಕೆಡಿಸುತ್ತೆ .ಮಾನವ ಹೃದಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ , ಹೃದಯ ಒಮ್ಮೆ ವೈಫಲ್ಯ ಹೊಂದಿದರೆ ಕೆಲವರು ಇನ್ನು ಮುಂದೆ ಬದುಕೇ ಇಲ್ಲವೆಂದು ಭಾವಿಸುತ್ತಾರೆ ಆದರೆ ಇಂಡಿಯಾನಾ ಆಸ್ಪತ್ರೆಯು ಅರೋಗ್ಯ ಜೀವನವನ್ನು ಅವರಿಗೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಾರಾದ ಡಾ ಯೂಸುಫ್ ಕುಂಬ್ಳೆಯವರ ಕಾರ್ಯವನ್ನು ಪ್ರಶಂಶೆ ಮಾಡಿದರು .
ಈ ಸಂದರ್ಭದಲ್ಲಿ ಮಾತನಾಡಿದ ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಇಂಟರ್ವೆನಲ್ ಕಾರ್ಡಿಯಾಲಜಿಸ್ಟ್ ಡಾ.ಯೂಸುಫ್ ಕುಂಬ್ಳೆ ಮಾತನಾಡಿ , “ವಿಶ್ವ ಹೃದಯ ದಿನವು ಹೃದಯರಕ್ತನಾಳದ ಕಾಯಿಲೆಗಳು, ಅವುಗಳ ಅಪಾಯಕಾರಿ ಅಂಶಗಳು ಮತ್ತು ತಡೆಗಟ್ಟುವ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ, ಇಂಡಿಯಾನಾ ಆಸ್ಪತ್ರೆ ಕಳೆದ 15 ವರ್ಷಗಳಿಂದ ಹೃದಯ ರಕ್ತನಾಳದ ಕಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿದೆ.
ಹೃದಯ ಕವಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ರಚನಾತ್ಮಕ ಮಧ್ಯಸ್ಥಿಕೆ (structural interventions) ಹೊಸ ಅತ್ಯಾಧುನಿಕ ತಂತ್ರಜ್ಞಾನವು ಸುಮಾರು 6 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಮೊದಲ ಬಾರಿಗೆ ಪ್ರಾರಂಭವಾಯಿತು. ಕಳೆದ ಆರು ವರ್ಷಗಳಿಂದ ರಚನಾತ್ಮಕ ಹೃದಯ ಕಾಯಿಲೆ ಚಿಕಿತ್ಸೆಯಲ್ಲಿ ಪ್ರವರ್ತಕ (pioneering) ವಹಿಸಿದ್ದು ಇಂಡಿಯಾನಾ ಆಸ್ಪತ್ರೆ, ಇಂದು ಕರಾವಳಿ ಕರ್ನಾಟಕ, ಉತ್ತರ ಮಲಬಾರ್ ಮತ್ತು ಮಲೆನಾಡು ಪ್ರದೇಶಕ್ಕೆ ಸೇವೆ ಸಲ್ಲಿಸುವ ಪ್ರದೇಶದ ಮೊದಲ ಮೀಸಲಾದ (dedicated) ರಚನಾತ್ಮಕ ಹೃದಯ ಕಾರ್ಯಕ್ರಮವನ್ನು ಪ್ರಾರಂಭಿಸಿದ ಆರನೇ ವಾರ್ಷಿಕೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದೆ ಎಂದು ತಿಳಿಸಿದರು .
ಇನ್ನು ಹೃದಯ ಕಾಯಿಲೆಯನ್ನು ತಡೆಗಟ್ಟುವಿಕೆಯ ಮಹತ್ವವನ್ನು ವಿವರಿಸುತ್ತಾ “ಶೇಕಡಾ 80 ರಷ್ಟು ಅಕಾಲಿಕ ಹೃದಯ ಸಂಬಂಧಿ ಸಾವುಗಳನ್ನು ಆರಂಭಿಕ ತಪಾಸಣೆ, ಕೈಗೆಟುಕುವ ಆರೈಕೆ, ಹೊಸ ಯುಗದ ತಂತ್ರಜ್ಞಾನದ ಅಳವಡಿಕೆ ಮತ್ತು ದೈಹಿಕವಾಗಿ ಸಕ್ರಿಯವಾಗಿರುವುದರ ಮೂಲಕ ತಡೆಗಟ್ಟಬಹುದು. ಇಂಡಿಯಾನಾ ಆಸ್ಪತ್ರೆಯು ರಚನಾತ್ಮಕ ಹೃದಯ ಕಾಯಿಲೆಗಳಿಗೆ ಇತ್ತೀಚಿನ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ, ಅವು ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಿದೆ ಎಂದು ತಿಳಿಸಿದರು .ಡಾ. ಕುಂಬ್ಳೆ ಅವರ ನೇತೃತ್ವದಲ್ಲಿ ನಡೆಸಲಾದ ಈ ಮಹತ್ವದ ಕಾರ್ಯವಿಧಾನಗಳು, ಈ ಪ್ರದೇಶದ ಮೊದಲ TAVR/TMVR ಕೇಂದ್ರವಾಗಿ ಇಂಡಿಯಾನಾದ ತಾಂತ್ರಿಕ ಶ್ರೇಷ್ಠತೆ ಮತ್ತು ವೈದ್ಯಕೀಯ ನಾಯಕತ್ವವನ್ನು ಒತ್ತಿಹೇಳುವುದಲ್ಲದೆ, ಅದರ ರೋಗಿ-ಮೊದಲು (patient-first) ತತ್ವಶಾಸ್ತ್ರವನ್ನೂ ಪ್ರತಿಬಿಂಬಿಸುತ್ತದೆ. ಒಂದು ಕಾಲದಲ್ಲಿ ಸೀಮಿತ ಅಥವಾ ಯಾವುದೇ ಆಯ್ಕೆಗಳಿಲ್ಲದ ವ್ಯಕ್ತಿಗಳಿಗೆ ಅತ್ಯಾಧುನಿಕ ಹೃದಯ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನೀಡುವ ನೈಪುಣ್ಯತೆಯನ್ನು ಹೊಂದಿದೆ.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ ಅಲಿ ಕುಂಬ್ಳೆ , ಗ್ರೂಪ್ ಸಿ . ಇ . ಓ ವಿಜಯ್ ಚಂದ್ರ ಇ , ಡಾ ಆದಿತ್ಯ ಭಾರತದ್ವಾಜ್ ಉಪಸ್ಥಿತತರಿದ್ದರು .