ಗಾಂಧೀಜಿಯವರ ತತ್ವ, ಆದರ್ಶ ಮನುಷ್ಯನಲ್ಲಿ ಮುಖ್ಯವಾಗಿ ಬೇಕು ; ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಮಂಗಳೂರು ಮಹಾನಗರ ಪಾಲಿಕೆ , ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ , ಭಾರತ ಸೇವಾದಳದ ನೇತ್ರಿತ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬ ಗಾಂಧಿ ಜಯಂತಿಯನ್ನು ನಗರದ ರಾಜಾಜಿ ಪಾರ್ಕ್ನನಲ್ಲಿ ಗಣ್ಯರ ಸಮ್ಮುಖದಲ್ಲಿ ಆಚರಿಸಲಾಯಿತು .

ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ನೆರವೇರಿಸಿ ಮಾತನಾಡಿ,

ಗಾಂಧೀಜಿಯವರ ತತ್ವ, ಆದರ್ಶ ,ಸತ್ಯದ ನಡಿಗೆ ಮನುಷ್ಯನಲ್ಲಿ ಮುಖ್ಯವಾಗಿ ಬೇಕಾಗುತ್ತದೆ.ಅದನ್ನು ಅನುಸರಿಸಿಕೊಂಡು ನಡೆಯಬೇಕು . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾತ್ಮರು ಬಿತ್ತಿದ ಶಾಂತಿಯ ಬೀಜದ ಪಸಲು ಇಂದಿಗೂ ಇಲ್ಲಿ ಕಾಣಬಹುದು . ವಿದ್ಯಾರ್ಥಿಗಳಿಗೆ ಗಾಂಧಿ ತತ್ವ ಮತ್ತು ಆದರ್ಶಗಳು ಮುಖ್ಯವಾಗಿ ತಿಳಿಯಬೇಕ್ಕೇನುವ ದೃಷ್ಟಿ ಕೋನದಿಂದ ಸರಕಾರ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ . ಇದರಿಂದ ವಿದ್ಯಾರ್ಥಿಗಳು ಗಾಂಧಿ ತತ್ವಗಳ ಕುರಿತು ಅರಿತು ಕೊಳ್ಳಲು ಉತ್ಸಾಹಿಗಳಾಗಿರುತ್ತಾರೆ . ಅವರ ಆದರ್ಶಗಳು ಮಕ್ಕಳ ಮೇಲೆ ಪ್ರಭಾವನ್ನು ಬೀರುತ್ತದೆ .

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಾಯಕ್ ಕಾರ್ಬಾರಿ , ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ , ಎಸ್ ಪಿ ಅರುಣ್ ಕೆ., ವೆನ್ಲಾಕ್ ಡಿಎಂಒ ಡಾ. ಶಿವಪ್ರಕಾಶ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಕಾಪಿಕಾಡ್, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿಎಂ ಶಹೀದ್, ಭಾರತ್ ಸೇವಾದಳ ಕಾರ್ಯದರ್ಶಿ ಟಿ.ಕೆ. ಸುಧೀರ್, ವಾರ್ತಾಧಿಕಾರಿ ಬಿಎ ಖಾದರ್ ಶಾ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!