ಕುಂಬಳೆ : ರೈಲ್ವೆ ಹಳಿಯಲ್ಲಿ ಯುವಕನೊರ್ವನ ಮೃತದೇಹ ರೈಲಿಗೆ ತಲೆ ಒಡ್ಡಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಮೃತ ವ್ಯಕ್ತಿ ಪೆರ್ಲದಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಟುಕುಕ್ಕೆ ಸಮೀಪ ಸೂರ್ಡೇಲು ನಿವಾಸಿ ದಿ.ಶೀನಪ್ಪ ರೈಗಳ ಪುತ್ರ ತಾರನಾಥ ರೈ (46) ಎಂದು ಗುರುತಿಸಲಾಗಿದೆ.
ಈ ಹಿಂದೆ ಪೆರ್ಲದಲ್ಲಿ ಬಾಡಿಗೆ ವಾಹನ ಚಲಾಯಿಸುತ್ತಿದ್ದ ಇವರು ಇದೀಗ ಸ್ವಲ್ಪ ಸಮಯಗಳ ಹಿಂದೆ ತನ್ನ ವಾಹನಗಳನ್ನು ಮಾರಿದ್ದು ಬಳಿಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರೆಂದು ತಿಳಿದು ಬಂದಿದೆ. ನಿನ್ನೆ ಮಧ್ಯಾಹ್ನ ಮೇಲೆ ಪೆರ್ಲದಿ೦ದ ಕುಂಬಳೆಗೆ ತೆರಳಿದ್ದರು. ಮೃತರು ತಾಯಿ ಲೀಲಾವತಿ, ಪತ್ನಿ ಸುಜಾತ ಇಬ್ಬರು ಹೆಣ್ಮಕ್ಕಳು, ಸಹೋದರ ಹರಿ ಪ್ರಸಾದ್, ಸಹೋದರಿ ರಂಜಿನಿ ಎಂಬಿವರನ್ನಗಲಿದ್ದಾರೆ. ಕುಂಬಳೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.