ಮಂಗಳೂರು: ಕರ್ನಾಟಕ ಸರಕಾರದ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರ ನೇತೃತ್ವದಲ್ಲಿ ಕಳೆದ 10 ವರ್ಷಗಳಿಂದ ಸರ್ವಧರ್ಮಗಳ ಭಾವೈಕ್ಯತೆಯ ಸಂಗಮವಾದ ದೀಪಾವಳಿ , ಕ್ರಿಸ್ಮಸ್ ಹಬ್ಬ ಹಾಗೂ ರಂಜಾನ್ ಹಬ್ಬಗಳನ್ನು ಸರ್ವಧರ್ಮಿಯರ ಜೊತೆಗೆ ಸೇರಿ ಆಚರಿಸುತ್ತ ಬಂದಿದ್ದು , ಇದೀಗ 11ನೇ ವರ್ಷದ ದೀಪಾವಳಿ ಸಂಭ್ರಮಾಚರಣೆ ಮತ್ತು ಗೂಡುದೀಪ ಸ್ಪರ್ಧೆಯು ಅಕ್ಟೋಬರ್ 20 ರಂದು ನರಕಚತುರ್ದಶಿ ದಿನದಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಸಭಾಭವನದಲ್ಲಿ ಸಂಜೆ ಗಂಟೆ 3:00ರಿಂದ ರಾತ್ರಿಯವರೆಗೆ ನಡೆಯಲಿದೆ ಎಂದು ಸಮಿತಿಯ ಸದಸ್ಯರಾದ ಜೆ. ನಾಗೇಂದ್ರ ಕುಮಾರ್ ತಿಳಿಸಿದರು .
ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು , ದೀಪಾವಳಿ ಹಬ್ಬದ ಅಚರಣೆಯ ಪ್ರಯುಕ್ತ, ಜಾನಪದ ನೃತ್ಯ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಗೂಡುದೀಪ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ .ಸಂಜೆ 3:30ಕ್ಕೆ ದೀಪಾವಳಿ ಸಂಭ್ರಮಾಚರಣೆಯ ಭಾವೈಕ್ಯತೆಯ ಸಂಗಮದ ಸಭಾ ಕಾರ್ಯಕ್ರಮ ಉದ್ಘಾಟಕರಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಅನಂತಪದ್ಮನಾಭ ಅಸ್ರಣ್ಣನವರು ಹಾಗೂ ಇತರ ಸಾಮಾಜಿಕ ನೇತಾರರು, ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಇನ್ನಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜಾನಪದ ನೃತ್ಯ ಸ್ಪರ್ಧೆಯನ್ನು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ 15 ವರ್ಷಗಳ ಮೇಲ್ಪಟ್ಟ ಎಲ್ಲಾ ತಂಡಗಳಿಗೆ ಸ್ಪರ್ಧಿಸುವ ಅವಕಾಶವಿರುತ್ತದೆ. ಇದೇ ತಿಂಗಳ 18ರೊಳಗೆ ತಮ್ಮ ತಂಡದ ಹೆಸರುಗಳನ್ನು ನೊಂದಾಯಿಸಬೇಕೆಂದು ತಿಳಿಸಿದರು .ಚಿತ್ರಕಲಾ ಸ್ಪರ್ಧೆಯು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಭಾಗವಹಿಸುವ ಅವಕಾಶವಿರುತ್ತದೆ. ನೊಂದಾವಣೆ ಅದೇ ದಿನ ಮದ್ಯಾಹ್ನ 1:30 ರ ಅವಕಾಶ ಇರಲಿದೆ .ದೀಪಾವಳಿಯ ಸಂಭ್ರಮದ ಗೂಡುದೀಪ ಸ್ಪರ್ಧೆಯು ಸಂಜೆ ಗಂಟೆ 5:30ಕ್ಕೆ ಪ್ರಾರಂಭವಾಗುವುದು ಹಾಗೂ ಬಂದಂತಹ ಎಲ್ಲಾ ಗೂಡುದೀಪ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದದೆಂದು ತಿಳಿಸಿದರು ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ , ದ್ವಿತೀಯ , ತೃತೀಯಾ ನಗದು ಬಹುಮಾನವನ್ನು ವಿತರಿಸಲಾಗುವುದೆಂದು ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಟಿ.ಡಿ.ವಿಕಾಸ್ ಶೆಟ್ಟಿ, ಕೆ. ಭಾಸ್ಕರ್ ರಾವ್, ಜಿ. ಆನಂದ್ ಸೋನ್ಸ್, ಸತೀಷ್ ಪೆಂಗಲ್, ಇಮ್ರಾನ್ ಕುದ್ರೋಳಿ, ಪ್ರಗತಿ ಬೇಕಲ್ ಉಪಸ್ಥಿತತರಿದ್ದರು .