ವಿಶ್ವಕರ್ಮ ಸಂತ್ರಸ್ತೆಯ ಹೆಣ್ಣು ಮಗಳ ಪರವಾಗಿ ಧ್ವನಿ ಎತ್ತಿದ ವಿಶ್ವಕರ್ಮ ಯುವ ಮಿಲನ್ ಸಂಘ

ಮಂಗಳೂರು: ವಿಶ್ವ ಕರ್ಮ ಸಮಾಜದ ಹೆಣ್ಣುಮಗಳಿಗಾದ ಅನ್ಯಾಯವನ್ನು ಖಂಡಿಸುತ್ತೇನೆ , ಕಾನೂನಿನ ನಿರ್ಣಯ ಜಾರಿಗೆ ಬಂದ ಕೂಡಲೇ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು , ಸಂತ್ರಸ್ತೆಯ ಹೆಣ್ಣು ಮಗಳ ಪರವಾಗಿ ನಾವಿದ್ದೇವೆ ಎಂದು ವಿಶ್ವಕರ್ಮ ಯುವ ಮಿಲನ್ ಸ್ಥಾಪಕಾಧ್ಯಕ್ಷ ವಿಕ್ರಮ್ ಐ ಆಚಾರ್ಯ ತಿಳಿಸಿದರು.

ಜಗನ್ನಿವಾಸ ರಾವ್ ಮನವೊಲಿಸಿ ಅವರ ಮಗ ಕೃಷ್ಣ ಜಿ ರಾವ್ ನ ವಿವಾಹಕ್ಕಾಗಿ ಪ್ರಯತ್ನವನ್ನು ಮಾಡುವ ಪ್ರಯತ್ನಗಳು ನಡೆದಿದೆ . ಮುಂದೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಮೂಲಕ ಜಗನ್ನಿವಾಸ ರಾವ್ ಅವರ ಮನವನ್ನು ಒಲಿಸುವ ಪ್ರಯತ್ನನವನ್ನು ಮಾಡಲಾಗುವುದು. ಒಂದು ವೇಳೆ ವಿವಾಹ ಮಾಡಿಸಲು ಹಿಂದೇಟು ಹಾಕಿದರೆ , ಸಾವಿರಾರು ಸಂಖ್ಯೆಯಲ್ಲಿ ನಮ್ಮ ಸಮುದಾಯದವರನ್ನು ಒಗ್ಗೂಡಿಸಿಕೊಂಡು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಕೈಗೊಳ್ಳುವುದಾಗಿ ಎಚ್ಚರಿಸಿದರು . ಪ್ರಕರಣ ಇನ್ನು ಕೋರ್ಟ್ ನಲ್ಲಿದ್ದು ತೀರ್ಮಾನ ಬಂದ ಕೂಡಲೇ ಮುಂದಿನ ಕ್ರಮವನ್ನು ಕೈಗೊಳಲಾಗುವುದು ತಿಳಿಸಿದರು. ಒಂದು ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆಸರಿಯಾದ ನ್ಯಾಯ ಸಿಗದೇ ಹೋದಲ್ಲಿ ನಾವು ಶಿಲ್ಪ ಮೂರ್ತಿಯನ್ನು ಕೆತ್ತುವುದನ್ನು ನಿಲ್ಲಿಸುತ್ತೇವೆ. ಇಂದರಿಂದ ದೇವಾಲಯಗಳಲ್ಲಿ ದೇವರ ಪೇಪರ್ ಫೋಟೋ ಇಟ್ಟು ಪೂಜೆ ಮಾಡುವ ಪರಿಸ್ಥಿತಿ ಮುಂದೆ ಬರಲೂ ಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯರಾದ ಲೋಕೇಶ್ ಆಚಾರ್ಯ , ನವೀನ್ ಆಚಾರ್ಯ , ಶೇಖರ್ ಆಚಾರ್ಯ ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!