ಓಟ್ ಚೋರ ಬಿಜೆಪಿಗೆ ವಿಗ್ರಹ ಚೋರ ಸಿಪಿಎಂ ಸಾಥ್- ಕಾಂಗ್ರೆಸ್ ಆರೋಪ.

ಮತದಾರ ಯಾದಿಯಲ್ಲಿ ಕ್ರಿಮಿನಲ್ ಸ್ವಭಾವದ ಹಸ್ತಕ್ಷೇಪ ನಡೆಸಿ ಅಧಿಕಾರಕ್ಕೇರಿದ ಬಿಜೆಪಿಗೆ ಕೇರಳದ ಶಬರಿಮಲೆ ಕ್ಷೇತ್ರದಲ್ಲಿ ಸ್ವರ್ಣ ಕವಾಟಗಳ ಕಳ್ಳತನದಲ್ಲಿ ಜವಾಬ್ದಾರಿಕೆಯಿರುವ ಸರಕಾರವು ಕೈ ಜೋಡಿಸಿರುವುದಾಗಿ ಅನುಮಾನಗಳಿವೆ. ಉಗಾಂಡಾದ ಯಾವುದೋ ಕುಗ್ರಾಮದಲ್ಲಿ ಎರಡು ದಿನ ನಳ್ಳಿ ನೀರು ಬರದಿದ್ದರೆ ಮೂರನೇ ದಿನ ದೆಹಲಿಯ ಉಗಾಂಡಾ ರಾಯಭಾರ ಕಚೇರಿಯ ಮುಂಭಾಗ ಹೋರಾಟ ನಡೆಸುವ ಸಿಪಿಎಂ ಈ ಓಟ್ ಕಳ್ಳತನದ ಬಗ್ಗೆ ಚಕಾರವೆತ್ತಿಲ್ಲ. ಅದೇ ರೀತಿ ಭಾರತದ ಅತ್ಯಂತ ಪವಿತ್ರ ಆರಾಧನಾ ಕೇಂದ್ರವಾಗಿರುವ ಶಬರಿಮಲೆ ಕ್ಷೇತ್ರದ ಬಾಗಿಲು, ಗೋಡೆಗಳ ಸ್ವರ್ಣ ಚೋರತನಕ್ಕೆ ನೈತಿಕ ಹೊಣೆಗಾರಿಕೆಯಿರುವ ಸಿಪಿಎಂ ಬಗ್ಗೆ ಬಿಜೆಪಿಗೂ ಯಾವುದೇ ಆಕ್ಷೇಪಗಳಿರುವುದು ಗೋಚರಿಸುತ್ತಿಲ್ಲ.

ಪವಿತ್ರ ಕ್ಸೇತ್ರಕ್ಕೆ ಕನ್ನ ಕೊರೆದ ಅಧಿಕಾರ ವಲಯದಲ್ಲಿರುವ ಹೆಗ್ಗಣಗಳ ವಿರುದ್ಧ ಕಾಂಗ್ರೆಸ್ ನೇರ ಹೋರಾಟಕ್ಕಿಳಿಯಲಿದೆ. ಅದೇ ರೀತಿ ಓಟ್ ಚೋರಿಗೆದುರಾಗಿ ಕಲ್ಲಿಕೋಟೆಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಂಗಮ ನಡೆಸಲಿದ್ದು, ದೇಶದ ವಿಪಕ್ಷ ನಾಯಕ ಶ್ರೀ ರಾಹುಲ್ ಗಾಂಧಿಯವರು ಭಾಗವಹಿಸಲಿದ್ದಾರೆ. ಈ ಹೋರಾಟಗಳಲ್ಲಿ ಮಂಜೇಶ್ವರದ ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯರಾಗಿ ಭಾಗವಹಿಸಲಿದ್ದಾರೆ ಎಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಹಾಗೂ ರಾಜ್ಯ ಸೇವಾದಳ ಚೆಯರ್ ಮ್ಯಾನ್ ಶ್ರೀ ರಮೇಶನ್ ಕರುವಾಚೇರಿ ಹೇಳಿದ್ದಾರೆ.


ಹೊಸಂಗಡಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ನೇತಾರರಾದ ಎಂ.ಸಿ.ಪ್ರಭಾಕರನ್, ಸೋಮಶೇಖರ್ ಜೆ.ಎಸ್, ಶಾಂತಾ ಆರ್. ನಾಯ್ಕ್, ಗೀತಾ ಬಂದ್ಯೋಡು, ಅರ್ಜುನನ್ ತಾಯಲಂಗಾಡಿ, ಹನೀಫ್ ಪಡಿಂಞಾರ್, ಬಾಬು ಬಂದ್ಯೋಡು, ಪುರುಷೋತ್ತಮ ಅರಿಬೈಲ್, ದಾಮೋದರ ಮಾಸ್ಟರ್, ನಾಗೇಶ್ ಮಂಜೇಶ್ವರ, ಝಕರಿಯಾ ಶಾಲಿಮಾರ್, ಮೊಹಮ್ಮದ್ ಮಜಾಲ್, ಫಾರೂಕ್ ಶಿರಿಯ, ಸತ್ಯನ್ ಸಿ.ಉಪ್ಪಳ, ಅಹ್ಮದ್ ಮನ್ಸೂರ್, ಗುರುವಪ್ಪ ಮಂಜೇಶ್ವರ, ಬರ್ನಾರ್ಡ್ ಡಿ ಅಲ್ಮೇಡಾ, ವಸಂತರಾಜ್ ಶೆಟ್ಟಿ, ಸೀತಾ ಡಿ, ಮೊಹಮ್ಮದ್ ಜೆ, ರಂಜಿತ್ ಮಂಜೇಶ್ವರ, ಹುಸೈನ್ ಕುಬಣೂರ್, ಕೆ ಎಸ್ ಗಂಗಾಧರ್, ಬಾಸಿತ್ ತಲೆಕ್ಕಿ, ರಾಜೇಶ್ ನಾಯ್ಕ್ ಹೇರೂರು, ಇರ್ಷಾದ್ ಮಂಜೇಶ್ವರ, ಶಾಫಿ ತಲೆಕಳ, ಬಾಲಕೃಷ್ಣ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.ಶ್ರೀ ದಿವಾಕರ್ ಎಸ್ ಜೆ ಸ್ವಾಗತಿಸಿ, ಶ್ರೀ ಗಣೇಶ್ ಪಾವೂರು ವಂದಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!