ಕೋಟೆ ಮನೆ ವೆಂಕಟರಮಣ ಆಚಾರ್ಯರವರ ಶತ ಸಂಭ್ರಮ

ಮಂಜೇಶ್ವರ : ಮಂಜೇಶ್ವರ ಹೊಸಂಗಡಿಯ ಹೆಸರಾಂತ ಕಾಸ್ಟ ಶಿಲ್ಪಿ ಕೋಟೆ ಮನೆ ವೆಂಕಟರಮಣ ಆಚಾರ್ಯರವರ 100 ನೇ ಹುಟ್ಟುಹಬ್ಬವನ್ನು ಇತ್ತೀಚಿಗೆ ಸಂಭ್ರಮದಿಂದ ಆಚರಿಸಲಾಯಿತು.

ಹಲವು ವರ್ಷಗಳಿಂದ ಶ್ರೀ ಮತ್ ಅನಂತೇಶ್ವರ ದೇವಸ್ಥಾನದ ಬಳಿಯಿರುವ ಕಟ್ಟಡದಲ್ಲಿ ಮರದ ಕೆಲಸವನ್ನು ನಿರ್ವಹಿಸುತ್ತಿರುವ ಇವರು 5 ನೇ ತರಗತಿ ಪೂರೈಸಿದ ಬಳಿಕ ತಂದೆಯ ಕೆಲಸವನ್ನು ಮುಂದುವರಿಸಿದ್ದರು.


1951 ರಲ್ಲಿ ಶಾರದಾ ರವರನ್ನು ವಿವಾಹವಾಗಿ ಇಬ್ಬರು ಗಂಡು ಮಕ್ಕಳು ಮತ್ತು ಐವರು ಹೆಣ್ಣುಮಕ್ಕಳಿರುವ ಸಂತೃಪ್ತ ಕುಟುಂಬ ಇವರದ್ದು
ಹಿರಿಯ ಪುತ್ರ ಹರಿಶ್ಚಂದ್ರ ಆಚಾರ್ಯ ಹೆಸರಾಂತ ನಾಟಕ ಕಲಾಗಾರರಾಗಿದ್ದರೆ.

ವೆಂಕಟ್ರಮಣ ಆಚಾರ್ಯರ ಶತ ಸಂಭ್ರಮವನ್ನು ಕುಟುಂಬಸ್ಥರು,ಸಮಾಜ ಬಾಂದವರು ಸೇರಿ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಸಂಭ್ರಮದಿನದ ಆಚರಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!