ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ಥಿ -ಕೂಡಲೇ ಸಂಚಾರ ಯೋಗ್ಯ ಮಾಡಲು ಬಿಜೆಪಿ ಅಗ್ರಹ

ಮಂಜೇಶ್ವರ: ಸಜಂಕಿಲ -ಬಾಯರ್ ರಸ್ತೆ, ಕುರುಡಪದವು ಲಾಲ್ ಬಾಗ್ ರಸ್ತೆ, ಹೊಸಂಗಡಿ- ಮಜೀಬೈಲ್ ಕಂಗುಮೆ ರಸ್ತೆ ವರ್ಕಾಡಿ ದೈಗೋಳಿ, ಗುವೇದಪಡ್ಪುರಸ್ತೆ ಮಂಜೇಶ್ವರ ಕೆದುoಬಾಡಿ ರಸ್ತೆ ಗಳನ್ನು ಸಂಚಾರ ಯೋಗ್ಯಗೊಳಿಸಬೇಕು, ಮತ್ತು ಕಾಮಗಾರಿ ಕೂಡಲೇ ಪೂರ್ಣ ಮಾಡಬೇಕೆಂದು ಬಿಜೆಪಿ ಮಂಡಲ ಸಮಿತಿ ಅಗ್ರಹಿಸಿದೆ.

ಮಂಜೇಶ್ವರ ಶಾಸಕರ ಹಾಗೂ ಲೋಕಪಯೋಗಿ ಇಲಾಖೆಯ ಬೇಜವಾಬ್ದಾರಿ ಮತ್ತು ಸ್ಥಳೀಯ ಪಂಚಾಯತ್ ಆಡಳಿತದ ನಿಕ್ರಿಯತೆ ಇದಕೆಲ್ಲ ಕಾರಣ.ಜನರ ಸಮಸ್ಯೆಗೆ ಪರಿಹಾರ ಕಾಣದ ಶಾಸಕರು ವಿದೇಶ ಸುತ್ತುವುದು ಬಿಟ್ಟು ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಗ್ರಹಿಸಿದ್ದಾರೆ.


ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆ ಕೇಂದ್ರ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ತಮ್ಮ ಸಾಧನೆ ಎಂಬಾತೆ ಬಿಂಬಿಸುದನ್ನು ಬಿಟ್ಟು ತಮ್ಮ ಇಲಾಖೆಯ ರಸ್ತೆಗಳನ್ನ ದುರಸ್ಥಿ ಮಾಡಲಿ ಎಂದು ಆದರ್ಶ ಬಿ ಎಮ್ ಹೇಳಿದರು. ಬಾಯರ್ ಧರ್ಮತಡ್ಕ ರಸ್ತೆ ದುರಸ್ತಿಯ ಹೆಸರಲ್ಲಿ ನಾಶ ಮಾಡಲಾಗಿದೆ, ಕುರುಡಪದವು ರಸ್ತೆ ಅವೈಜ್ಞಾನಿಕ ವಾಗಿದೆ.


ಹೊಸಂಗಡಿ ಮಜೀಬೈಲ್ ಕಂಗುಮೆ ಎಂಬಲ್ಲಿ ರಸ್ತೆ ಅರ್ಥಭಾಗ ನಾಶ ಆಗಿ 4 ತಿಂಗಳು ಕಳೆದರು ಲೋಕೋಪಯೋಗಿ ಇಲಾಖೆ ಕನಿಷ್ಠ ದುರಸ್ತಿಯನ್ನು ಆರಂಭಿಸದೆ ಇರುವುದು ಖಂಡನೀಯ.ಕೂಡಲೇ ಎಲ್ಲಾ ರಸ್ತೆಗಳನ್ನುವೈಜ್ಞಾನಿಕ ವಾಗಿ ಮರು ಡಮಾರಿಕಾರಣ ಗೊಳಿಸಬೇಕು, ಅಗತ್ಯ ವಿದ್ದ ಎಲ್ಲಾ ಕಡೆ ದುರಸ್ಥಿ ಕೂಡಲೇ ಮುಗಿಸದಿದ್ದರೆ ಜನರ ಅಗ್ರಹ ದಂತೆ ಬಿಜೆಪಿ ಹೊರಟ ಮಾಡಲಿದೆ ಎಂದು ಮಂಡಲ ಅಧ್ಯಕ್ಷರು ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!