ಕೇರಳ ಪಿನರಾಯಿ ಸರಕಾರ ರಾಜ್ಯ ದಲ್ಲಿ ಮಲಯಾಳಂ ಭಾಷಾ ಕಲಿಕೆಯನ್ನು ಕಡ್ಡಾಯ ಮಾಡಿದ್ದು, ಮಸೂದೆಯನ್ನು ಜಾರಿ ಮಾಡಿದೆ ಇದು ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ರ ಸಂವಿದಾನಿಕ ಹಕ್ಕಿನ ಮೇಲಿನ ದಬ್ಬಾಳಿಕೆ. ರಾಜ್ಯ ಸರಕಾರ ವಿಧಾನ ಸಭಾದಲ್ಲಿ ಮಸೂದೆ ಪಾಸ್ ಮಾಡುವಾಗ ಅದರ ವಿರುದ್ಧ ಹೊರಟ ನಡೆಸದ ಮಂಜೇಶ್ವರ ಹಾಗೂ ಕಾಸರಗೋಡು ಶಾಸಕರ ಮೌನ ಬೇಜವಾಬ್ದಾರತನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಶಾಸಕರ ಹಾಗೂ ಸರಕಾರದ ಕ್ರಮವನ್ನು ಖಂಡಿಸಿದರು.
ಮಲಯಾಳಂ ಕಡ್ಡಾಯ ಗೊಳಿಸುವುದು ಎಡರಂಗದ ರಾಜಕೀಯ ಉದ್ದೇಶವಾಗಿದ್ದರೆ ಜಿಲ್ಲೆಯಲ್ಲಿ ಕಮ್ಯುನಿಸಮ್ ನ್ನು ಕನ್ನಡಿಗರು ನಾಶ ಮಾಡಬೇಕೆಂದು ಆದರ್ಶ ಬಿ ಎಂ ಅಗ್ರಹಿಸಿದರು. ಸರಕಾರದ ಈ ಕ್ರಮವನ್ನು ಬಿಜೆಪಿ ರಾಜಕೀಯವಾಗಿ ಎದುರಿಸಲಿದೆ ಎಂದು ಹೇಳಿದರು