ಕಾಸರಗೋಡು : ಮುಂಬರುವ ತ್ರಿಸ್ತರ ಪಂಚಾಯತಿ ಚುನಾವಣೆಯಲ್ಲಿ ಯುವ ಸಮೂಹಕ್ಕೆ ಆದ್ಯತೆ ನೀಡಿ ಪಕ್ಷದ ಪುನರ್ ಸಂಘಟನೆ ಮಾಡಿ ಎಲ್ಲಾ ಕಡೆ ಗೆಲುವಿನ ನಗೆ ಬೀರಲು ಕಾಂಗ್ರೆಸ್ ಪಕ್ಷ ಪ್ರತ್ಯೇಕ ಕಾರ್ಯಯೋಜನೆಯನ್ನು ಮಾಡಿದೆ.
ತಳಮಟ್ಟದಿಂದಲೇ ಪಕ್ಷವನ್ನು ಪುನರ್ ಸಂಘಟಿಸಿ ಚುನಾವಣೆ ಎದುರಿಸಲು ಪ್ರದೇಶ್ ಕಾಂಗ್ರೆಸ್ ಸಮಿತಿಯ ನೂತನ ಸಮಿತಿ ನಿರ್ಧರಿಸಿದೆ. ಇದರ ಅಂಗವಾಗಿ ಕೆಪಿಸಿಸಿಯ ಉಪಾಧ್ಯಕ್ಷರು ಸಹಿತ ವಿವಿಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೂತನ ನೇಮಕಾತಿ ಮಾಡುವ ಬಗ್ಗೆ ಪಕ್ಷ ಚಿಂತಿಸಿದೆ.
ಕಾಸರಗೋಡು ಸಹಿತ ಎಂಟು ಜಿಲ್ಲೆಗಳಲ್ಲಿ ಪಕ್ಷ ತೀರಾ ದುರ್ಬಲ ವೆಂದು ಎಐಸಿಸಿ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಗೆಲುಸಾದಿಸಲು ವಿಶೇಷ ಯೋಜನೆ ರೂಪಿಸಲು ಪಕ್ಷ ನಿರ್ಧರಿಸಿದೆ. ಇದನ್ನು ಕಾರ್ಯಗತಗೊಳಿಸಲು ಚಿಂತನೆ ನಡೆಸಿದೆ.