ಬಸವ ಅಕ್ಯು ಅಕಾಡೆಮಿ ವತಿಯಿಂದ ಅಕ್ಟೋಬರ್ 16 ರಂದು ಔಷಧಿ ರಹಿತ ಉಚಿತ ಅರೋಗ್ಯ ಶಿಬಿರ

ಮಂಗಳೂರು: ಬಸವ ಅಕ್ಯು ಅಕಾಡೆಮಿ ವತಿಯಿಂದ ಅಕ್ಟೋಬರ್ 16 ರಂದು ಔಷಧಿ ರಹಿತ ಉಚಿತ ಅರೋಗ್ಯ ಶಿಬಿರವು ಉಡುಪಿ , ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಯ ಚಿಕಿತ್ಸಕರ ಸಹಭಾಗಿತ್ವದಲ್ಲಿ ಬಸವ ಅಕ್ಯು ಅಕಾಡೆಮಿ ಸಂಸ್ಥಾಪಕರಾದ ಡಾ. ಬಸವರಾಜ್ ಕೆ ಮಾರ್ಗದರ್ಶನದಲ್ಲಿ ಸರ್ವ ಮಂಗಳ ಸಭಾಭವನ ಗರೋಡಿಯಲ್ಲಿ ನಡೆಯಲಿದೆ ಎಂದು ಆಶಾ ಜಗದೀಶ್ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಲರ್ ಥೆರಪಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬುದಾಗಿ ಡಾ. ಬಸವರಾಜ್ ಕೆ ಅವರು ಕಾಣಿಸಿಕೊಟ್ಟಿದ್ದಾರೆ . ಈ ಶಿಬಿರವು ದೀರ್ಘ ಕಾಲದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳ ಆರೋಗ್ಯ ಸುಧಾರಣೆಗೆ ಸಹಕಾರಿ ಆಗಲಿದೆ. ಆರೋಗ್ಯ ಸುಧಾರಣೆಗೆ ಕೇವಲ ಔಷಧಿ ಮಾತ್ರ ಮುಖ್ಯ ಅಲ್ಲ ಅದರ ಜೊತೆಗೆ ಪ್ರಾಕೃತಿಕ ಚಿಕಿತ್ಸಾ ವಿಧಾನವು ಅರೋಗ್ಯದ ಸುಧಾರಣೆಗೆ ಸಹಕಾರಿ ಆಗಲಿದೆ ಎಂದರು .

ಈಗಾಗಲೇ ಈ ಕಲರ್ ಥೆರಪಿಯಿಂದ ಸಾವಿರಾರು ಸಂಖ್ಯೆಯಲ್ಲಿರೋಗಿಗಳು ಗುಣಮುಖರಾಗಿದ್ದು ಅಂಥವರಲ್ಲಿ ಮಂದಾಸವನ್ನು ಮೂಡಿಸಿದೆ. ಸಾರ್ವಜನಿಕರು ಔಷಧಿ ರಹಿತ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಿದರು .ಪತ್ರಿಕಾಗೋಷ್ಟಿಯಲ್ಲಿ ಸುರೇಶ್, ಸುಧಾ ಪ್ರಹ್ಲಾದ್, ವಿಶ್ವನಾಥ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!