ಮನೆ ಮೇಲೆ ಬೃಹತ್ ಗಾತ್ರದ ತೆಂಗಿನ ಮರ ಬಿದ್ದು ಹಾನಿ: ಸ್ಥಳಕ್ಕೆ ಶಾಸಕರ ಭೇಟಿ .

ಸುರತ್ಕಲ್ ಸಮೀಪದ ಕುಚಿಗುಡ್ಡೆ ಸಮೀಪ ಮನೆಯೊಂದರ ಮೇಲೆ ಬೃಹತ್ ತೆಂಗಿನ ಮರ ಬಿದ್ದು ಮನೆಯ ಮೇಲ್ಚಾವಣಿ ಎರಡು ಹೋಳಾದ ಘಟನೆ ನಡೆದಿದ್ದು, ಶಾಸಕರಾದ ಡಾ. ಭರತ್ ಶೆಟ್ಟಿ ವೈ ಭೇಟಿ ನೀಡಿ ಹಾನಿಗೀಡಾದ ಮನೆ ಪರಿಶೀಲನೆ ನಡೆಸಿದರು.ಹಾನಿಗೀಡಾದ ಮನೆಗೆ ಭೇಟಿ ನೀಡಿದ ಶಾಸಕರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಪ್ರಕೃತಿ ವಿಕೋಪದಡಿ ಮನೆಯ ಪುನರ್ ನಿರ್ಮಾಣಕ್ಕೆ ಬೇಕಾದ ಪರಿಹಾರ ಒದಗಿಸುವಂತೆ ಸೂಚಿನೆ ನೀಡಿದರು.


ಈ ಸಂದರ್ಭ, ನಿಕಟಪೂರ್ವ ಪಾಲಿಕೆಯ ಸದಸ್ಯೆ ನಯನ ಆರ್ ಕೋಟ್ಯಾನ್, ರಾಘವೇಂದ್ರ ಶೆಣೈ, ದಿನಕರ ಇಡ್ಯಾ,ದಿವೇಶ್ ಪೂಜಾರಿ, ಅನಿಲ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!