ಮಂಗಳೂರು, ಜು. 7: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 41ನೇ ಸೆಂಟ್ರಲ್ ವಾರ್ಡ್ನ ಮಹಾಮ್ಮಾಯ ದೇವಸ್ಥಾನದ ಹಿಂಭಾಗದ ಚರಂಡಿಯ ಉಳಿದ ಕಾಮಗಾರಿ ಹಾಗೂ ಗೌರಿಮಠ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ಥಳೀಯರ ಬಹುಕಾಲದ ಬೇಡಿಕೆಯಂತೆ ₹60 ಲಕ್ಷ ವಿಶೇಷ ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯೆ ಪೂರ್ಣಿಮಾ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ವಾರ್ಡ್ನ ಪ್ರಮುಖರಾದ ಮುರಳೀಧರ್ ನಾಯಕ್, ಪಿ.ಸಿ. ಗುರು, ಚಂದ್ರಕಾಂತ್ ನಾಯಕ್, ಮೋಹಿತ್, ಗಿರೀಶ್ ಕುಮಾರ್, ಪ್ರಮೋದ್ ಆಚಾರ್ಯ, ಗಣಪತಿ ಕಾಮತ್, ಗಣೇಶ್, ರಾಜಕೃಷ್ಣ, ವಿದ್ಯಾ, ಸುಜಿತ್, ಸೂರಜ್, ಭರತ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.


