11 ತಿಂಗಳ ಮಗು ನೀರಿನ ಟಬ್ ಗೆ ಬಿದ್ದು ಸಾವು !

ಬೆಂಗಳೂರು: ಚನ್ನಪಟ್ಟಣ ನಗರದ ಜೀವನ್ ಪುರ ನಗರದಲ್ಲಿ ನೀರಿನ ಟಬ್ ಗೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಬಾಲಕಿಯನ್ನು ಖುಷಿ ಎಂದು ಗುರುತಿಸಲಾಗಿದೆ.


ಚನ್ನಪಟ್ಟಣದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಶಂಷಾದ್ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ ತೀವ್ರ ಬಾಯಾರಿಕೆಯಿಂದ ಪತ್ನಿ ಮುಸ್ಕಾನ್ ಅವರ ಬಳಿ ಕುಡಿಯಲು ನೀರು ಕೇಳಿದ್ದರು. ಪತಿಗಾಗಿ ನೀರು ತರಲು ಮುಸ್ಕಾನ ಅಡುಗೆ ಮನೆಗೆ ತೆರಳಿದ್ದಾಗ, ಮನೆಯೊಳಗೆ ಆಟವಾಡುತ್ತಿದ್ದ ಮಗು ಖುಷಿ ಟಬ್‌ನಲ್ಲಿದ್ದ ನೀರಿನೊಳಗೆ ಬಿದ್ದಿದೆ. ಈ ವೇಳೆ ಮಗು ಪ್ರಜ್ಞೆ ತಪ್ಪಿದ್ದು ಇದನ್ನು ಗಮನಿಸಿದ ಪೋಷಕರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!