ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣದ ಸಮೀಪದ ರಾಗಂ ಜಂಕ್ಷನ್ ಸರ್ವೀಸ್ ರಸ್ತೆಯಲ್ಲಿರುವ ಆಟೋ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕಳೆದ ಕೆಲ ದಿನಗಳಿಂದ ಆಗ್ರಹಿಸುತ್ತಿದ್ದ ಆಟೋ ಚಾಲಕರ ಮನವಿಗೆ ಸ್ಪಂದನೆ ನೀಡುವ ಬದಲು, ಜಿಲ್ಲಾಧಿಕಾರಿಯವರ ಸೂಚನೆಗೆ ವಿರುದ್ಧವಾಗಿ ಅಧಿಕಾರಿಗಳು ಕೆಲಸ ಆರಂಭಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.

nammamedia24x7

ಆಟೋ ಚಾಲಕರ ತಂಡವು ನಿಕಟಪೂರ್ವದಲ್ಲಿ ಮಂಜೇಶ್ವರ ತಾಲೂಕಿನ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಯು ಎಲ್ ಸಿ ಸಿ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

nammamedia24x7

ಆದರೆ ಬುಧವಾರ ಬೆಳಿಗ್ಗೆ ಜಿಲ್ಲಾಧಿಕಾರಿಯವರ ಸ್ಪಷ್ಟ ಆದೇಶವಿಲ್ಲದೇ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳು ಹಾಗೂ ಕಾರ್ಮಿಕರು ಏಕಾಏಕಿ ಸ್ಥಳಕ್ಕೆ ಆಗಮಿಸಿ ಆಟೋ ನಿಲ್ದಾಣ ತೆರವುಗೊಳಿಸುವ ಪ್ರಯತ್ನ ಆರಂಭಿಸಿದರು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

nammamedia24x7

ಆಟೋ ಚಾಲಕರ ಆಕ್ರೋಶಕ್ಕೆ ಸ್ಪಂದನೆ ನೀಡಿದ ಎಐಟಿಯುಸಿ ಕಾರ್ಯಕರ್ತರು ಕೂಡ ಸ್ಥಳಕ್ಕೆ ಧಾವಿಸಿ, ಗುತ್ತಿಗೆದಾರರ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಅವರ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನತೆ ಹಾಗೂ ಆಟೋ ಚಾಲಕರ ಮದ್ದಲೆಯೊಂದಿಗೆ ಪ್ರತಿಭಟನೆ ತೀವ್ರತೆ ಹೊಂದಿತು.

ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸರು ಮಧ್ಯಪ್ರವೇಶ ಮಾಡಿ, ಜಿಲ್ಲಾಧಿಕಾರಿಯವರ ಸ್ಪಷ್ಟ ಸೂಚನೆ ಬರುವವರೆಗೆ ಯಾವುದೇ ಕಾಮಗಾರಿಗೂ ಅವಕಾಶ ನೀಡದಂತೆ ಗುತ್ತಿಗೆದಾರರಿಗೆ ಸೂಚಿಸಿದರು.

nammamedia24x7
ನೇತಾರರಾದ ಅಶ್ರಫ್ ಕುಂಜತ್ತೂರು, ಅಬೂಬಕ್ಕರ್ ಸಿದ್ದೀಖ್, ಕುಂಞ, ಝಕರಿಯ್ಯ, ಇಸಾಕ್ ಹಾಗೂ ಇತರ ಸ್ಥಳೀಯ ನಾಯಕರುಗಳು ಪ್ರತಿಭಟನೆಗೆ ನೇತೃತ್ವ ನೀಡಿದರು. “ಸಾರ್ವಜನಿಕರ ಉಪಯೋಗಕ್ಕೆ ಇರುವ ಆಟೋ ನಿಲ್ದಾಣವನ್ನು ಯಾವುದೇ ರೀತಿಯ ಪರಾಮರ್ಶೆಯಿಲ್ಲದೆ ತೆಗೆದುಹಾಕಲು ನಾವು ಅವಕಾಶ ನೀಡುವುದಿಲ್ಲವೆಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು.

