ಮಂಗಳೂರಿನ ಪತ್ರಿಕಾಭವನದಲ್ಲಿ ‘ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ .

ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಈ ಭಾರಿ ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈ ಯವರ ಸಾಹಿತ್ಯ ಮತ್ತು ಡಿಜಿಟಲ್ ಗ್ರಾಫಿಕ್ಸ್ ನ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಮೂಡಿ ಬಂದಿರುವ ಕೊಡಗಿನ ಕುಲದೇವತೆ ಕಾವೇರಿ ಎಂಬ ಕನ್ನಡ ಕೃತಿಯನ್ನು ಮಂಗಳೂರು ಕೊಡವ ಸಮಾಜದ ಉಪಾಧ್ಯಕ್ಷೆ ಬೊಳ್ಳಿಯಂಡ ಕೃತಿ ಸೋಮಯ್ಯ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಿದರು .

ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು , ಕಾವೇರಿ ಮಾತೆಯ ಆದಿಯನ್ನು ವಿವರಣೆ ಮತ್ತು ವರ್ಣ ಚಿತ್ರದ ಮೂಲಕ ಕಣ್ಣಿಗೆ ಬಿ. ಕೆ. ಗಣೇಶ್ ರೈ ಯವರು ಕಟ್ಟಿಕೊಟ್ಟಿದ್ದಾರೆ . ಹೆಚ್ಚಿನ ಎಲ್ಲರಿಗೂ ಕಾವೇರಿ ಮಾತೆಯ ಪುರಾಣ ಕಥೆಗಳ ಪರಿಚಯ ಇರುವುದಿಲ್ಲ ಈ ಕೃತಿಯ ಓದುವ ಮೂಲಕ ಕಥೆಯ ಸಾಕ್ಷಾಕಾರವಾಗಲಿದೆ ಎಂದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಗೌಡ ಮಾವಜಿ ಮಾತನಾಡಿ , ಈ ಕೃತಿಯು ಕನ್ನಡ, ಇಂಗ್ಲೀಷ್, ಅರೆಭಾಷೆ ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬಂದಿದೆ .ಕಾವೇರಿ ಮಾತೆಯ ಪುರಾಣವನ್ನು ತಿಳಿಸುವ ಈ ಕೃತಿಯು ಕಾವೇರಿ ಮಾತೆಯ ಮಹಿಮೆಯನ್ನು ಸಾರಲಿದೆ ಎಂದರು .

ಕಾರ್ಯಕ್ರಮದಲ್ಲಿ ಕೃತಿಯ ಲೇಖಕ ಮತ್ತು ವಿನ್ಯಾಸಗಾರ, ಅಮೃತ ಪ್ರಕಾಶದ ಉಪಸಂಪಾದಕ ಬಿ. ಕೆ.ಗಣೇಶ್ ರೈ, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು . ಕಾರ್ಯಕ್ರಮದ ನಿರೂಪಣೆಯನ್ನು ನಮ್ಮ ಕುಡ್ಲ ವಾಹಿನಿ ವಾರ್ತಾವಾಚಕಿ ಡಾ. ಪ್ರಿಯಾ ಹರೀಶ್ ನಿರ್ವಹಿಸಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!