ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತ್ ಡಿಜಿಟಲೀಕರಣಗೊಂಡ ದಾಖಲೆಗಳ ಹಸ್ತಾಂತರ ಮತ್ತು ಕಳೆದ 5 ವರ್ಷಗಳಲ್ಲಿ ಪಂಚಾಯತಿನಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ವೀಡಿಯೋ ಬಿಡುಗಡೆ ಹಾಗೂ ಲೈಫ್ ಭವನ ಪದ್ಧತಿಯ ನೂತನ ಫಲಾನುಭವಿಗಳಿಗೆ ಮಾಹಿತಿ ಕಾರ್ಯಕ್ರಮ ಮಂಜೇಶ್ವರ ಗೋವಿಂದ ಪೈ ಗಿಳಿವಿಂಡುನಲ್ಲಿ ಅದ್ದೂರಿಯಾಗಿ ನಡೆಯಿತು.
ಮಂಜೇಶ್ವರ ಗ್ರಾಮ ಪಂಚಾಯತ್ನ ಆಡಳಿತಾತ್ಮಕ ಪಾರದರ್ಶಕತೆ, ದಕ್ಷತೆ ಮತ್ತು ಸಾರ್ವಜನಿಕ ಸೇವಾ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಡಿಜಿಟಲೀಕರಣಗೊಂಡ ದಾಖಲೆಗಳ ಹಸ್ತಾಂತರ ನಡೆಯಿತು.
ಪಂಚಾಯತ್ನ ಭೂ ದಾಖಲೆಗಳು, ತೆರಿಗೆ ದಾಖಲೆಗಳು, ಯೋಜನಾ ದಾಖಲೆಗಳು ಮತ್ತು ಪಂಚಾಯತ್ ನಿರ್ಣಯಗಳನ್ನು ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಲಾಗಿದೆ.
ಈ ಕಾರ್ಯದ ಮೂಲಕ ನಾಗರಿಕರಿಗೆ ಆನ್ಲೈನ್ ಮೂಲಕ ದಾಖಲೆಗಳ ಪ್ರಾಪ್ತಿಯನ್ನು ಸುಗಮಗೊಳಿಸಲಾಗಿದೆ.ದಾಖಲೆ ಸಂರಕ್ಷಣೆ, ಪಾರದರ್ಶಕತೆ ಮತ್ತು ಆಡಳಿತಾತ್ಮಕ ವೇಗ ಹೆಚ್ಚಿಸಲು ಇದು ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆ “ಡಿಜಿಟಲ್ ಪಂಚಾಯತ್” ಕನಸಿನತ್ತ ಒಂದು ದೃಢ ಹೆಜ್ಜೆಯಾಗಿ ಮಾರ್ಪಾಟಾಗಿದೆ.
ಅದೇ ರೀತಿ ಕಳೆದ ಐದು ವರ್ಷಗಳಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ನಲ್ಲಿ ನಡೆದ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ವೀಡಿಯೋ ರೂಪದಲ್ಲಿ ಸಂಗ್ರಹಿಸಿ ಬಿಡುಗಡೆ ಮಾಡಲಾಯಿತು.
ವೀಡಿಯೋದಲ್ಲಿ ರಸ್ತೆ, ಕುಡಿಯುವ ನೀರು, ಸ್ಯಾನಿಟೇಷನ್, ವಿದ್ಯುತ್, ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ನಡೆದ ಸಾಧನೆಗಳ ದೃಶ್ಯಾವಳಿಗಳು ಒಳಗೊಂಡಿದೆ.ಈ ವೀಡಿಯೋ ಜನರಿಗೆ ಪಂಚಾಯತ್ನ ಕಾರ್ಯಪದ್ಧತಿ ಹಾಗೂ ಅಭಿವೃದ್ಧಿ ಪ್ರಯತ್ನಗಳ ಬಗ್ಗೆ ನೈಜ ಚಿತ್ರಣ ನೀಡುತ್ತದೆ.
ಅದೇ ರೀತಿ ಲೈಫ್ ಮಿಷನ್” ಯೋಜನೆಯಡಿ ಮನೆ ಪಡೆದ ನೂತನ ಫಲಾನುಭವಿಗಳಿಗೆ ಯೋಜನೆಯ ಅಡಿಯಲ್ಲಿ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಮನೆ ನಿರ್ಮಾಣದ ಗುಣಮಟ್ಟ, ಹಣ ಬಿಡುಗಡೆ ಪ್ರಕ್ರಿಯೆ, ಮತ್ತು ಸರಿಯಾದ ದಾಖಲೆಗಳ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಫಲಾನುಭವಿಗಳ ಶ್ರೇಯೋಭಿವೃದ್ಧಿಗಾಗಿ ಪಂಚಾಯತ್ನ ಮುಂದಿನ ಯೋಜನೆಗಳ ಕುರಿತು ವಿವರಿಸಲಾಯಿತು.
ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬ್ಲಾಕ್ ಪಂಚಾಯತು ಅಧ್ಯಕ್ಷೆ ಶಮೀನಾ ಟೀಚರ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ರವರು ಮಾತನಾಡಿ ( Byt 1) ಕಳೆದ ಐದು ವರ್ಷದಲ್ಲಿ ನಮ್ಮ ಆಡಳಿತದಲ್ಲಿ ಮಂಜೇಶ್ವರದಲ್ಲಿ ಹಲವು ಅಭಿವೃದ್ದಿ ಯೋಜನೆಗಳನ್ನು ಪೂರ್ತಿಕರಿಸಿದೆ. ನಾವು ಮಾಡಿದ ಕಾರ್ಯವನ್ನು ಎಲ್ಲೂ ಹೇಳಿಕೊಳ್ಳಲಿಲ್ಲ ಅದೇ ರೀತಿ ನಮ್ಮ ಸದಸ್ಯರು ಎಲ್ಲಿಯೂ ಜಂಭ ಕೊಚ್ಚಿಕೊಳ್ಳಲು ಹೋಗಲಿಲ್ಲ ಎಂಬುದಾಗಿ ನಾನು ಹೆಮ್ಮೆಯಿಂದ ಹೇಳುತ್ತಿರುವುದಾಗಿ ಅವರು ತಿಳಿಸಿದರು.
ಅದೇ ರೀತಿ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದ ಮಂಜೇಶ್ವರ ಗ್ರಾಮ ಪಂಚಾಯತು ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ರವರು ಮಾತನಾಡಿ ( Byt 2): ಮಂಜೇಶ್ವರ ಗ್ರಾಮ ಪಂಚಾಯತ್ ಇದೀಗ ಒಂದು ನವೀನ, ಪಾರದರ್ಶಕ ಹಾಗೂ ತಂತ್ರಜ್ಞಾನಾಧಾರಿತ ಆಡಳಿತದ ಮಾದರಿಯಾಗಿ ಹೊರಹೊಮ್ಮಿದೆ. ಅದೇ ರೀತಿ ಮಂಜೇಶ್ವರದ ಎಲ್ಲೆಡೆ ಹಗಲಿನಂತೆ ಇರುಳಿನಲ್ಲೂ ಯಾವ ಅಂಜಿಕೆಯಿಲ್ಲದೆ ನಡೆದಾಡಲು ಎಲ್ಲೆಡೆ ಬೆಳಕಿನ ವ್ಯವಸ್ಥೆ ಮಾಡಿದ್ದೇವೆ. ಒಟ್ಟಾರೆ ಹೇಳೋದಾದರೆ ರಸ್ತೆ ನೀರು ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಮಂಜೇಶ್ವರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಗಿರುವುದಾಗಿ ಅವರು ಹೇಳಿದರು.
ಅದೇ ರೀತಿ ಮುಖ್ಯ ಅತಿಥಿಯಾಗಿದ್ದ ಮಂಜೇಶ್ವರ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಯಾದವ ಬಡಾಜೆಯವರು ಮಾತನಾಡಿ ( Byte): ಮಂಜೇಶ್ವರ ಗ್ರಾಮ ಪಂಚಾಯತಿನ ಈ ಐದು ವರ್ಷಗಳ ಸಾಧನೆ ನಾವು ಏನೆಲ್ಲಾ ಅಭಿವೃದ್ಧಿ ಮಾಡಿದ್ದೇವೆ ಅದು ಎಲ್ಲರಿಗೂ ತಿಳಿದ ವಿಷಯ. ಲೈಫ್ ಭವಣ ಪದ್ಧತಿಯಲ್ಲಿ 200 ಮನೆಗಳನ್ನು ನೀಡಲು ಸಾಧ್ಯವಾಗಿದೆ. ಅದೇ ಪಂಚಾಯತನ್ನು ಸಂಪೂರ್ಣ ಡಿಜಿಟಲೀಕರಣ ಗೊಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಜನ ಪ್ರತಿನಿಧಿಗಳಾದ ಗೋಲ್ಡನ್ ಅಬ್ದುಲ್ ರಹ್ಮಾನ್, ಕಮಲಾಕ್ಷಿ, ಹನೀಫ್, ಶಂಶೀನಾ, ಹಮೀದ್, ಸಫಾ ಫಾರೂಕ್, ರಾಧಾ ಎಂ, ಸುಪ್ರಿಯಾ ಶೆಣೈ, ಮುಶ್ರತ್ ಜಹಾನ್, ಮುಸ್ತಫಾ, ರಾಜೇಶ್, ಸೇರಿದಂತೆ ಇತರ ಪಂಚಾಯತು ಸದಸ್ಯರುಗಳು, ವಿವಿಧ ಸಂಘಟನಾ ನೇತಾರರರು, ರಾಜಕೀಯ ನೇತಾರರು ಸೇರಿದಂತೆ ಹಲವರು ಪಾಲ್ಗೊಂಡರು.
ಲೈಫ್ ಭವನ ಯೋಜನೆಯ ನೂತನ ಫಲಾನುಭವಿಗಳ ಮಾಹಿತಿಯ ಕಾರ್ಯಕ್ರಮ ಜನಕೇಂದ್ರಿತ ಆಡಳಿತದ ದೃಷ್ಟಾಂತವಾಗಿ ಮಾರ್ಪಾಟಾಯಿತು.
ಅಂತೂ ಈ ಕಾರ್ಯಕ್ರಮವು ತಂತ್ರಜ್ಞಾನ – ಪಾರದರ್ಶಕತೆ – ಜನಸೇವೆ ಎಂಬ ತ್ರಿಮಂತ್ರದ ಆಧಾರದ ಮೇಲೆ ಭಾರೀ ಪ್ರಶಂಶೆಗೆ ಪಾತ್ರವಾಯಿತು.