ಕದ್ರಿ ಪಾರ್ಕ್ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ತೆರೆದಿದ್ದ ಗೂಡಂಗಡಿಗಳ ತೆರವು …. !

ಮಂಗಳೂರು: ಅನಧಿಕೃತ ವಾಗಿ ಇದ್ದ ಚುರುಮುರಿ ಸ್ಟಾಲ್, ಕಬ್ಬಿನ ಜ್ಯೂಸ್ ಅಂಗಡಿ, ಪಾನಿಪುರಿ ಅಂಗಡಿಗಳನ್ನ ಮಹಾ ನಗರ ಪಾಲಿಕೆಯ ಅಧಿಕಾರಿಗಳು ತೆರವು ಗೊಳಿಸಿದರು. ಈ ಅಂಗಡಿಗಳಲ್ಲಿ ಸ್ವಚ್ಚತೆ ಪಾಲನೆಯಾಗುತ್ತಿರಲಿಲ್ಲ. ತ್ಯಾಜ್ಯ ವಸ್ತುಗಳ ರಾಶಿಯೇ ಉಳಿದು ಪಾರ್ಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿತ್ತು ಎಂದು ದೂರುಗಳು ಬಂದಿದ್ದವು.


ಮಾತ್ರವಲ್ಲದೆ ಇಲ್ಲಿ ಅಂಗಡಿಗಳನ್ನು ಏಲಂ ಮೂಲಕ ಪಡೆದುಕೊಂಡವರು ತಮ್ಮ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!