ಬೈಕ್‌ನಲ್ಲಿ ಸಾಗಿಸಲಾಗುತ್ತಿದ್ದ ಮಾದಕ ದ್ರವ್ಯ ಎಂಡಿಎಂಎ ಯೊಂದಿಗೆ ಯುವಕನೊಬ್ಬನ ಸೆರೆ

ಮಂಜೇಶ್ವರ: ಬೈಕ್‌ನಲ್ಲಿ ಸಾಗಿಸಲಾಗುತ್ತಿದ್ದ 26.81 ಗ್ರಾಂ ಮಾದಕ ದ್ರವ್ಯ ಎಂಡಿಎಂಎ ಯೊಂದಿಗೆ ಯುವಕನೊಬ್ಬನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಸೋಮವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಬಂಗ್ರಮಂಜೇಶ್ವರ ನಿವಾಸಿ ಅಬೂಬಕರ್ ಆಬೀದ್ (25) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈತ ಚಲಾಯಿಸುತಿದ್ದ ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಹೊಸಂಗಡಿ ರಾಷ್ಟ್ರೀಯ ಹೆದ್ದಾರಿ ಓವ‌ರ್ ಬ್ರಿಡ್ಜ್ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆಸುತ್ತಿರುವ ಮಧ್ಯೆ ವಾಹನ ತಪಾಸಣೆಯಲ್ಲಿ ಮಾದಕ ದ್ರವ್ಯ ಪತ್ತೆಹಚ್ಚಲಾಗಿದೆ.ಬಂಧಿತನ ಪ್ಯಾಂಟ್ ಜೇಬಿನಲ್ಲಿ ಎಂಡಿಎಂಎ ಪತ್ತೆಯಾಗಿರುವುದಾಗಿಯೂ ಬಂಧಿತ ಇತರ ಹಲವು ಪ್ರಕಣಗಳ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!