ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು (FMHMC) ಮತ್ತು ಗ್ಲೋಬಲ್ ಹೋಮಿಯೋಪಥಿ ಫೌಂಡೇಶನ್ (GHF) ಹಾಗೂ ನವದೆಹಲಿಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಹೋಪಿಯೋಪಥಿ ಹೋಮಿಯೋಪಥಿಕ್ ಶಿಕ್ಷಣ, ಅಭ್ಯಾಸ ಸಹಯೋಗದಲ್ಲಿ, ಎಕ್ಸ್ ಪ್ಲೋರಾ 2025 ಸಂಶೋಧನಗಳ ಏಕೀಕರಣ ಎಂಬ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ 2025 ಕಾರ್ಯಕ್ರವು ನವೆಂಬರ್ 14 ರಿಂದ 16ರವರೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ಸ್ ಮಂಗಳೂರು ಇದರ ನಿರ್ದೇಶಕರಾದ ರೆವರೆಂಡ್ ಫಾದರ್ ಫೌಸ್ಟಿನ್ ಲ್ಯೂಕಸ್ ಲೋಬೊ ತಿಳಿಸಿದರು .
ಅವರು ಫಾದರ್ ಮುಲ್ಲರ್ ಕಾಲೇಜಿ ನ ಡಿ. ಎಂ ಹಾಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಜನರಿಗೆ ಒಳಿತಿಗಾಗಿ ಈ ರೀತಿಯ ಸಮಾಜಮುಖಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ . ಇದರಿಂದ ಹೋಮಿಯೋಪಥಿ ಚಿಕ್ಸಿಸ್ಥೆಯ ಲಾಭ ಹೆಚ್ಚು ಹೆಚ್ಚು ಜನರಿಗೆ ಪರಿಚಯವಾಗಲಿದೆ . ಈ ಕ್ಷೇತ್ರದಲ್ಲಿ ಕೈಗೊಳ್ಳುವ ಸಂಶೋಧನೆಯು ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಪ್ರಭಾವವನ್ನು ಬೀರಲಿದೆ . ಈ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರು ಆಗಮಿಸಲಿದ್ದಾರೆ . ಅವರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ . ಈ ವಿಚಾರಗಳು ಆರೋಗ್ಯ ಸಮಾಜ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದರು .
ಇದರ ಜೊತೆ ಅಂತರರಾಷ್ಟ್ರೀಯ ಸಮ್ಮೇಳನದ ಭಾಗವಾಗಿ, ಎಕ್ಸ್ಪ್ಲೋರಾ ಫಿಯೆಸ್ಟಾ ಸಂಭ್ರಮವು ನವೆಂಬರ್ 14 ರಿಂದ 16 ರವರೆಗೆ ಸಂಜೆ 4.30 ರಿಂದ ರಾತ್ರಿ 9.00 ರವರೆಗೆ ಕಂಕನಾಡಿಯ ಫಾದರ್ ಮುಲ್ಲರ್ ಮೈದಾನದಲ್ಲಿ ನಡೆಯಲಿರುವುದು . ಹಾಗೆಯೇ ನವೆಂಬರ್ 14 ರಂದು ಸಂಸ್ಥೆಯ ವತಿಯಿಂದ ವಿಶ್ವ ಮಧುಮೇಹ ದಿನ ಜಾಗೃತೆ ಅಭಿಯಾನ ಮತ್ತು ಮಧ್ಯಾಹ್ನ 3 ಗಂಟೆಗೆ ಕಾಲೇಜಿನ ಡಿ. ಎಂ ಹಾಲ್ ನಲ್ಲಿ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆಯ ರಾಷ್ಟ್ರೀಯ ಮಾನ್ಯತಾ ಮಂಡಳಿಯ 10ನೇ ವರ್ಷದ ಸಂಭ್ರಮ ಮತ್ತು ವಿಶ್ವ ಗುಣಮಟ್ಟ ವಾರ 2025 ಕಾರ್ಯಕ್ರಮ ನಡೆಯಲಿದೆ .ನವೆಂಬರ್ 15 ಮಕ್ಕಳ ದಿನಚಾರಣೆಯ ಆಚರಣೆಯ ಸಲುವಾಗಿ ಆಸ್ಪತ್ರೆಯ ಸಮ್ಮೇಳನ ಸಭಾಂಗಣದಲ್ಲಿ ಮಕ್ಕಳಿಗಾಗಿ ಆಟೋಟ ಸ್ಪರ್ಧೆಯು ನಡೆಯಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿಯಾದ ರೆವರೆಂಡ್ ಫಾದರ್ ಡೊನಾಲ್ಡ್ ನಿಲೇಶ್ ಕ್ರಾಸ್ತಾ , ರೆವರೆಂಡ್ ಡಾ. ನೆಲ್ಸನ್ ಡಿ. ಪೈಸ್, ಪ್ರಾಂಶುಪಾಲರಾದ ಡಾ. ಇ.ಎಸ್. ಜೆ. ಪ್ರಭು ಕಿರಣ್ ಉಪಸ್ಥಿತತರಿದ್ದರು .