ಜನವರಿ 3 ರಿಂದ 11ರ ತನಕ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಅಂತರ್ ಕಾಲೇಜು ಕ್ರೀಡಾ ಉತ್ಸವ ‘ಅಲೋಶಿಯನ್ ಗೇಮ್ಸ್ 2026’

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು, ಕರ್ನಾಟಕದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ, ಇದು ಶೈಕ್ಷಣಿಕ, ಕ್ರೀಡೆ ಮತ್ತು ಸಮಗ್ರ ವಿದ್ಯಾರ್ಥಿ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ . ಯುವಜನರಲ್ಲಿ ನಾಯಕತ್ವ, ಶಿಸ್ತು, ಮತ್ತು ಸಮುದಾಯ ಮನೋಭಾವವನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ . ಈ ಭಾರಿ ವಿದ್ಯಾರ್ಥಿಗಳಿಗೆ , ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಅಂತರ್ ಕಾಲೇಜು ಕ್ರೀಡಾ ಉತ್ಸವಗಳಲ್ಲಿ ಒಂದಾದ, ‘ಅಲೋಸಿಶಿಯನ್ ಗೇಮ್ 2026 ಕ್ರೀಡಾಕೂಟವನ್ನು ಸಂಸ್ಥೆಯು ಜನವರಿ 3 ರಿಂದ 11ರ ತನಕ ಆಯೋಜಿಸಲು ತುಂಬಾನೇ ಹೆಮ್ಮೆ ಪಡುತ್ತದೆ ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ವಂ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಈ ಕ್ರೀಡಾ ಸಂಭ್ರಮದಲ್ಲಿ ಭಾರತದಾದ್ಯಂತ ಇರುವ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸ್ವತಂತ್ರ ಕ್ರೀಡಾಪಟುಗಳಿಗೆ ಭಾಗವಹಿಸುವ ಅವಕಾಶ ಇರುತ್ತದೆ . ಅಂದಾಜು 20 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳನ್ನು , ಉತ್ಸಾಹಿಗಳನ್ನು ಮತ್ತು ಚಾಂಪಿಯನ್‌ಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ . ಇದು 13 ಸ್ಪರ್ಧಾತ್ಮಕ ಕ್ರೀಡೆಗಳು ಮತ್ತು ಒಂದು ಮೆಗಾ ಮ್ಯಾರಥಾನ್‌ ರೋಮಾಂಚಕ ಸರಣಿಯನ್ನು ಒಳಗೊಂಡಿದೆ ಎಂದರು . ಇದೇ ಸಂದರ್ಭದಲ್ಲಿ ಅಧಿಕೃತ ಆನ್‌ಲೈನ್‌ ನೋಂದಾವಣಿ ಈವೆಂಟ್ ಪೋರ್ಟಲ್ ನ ಬಿಡುಗಡೆ ನಡೆಯಿತು .

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅರುಣ್ ಎಂ. ಡಿಸೋಜ, ದೈಹಿಕ ಶಿಕ್ಷಣ ನಿರ್ದೇಶಕಿಯಾದ ನಿತಿಶಾ ರಾಡ್ರಿಗಸ್, ಅಸಿತ್ ಕುಲಕರ್ಣಿ , ಚಂದ್ರಕಲಾ ಉಪಸ್ಥಿತತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!