ಆಮ್ ಆದಿ ಪಾರ್ಟಿ ಮಂಗಳೂರು- ನಾಗರಿಕ ಅಹವಾಲು ಪೋರ್ಟಲ್ ಪ್ರಾರಂಭ

ಮಂಗಳೂರು: ಇಂದಿನಿಂದ ಮಂಗಳೂರಿನ ನಾಗರಿಕರು ಮಂಗಳೂರು ನಗರಸಭೆಯ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ಕುರಿತು ಅಹವಾಲುಗಳನ್ನು https://aapdakshinakannada.org/Grievance/ ಎನ್ನುವ ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿ ದಾಖಲಿಸಬಹುದು ಎಂದು
ಪೋರ್ಟಲ್ ಸಂಚಾಲಕರಾದ ನೈಜಲ್ ಅಲ್ಬುಕರ್ಕ್ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿ , ಸುತ್ತುಮುತ್ತಲಿನ ಸಮಸ್ಯೆಗಳ ಫೋಟೋಗಳು, ವೀಡಿಯೋಗಳು ಮತ್ತು ಸಮಸ್ಯೆಗಳ ಕುರಿತಾದ ವಿವರಣೆಗಳನ್ನು ಕೂಡ ನಾಗರಿಕ ಅಹವಾಲು ಪೋರ್ಟಲ್ ಸೇರಿಸಬಹುದಾಗಿದೆ . ಸ್ವಚ್ಛತೆ , ನೀರು , ರಸ್ತೆ ಮತ್ತು ಚರಂಡಿ ವ್ಯವಸ್ಥೆ , ಘನ ತ್ಯಾಜ್ಯ ನಿರ್ವಹಣೆ , ದಸ್ತಾವೇಜುಗಳನ್ನು ಪಡೆಯುವಲ್ಲಿ ವಿಳಂಬದ ಕುರಿತು ದೂರನ್ನು ನೀಡಬಹುದಾಗಿದೆ . ಈ ಪೋರ್ಟಲ್ ಮಂಗಳೂರಿನ ನಗರಸಭೆಯ ಎಲ್ಲಾ 60 ವಾರ್ಡುಗಳನ್ನು ಒಳಗೊಂಡಿದೆ. ಸ್ಥಳ ನಿರ್ಧಾರಕ್ಕಾಗಿ ಜಿಯೋ-ಟ್ಯಾಗಿಂಗ್ ಸೌಲಭ್ಯವನ್ನು ಒದಗಿಸುತ್ತದೆ ಎಂದರು.

ಈ ನಾಗರಿಕ ಅಹವಾಲು ಪೋರ್ಟಲ್ ಈಗಾಗಲೇ ದೆಹಲಿ ಮತ್ತು ಪಂಜಾಬ್‌ನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾದರಿಯಂತೆ, ನಾಗರಿಕರ ನಿರ್ಲಕ್ಷದ ವಿರುದ್ಧ ಆಮ್ ಆದಿ ಪಕ್ಷದ ರಾಷ್ಟ್ರವ್ಯಾಪಿ ಪ್ರಯತ್ನಗಳ ಭಾಗವಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ವಿವೇಕಾನಂದ ಸಾಲಿನ್ಸ್ , ಜಿಲ್ಲಾಧ್ಯಕ್ಷರಾದ ಡಾ| ಬಿ.ಕೆ. ವಿಶು ಕಮಾರ್ , ಸದಸ್ಯರಾದ ಶನೋನ್ ಪಿಂಟೋ , ಕಬೀರ್ ಕಾಟಿಪಳ್ಳ , ಸೀಮಾ ಮಡಿವಾಳ , ಲೆಸ್ಲಿ ಫೆರ್ನಾಂಡೀಸ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!