ಉಡುಪಿ: ಗಿಲ್ನೆಟ್ ಬೆಸ್ತರ ಬಲೆಗೆ ಸ್ಥಳೀಯವಾಗಿ ಕರೆಯುವ ಬೃಹತ್ ಗಾತ್ರದ ಮೀನು ಸಿಕ್ಕಿದೆ. ಬೈಂದೂರು ತಾಲೂಕಿನ ಉಪ್ಪುಂದ ಎಂಬಲ್ಲಿ ಗಿಲ್ನೆಟ್ ಮೀನುಗಾರರ ಬಲೆಗೆ ಬಿದ್ದ ಈ ಮೀನನ್ನು ಮಲ್ಪೆ ಬಂದರಿಗೆ ತರಲಾಗಿದೆ. ಕೇರಳದಲ್ಲಿ ಕಟ್ಟಕಂಬ ಎಂದು ಕರೆಯಲ್ಪಡುವ ಈ ಮೀನು ಸುಮಾರು 13 ಅಡಿ ಉದ್ದದ ಈ ಮೀನು 350 ಕೆಜಿ ತೂಕವನ್ನು ಹೊಂದಿದೆ.
ಈ ಮೀನು ಕೆ.ಜಿ.ಗೆ 70ರೂ.ನಂತೆ ಕೇರಳದ ಮೀನು ವ್ಯಾಪಾರಸ್ಥರಿಗೆ ಮಾರಾಟವಾಗಿದೆ. ಮಲೆನಾಡು ಮತ್ತು ಕೇರಳದಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಎಸ್ಕೆಆರ್ಸಿಬಿ ಪಾರ್ಟಿಯ ಸುರೇಶ್.