ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 70 ನೇ ಪರಿನಿರ್ವಾಣ ದಿನಾಚರಣೆಯನ್ನು ಡಾ.ಬಿ.ಆರ್. ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾ ವೇದಿಕೆ ಮಂಗಲ್ಪಾಡಿಯಲ್ಲಿ ಆಚರಿಸಲಾಯಿತು.
ವೇದಿಕೆಯ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ದೀಪ ಬೆಳಗಿಸಿದರು. ಕಾರ್ಯದರ್ಶಿ ಶ್ರೀ ಹರೀಶ್ ಕುಮಾರ್ ಸ್ವಾಗತಿಸಿ,ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದರು. ಕೋಶಾಧಿಕಾರಿ ಶ್ರೀ ವಿಜಯ ಕುಮಾರ್ ಎಸ್. ಕೆ.ಧನ್ಯವಾದ ಸಮರ್ಪಿಸಿದರು.ಇತ್ತೀಚೆಗೆ ನಿಧನರಾದ ವೇದಿಕೆಯ ಹಿರಿಯ ಸದಸ್ಯರಾದ ಶ್ರೀ ದಿ.ರಾಮ ಮತ್ತು ಶ್ರೀ ದಿ.ಗಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಶ್ರೀ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.