ದೇಶದಲ್ಲಿ ಮೋದಿ ಪ್ರಧಾನಿ ಅದ ಬಳಿಕ ಉಂಟಾಗಿರುವ ಅಭಿವೃದ್ಧಿ ಯನ್ನು ಗ್ರಾಮ ಗ್ರಾಮಗಳಲ್ಲಿ ಮಾಡಿ ತೋರಿಸುತ್ತೇವೆ. ಗ್ರಾಮ ಬ್ಲಾಕ್ ಜಿಲ್ಲಾ ಪಂಚಾಯತ್ ಗಳಲ್ಲಿ ಬಿಜೆಪಿ ಅಭ್ಯರ್ಥಿ ಗಳನ್ನು ಗೆಲ್ಲಿಸಿ ಎಂದು ಬಿಜೆಪಿ ವರ್ಕಾಡಿ ಜಿಲ್ಲಾ ಡಿವಿಶನ್ ಅಭ್ಯರ್ಥಿ ವಿಜಯ್ ರೈ ಮಜೀರ್ ಪಲ್ಲ ದಲ್ಲಿ ಜರಗಿದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್ ಮದೂ ಕಾರ್ಯಕ್ರಮ ಉದ್ಘಾಟಿಸಿದರು.ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಸಲೀಲ್ ಮಾಸ್ಟರ್, ನಾರಾಯಣ ನಾವುಡ, ಸದಾಶಿವ ಚೇರಲ್, ವಲ್ಸರಾಜ್, ಯತೀರಾಜ್ ಶೆಟ್ಟಿ, ದೂಮಪ್ಪ ಶೆಟ್ಟಿ ಉಪಸ್ಥಿತರಿದ್ದರು.ಭಾಸ್ಕರ್ ಪೊಯ್ಯೇ ಅಧ್ಯಕ್ಷತೆ ವಹಿಸಿದ್ದರು, ರಕ್ಷನ್ ಸ್ವಾಗತಿಸಿ, ಜೀವನ್ ವಂದಿಸಿದರು.