ರೋಡಲ್ಲಿ ತೇಲಾಡಿದ ಮೊಟ್ಟೆ … !?

ಮಂಗಳೂರು: ಮೊಟ್ಟೆ ಸಾಗಾಟದ ವಾಹನಕ್ಕೆ ಲಾರಿ ಢಿಕ್ಕಿಯಾಗಿ ರಸ್ತೆ ತುಂಬಾ ಮೊಟ್ಟೆ ಚೆಲ್ಲಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಅಡ್ಯಾರ್ ಬಳಿ ಮೊಟ್ಟೆ ಸಾಗಾಟದ ವಾಹನಕ್ಕೆ ಹಿಂದಿನಿಂದ ಲಾರಿಯೊಂದು ಢಿಕ್ಕಿ ಹೊಡೆದುದರಿಂದ ಈ ಹಾನಿ ಸಂಭವಿಸಿದೆ.

ವಾಹನ ರಸ್ತೆಗೆ ಮಗುಚಿ ಬಿದ್ದಿದ್ದು, ಮೊಟ್ಟೆಗಳು ಒಡೆದು ಸಾವಿರಾರು ರೂ. ನಷ್ಟವಾಗಿದೆ. ಫರಂಗಿಪೇಟೆ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ವಾಹನಕ್ಕೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ಹಿಂದಿನಿಂದ ಲಾರಿ ಢಿಕ್ಕಿಯಾಗಿದೆ. ಇದರಿಂದ ಡಿವೈಡರ್ ಮೇಲೆ ಹತ್ತಿದ್ದ ಮೊಟ್ಟೆ ಸಾಗಾಟದ ವಾಹನ ಮಗುಚಿ ಬಿದ್ದಿದೆ.ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ. ಆದರೆ ರಸ್ತೆಯಲ್ಲಿ ಮೊಟ್ಟೆ ಒಡೆದು ಚೆಲ್ಲಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!