ಕಾಸರಗೋಡು :ಗುರುವಿನ ಅನುಗ್ರಹ ಪ್ರಾಪ್ತಿಯಾದರೆ ಮಾತ್ರ ವ್ಯಕ್ತಿ ಜೀವನದಲ್ಲಿ ಪರಮೋನ್ನತ ಸ್ಥಾನ ಮಾನಗಳು ವ್ಯಕ್ತಿಯ ಪಾಲಿಗೆ ಬಂದರೂ ಅದು ವಿಜಯಪತಕ್ಕೆ ಬಂದು ವ್ಯಕ್ತಿ ವಿರಾಜಮಾನನಾಗುತ್ತಾನೆ. “ಗುರುನೆಲೆಇಲ್ಲದಿದ್ದರೆ ಯಾವ ನೆಲೆಯೂ ಇಲ್ಲ. ಗುರುಮೂಲದಿಂದಲೇ ನಮಗೆ ದೈವತ್ವದ, ಧರ್ಮದ ಸೂತ್ರ ತಿಳಿಯುವುದು. ಅಂತಹ ಒಂದು ಗುರುವಿಗೆ ಪ್ರಾರ್ಥನೆ ಹಾಗೂ ಧ್ಯಾನ, ಭಜನೆ ಯನ್ನು ಮಾಡಲು ಅವಕಾಶವಾಗುವ ನಿಟ್ಟಿನಲ್ಲಿ ರಾಮಕ್ಷತ್ರಿಯ ಸಮಾಜದ ಗುರುಗಳಾದ ಶ್ರೀ ಭಿಕ್ಷು ಸ್ವಾಮೀಜಿ ಗಳ ಮಂದಿರದಲ್ಲಿ ಪ್ರಾರ್ಥನ ಮಂದಿರ ಅತೀ ಸುಂದರವಾಗಿ ನಿರ್ಮಿಸಿ ಅರ್ಪಿಸಿದ ಕನ್ನಡ ಭವನದ ಈ ಧಾರ್ಮಿಕ ಕೈಂಕರ್ಯ ಅಭಿನಂದನೀಯ ಹಾಗೂ ಅನುಕರಣೀಯ. ಇಲ್ಲಿ ಶ್ರೀ ಗುರುವಿಗೆ ಅರ್ಚನೆ, ಉಪಾಸನೆಗಳು,, ಭಜನೆ, ಧ್ಯಾನಗಳು ನಿರಂತರ ನಡೆಯಲಿ, ತನ್ ಮೂಲಕ ಸಮಾಜ ಗುರುವಿನ ಅನುಗ್ರಹಕ್ಕೆ ಪಾತ್ರವಾಗಲಿ ಎಂದು ಎಡನೀರು ಮಠ ಅದೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಗಳವರು, ಕಾಸರಗೋಡು ಕನ್ನಡ ಭವನ ನಿರ್ಮಿಸಿ ನೀಡಿದ “ಪ್ರಾರ್ಥನ ಮಂದಿರ “ಲೋಕಾರ್ಪಣೆ ಮಾಡಿ ನುಡಿದರು.
ನಾಗರಕಟ್ಟೆ ನಾಗನಕಟ್ಟೆ, ರಕ್ತೇಶ್ವರಿ, ಶ್ರೀ ಶಾರದಾ ದೇಗುಲ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಸಭಾಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು ಎಡನೀರು ಶ್ರೀಗಳು ದೇವಸ್ಥಾನ, ಗಳ, ದೈವ ಚೈತನ್ಯಗಳ ಶುದ್ದೀಕರಣ, ಪುನಃ ಪ್ರತಿಷ್ಠೆಗಳು ಆ ಊರಿನ, ಪರಿಸರದ ಪೂರ್ಣ ಶುದ್ದೀಕರಣ. ತೊಡಗಿಸಿಕೊಂಡ ಪುಣ್ಯಾತ್ಮ ಚೈತನ್ಯಗಳಿಗೆ ಈ ಪ್ರಕ್ರಿಯೆಯಿಂದ ಅಪಾರ ದೇವ ಕೃಪೆ ಪ್ರಾಪ್ತವಾಗುತ್ತದೆ. ಅವರ ಜೀವನ ಪರಮ ಪಾವನವಾಗುತ್ತದೆ ಎಂದು ಹರಸಿದರು. ಮುಖ್ಯ ಅತಿಥಿಯಾಗಿ ಹೃದ್ರೋಗ ತಜ್ಞ ಡಾ. ಎಚ್. ಪ್ರಭಾಕರ್, ಸಾಮಾಜಿಕ, ಧಾರ್ಮಿಕ ಮುಂದಾಳು ಡಾ. ರವೀಂದ್ರ ಜೆಪ್ಪು.ಡಾ. ವಾಮನ್ ರಾವ್ ಬೇಕಲ್ ವೇದಾಚಾರ್ಯ ನಾಗೇಂದ್ರ ಭಟ್ ಪ್ರದಾನ ಭಾಷಣ ಮಾಡಿದರು. ಹರೀಶ್ಚಂದ್ರ ತಲಪಾಡಿ, ರಮೇಶ್ ಅಶೋಕ್ ನಗರ ಮಂಗಳೂರು, ನಿಶಾ ಅನಿಲ್, ಚಂದ್ರಕಾಂತ ನಾಗರಕಟ್ಟೆ, ರಾಜ್ ಕುಮಾರ್, ರೋಹಿತಾಕ್ಷ, ಶಶಿಕಾಂತ, ಮೋಹನ್ ದಾಸ್ ಕೊರಕೋಡು, ರಾಜ್ ನಾಗರಕಟ್ಟೆ, ಉಪಸ್ಥಿತರಿದ್ದರು. ಸಮಿತಿ ಪ್ರದಾನ ಕಾರ್ಯದರ್ಶಿ ದಿನೇಶ್ ನಾಗರಕಟ್ಟೆ ಸ್ವಾಗತಿಸಿ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಅರುಣಾ ಟೀಚರ್, ಚಂದ್ರಕಾಂತ ನಾಗರಕಟ್ಟೆ ನಿರೂಪಿಸಿದರು. ಕಾರ್ಯದರ್ಶಿ ವಿನೋದ್ ನಾಗರಕಟ್ಟೆ ಧನ್ಯವಾದವಿತ್ತರು.
ಜೀರ್ಣೋದ್ದಾರ ಸಮಿತಿ ಗೌರವ ಅಧ್ಯಕ್ಷರಾದ ನಿರಂಜನ್ ಕೊರಕೋಡು ಆಶೀರ್ವಚನ ನೀಡಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಲಕ್ಶ್ಮಣ ಬೀರಂತಬೈಲ್ ಅದ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.