ಮಂಜೇಶ್ವರ : ಕೇರಳ ಸರಕಾರದ ಅಭಿವೃದ್ಧಿ ಯೋಜನೆಯ ಭಾಗವಾಗಿ ಕಾಸರಗೋಡು ಡೆವಲಪ್ಮೆಂಟ್ ಫಂಡ್ ನಿಂದ ಲಭಿಸಿದ 2 ಕೋಟಿ 37 ಲಕ್ಷ ರೂಪಾಯಿ ಖರ್ಚಿನಲ್ಲಿ ನಿರ್ಮಾಣಗೊಂಡ 1350 ಮೀಟರ್ ಕಣ್ಟತೀರ್ಥ ಬೀಚ್ ರಸ್ತೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್ ಲೈನ್ ಮೂಲಕ ಲೋಕಾರ್ಪಣೆಗೊಳಿಸಿದರು.
ರಾಜ್ಯದ 14 ಜಿಲ್ಲೆಗಳಲ್ಲಿ 60 ರಸ್ತೆಗಳನ್ನು ಒಂದೇ ದಿನದಲ್ಲಿ ಮುಖ್ಯ ಮಂತ್ರಿಯವರು ಲೋಕಾರ್ಪಣೆಗೊಳಿಸಿದ್ದಾರೆ. ಲೋಕೋಪಯೋಗಿ ಹಾಗೂ ಪ್ರವಾಸೋಧ್ಯಮ ಇಲಾಖೆಯ ಸಚಿವ ಮೊಹಮ್ಮದ್ ರಿಯಾಝ್ ಅಧ್ಯಕ್ಷತೆ ವಹಿಸಿದರು.
ಮಂಜೇಶ್ವರದ ಅಭಿವೃದ್ಧಿಯ ರೂವಾರಿ ಎಂದೇ ಬಿಂಬಿಸಲ್ಪಡುವ ಜನಪ್ರಿಯ ಶಾಸಕ ಎಕೆಎಂ ಅಶ್ರಫ್ ಉದ್ಘಾಟನಾ ಫಲಕ ಅನಾವರಣಗೊಳಿಸಿದರು.
ಈ ಸಂದರ್ಭ ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್, ಜನಪ್ರತಿನಿಧಿಗಳಾದ ಯಾದವ ಬಡಾಜೆ, ಸುಪ್ರಿಯಾ ಶೆಣೈ, ವಿನಯ ಬಾಸ್ಕರ್, ಲಕ್ಷ್ಮಣ ಕುಚ್ಚಿಕ್ಕಾಡ್, ಮುಸ್ತಫ ಉದ್ಯಾವರ, ಆದರ್ಶ್, ನೇತಾರರಾದ ಸಯ್ಯದ್ ಸೈಫುಲ್ಲ ತಂಘಲ್, ಅಶ್ರಫ್ ಕುಂಜತ್ತೂರು, ಮೊದಲಾದವರು ಉಪಸ್ತಿತರಿದ್ದರು.
ಈ ಸಂದರ್ಭ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಹಾಗೂ ಗುತ್ತಿಗೆದಾರ ಯು ಕೆ ಮೊಹಮ್ಮದ್ ರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.ಬಿಜು ಕೆ ಸ್ವಾಗತಿಸಿ ಶೋಭ ವಂದಿಸಿದರು