ಕಾಸರಗೋಡು: ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ) ಕನ್ನಡ ಭವನ ಪ್ರಕಾಶನ ಕ್ಕೆ ೨೫ ವರ್ಷ ತುಂಬಿದ ಸವಿ ನೆನಪಿಗಾಗಿ ಕನ್ನಡ ಭವನದ ರಜತ ಸಂಭ್ರಮ -ನಾಡು ನುಡಿ ಹಬ್ಬವು ಜನವರಿ 18, 2026 ರಂದು ಕನ್ನಡ ಭವನದಲ್ಲಿ ನಡೆಯಲಿದೆ . ಕಾರ್ಯಕ್ರಮದಲ್ಲಿ ರಜತ ಸಂಭ್ರಮ ವಿಶೇಷ 25 ಕಾರ್ಯಕ್ರಮಗಳ ಉದ್ಘಾಟನೆ , ಕನ್ನಡಪರ ವಿವಿಧ ಕ್ಷೇತ್ರಗಳ 101 ಸಾಧಕರಿಗೆ ಕನ್ನಡ ಭವನದ ವಿವಿಧ ಪ್ರತಿಷ್ಠಿತ ಪ್ರಶಸ್ತಿ ಪ್ರಧಾನ -ಸನ್ಮಾನ , ಸಾಂಸ್ಕೃತಿಕ ನೃತ್ಯ ವೈಭವ-ರಾತ್ರಿ ಯಕ್ಷಗಾನ ಬಯಲಾಟ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಭವನದ ಕೊಡಲ್ಪಡುವ ಪ್ರತಿಷ್ಠಿತ ” ಬೇಕಲ ರಾಮನಾಯಕ ಸಾಹಿತ್ಯ ಪ್ರಶಸ್ತಿ 2026 ಗಿರೀಶ್ ಪಿ. ಎಂ ಚಿತ್ತಾರಿ ಇವರಿಗೆ ನೀಡಿ ಗೌರವಿಸಲಾಗುವುದೆಂದು ಕನ್ನಡ ಭವನ ಸ್ಥಾಪಕ ಸಂಚಾಲಕರಾದ ಡಾ.ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.