2026ರ ಹೊಸ ವರ್ಷದ ಮೊದಲ ವಾರವೇ ಬಾನಿನಲ್ಲಿ ಸೂಪರ್ ಚಂದಮಾಮ ಗೋಚರಿಸಲಿದ್ದಾನೆ.ಇದು ಪ್ರಥಮ ಸೂಪರ್ ಮೂನ್ ಆಗಿರಲಿದೆ.ಜನವರಿ 3, 2026 ರಂದು ಆಕಾಶದಲ್ಲಿ ಗೋಚರಿಸುವ ಚಂದ್ರನು ವಿಶೇಷವಾಗಿದೆ. ಈ ದಿನದಂದು ವರ್ಷದ ಮೊದಲ ಹುಣ್ಣಿಮೆ, ಆದ್ರೆ ಈ ಹುಣ್ಣಿಮೆ ಸಾಮಾನ್ಯದಲ್ಲ, ಸೂಪರ್ ಮೂನ್ ಅಂದ್ರೆ, ಇದು ಸಾಮಾನ್ಯ ನಿಯಮಿತ ಹುಣ್ಣಿಮೆಯಂತೆ ಕಾಣುವುದಿಲ್ಲ, ಆದ್ರೆ 2026 ರಲ್ಲಿ ಕಂಡು ಬರುವ ಅತಿದೊಡ್ಡ ಮತ್ತು ಪ್ರಕಾಶಮಾನವಾದ ಚಂದ್ರಗಳಲ್ಲಿ ಒಂದಾಗಿರುತ್ತದೆ. ವರ್ಷಕ್ಕೆ ಮೂರರಿಂದ ನಾಲ್ಕು ಸೂಪರ್ ಮೂನ್ ಗಳಲ್ಲಿ ಇದು ಮೊದಲನೆಯದು ಎಂದು ಖಗೋಳ ಶಾಸ್ತ್ರಜ್ಞರು ಹೇಳುತ್ತಾರೆ.
ಹಾಗೆಯೇ, ಸೂರ್ಯನಲ್ಲೂ ವಿಶೇಷ ದಿನ ಸೂರ್ಯನ ಸುತ್ತ ತಿರುಗುವ ಭೂಮಿಯ ದೀರ್ಘ ವೃತ್ತದ ಕಾರಣದಿಂದ ಜ 3ರಂದು ಸಮೀಪ ದೂರ (ಪೆರಿಜಿಗೆ ಭೂಮಿ ಬಂದು ಸರಾಸರಿ ದೂರ 15 ಕೋಟಿ ಕಿ ಮೀಕ್ಕಿಂತ 14 ಕೋಟಿ 70 ಲಕ್ಷ ಕಿ ಮೀಗೆ ಬರಲಿದೆ. ಇದರಿಂದ ಸೂರ್ಯ ಮಾಮೂಲಿಗಿಂತ ಭೂಮಿಯ ಸಮೀಪ ಬರಲಿದೆ ಹಾಗಾಗಿ ಸೂರ್ಯ ಉಳಿದ ದಿನಕ್ಕಿಂತ ಈ ದಿನ ದೊಡ್ಡದಾಗಿ ಕಾಣುತ್ತದೆ.
ಜನವರಿ 3 ರಂದು ಸಂಭವಿಸುವ ಸೂಪರ್ ಮೂನ್ 3,56,800 ಕಿ.ಮೀ ದೂರದಲ್ಲಿದ್ದು ಇದು ಸರಾಸರಿಗಿಂತ 10% ಹೆಚ್ಚು ಈ ದಿನ, ಚಂದ್ರನು ಭೂಮಿಗೆ ಅತ್ಯಂತ ಹತ್ತಿರದಲ್ಲಿದ್ದು ಸಾಮಾನ್ಯ ಹುಣ್ಣಿಮೆಗಿಂತ 14% ದೊಡ್ಡದಾಗಿ ಮತ್ತು 30% ಪ್ರಕಾಶಮಾನವಾಗಿ ಗೋಚರಿಸುತ್ತದೆ