ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು
-ಉತ್ತರ – ನವಿಲು

ಒಂದು ಹಸ್ತಕ್ಕೆ ನೂರೆಂಟು ಬೆರಳು
ಉತ್ತರ – ಬಾಳೆಗೊನೆ

ಸಾಗರ ಪುತ್ರ, ಸಾರಿನ ಮಿತ್ರ
ಉತ್ತರ – ಉಪ್ಪು

ಅಮ್ಮನ ಆಕಾಶ ವಾಣಿ ನಾನು
ಉತ್ತರ – ಮಗು

ಚಿಕ್ಕಕ್ಕ ನಿಗೆ ಪುಕ್ಕುದ್ದ
ಉತ್ತರ- ಸೌಟು

ಅಕ್ಕನ ಮೇಲೆ ಛತ್ರಿ
ಉತ್ತರ – ರೆಪ್ಪೆ

ಒಂದು ಹಪ್ಪಳ ಉರಿಗೆಲ್ಲ ಊಟ
ಉತ್ತರ – ಚಂದ್ರ

ಬೆಳ್ಳಿ ಸಮುದ್ರ ದಲ್ಲಿ ಕಪ್ಪು ಸೂರ್ಯ
ಉತ್ತರ – ಕಣ್ಣು

ನೀಲಿ ಕೆರೆಯಲಿ ಬಿಳಿ ಮೀನು
ಉತ್ತರ- ನಕ್ಷತ್ರ

ಬಾ ಅಂದರೆ ಬರೋಲ್ಲ, ಹೋಗು ಅಂದರೆ ಹೋಗಲ್ಲ
ಉತ್ತರ – ಮಳೆ

✍🏻ಬರವಣಿಗೆ : ಜಯಪ್ರದ , ಕನ್ಯಾನ


