
ಅಂಧಕಾರವ ದೂರವಾಗಿಸಿ ಹರಿಸುವ ಜ್ಞಾನವೆಂಬ ಬೆಳಕಿನತ್ತ ನಮ್ಮ ಚಿತ್ತ
ಹಣತೆಯ ಹೊತ್ತಿಸಿ ಕರಗಿಸುವ
ದ್ವೇಷವನು ದೇಶದ ಸುತ್ತ ಮುತ್ತ
ಮನೆಮನಗಳಲಿ ನೀಗಲಿ ಮಮತೆಯ ಕೊರತೆ
ದೀಪಾವಳಿಯ ಶುಭ ದಿನದಿ
ಬೆಳಗಲಿ ಎಲ್ಲೆಡೆ ಹಣತೆ

ಹಣದ ದುರಾಸೆಯ ಬದಿದೂಡಿ
ಆಚರಿಸುವ ಹಬ್ಬವ ಒಗ್ಗೂಡಿ
ನೀಗಲಿ ಎಲ್ಲರಲಿ ಆತಂಕ
ಮೊಳಗಲಿ ಮನೆಮನೆಗೆ ಶಂಖ
ದೀಪದ ಜ್ಯೋತಿ ಹರಡಲಿ ಎಲ್ಲೆಡೆ
ಸತ್ಕಾರ್ಯ ಸತ್ಚಿಂತನೆ ಮೂಡಿ
ಸಡಗರದ ದೀಪಾವಳಿಯ ಆಚರಣೆಯ ಮಾಡಿ
~ ಕೀರ್ತನಾ
ಕೋಟೇಶ್ವರ



