ಕಾರು-ಬಸ್ಸು ಮುಖಾಮುಖಿ ಡಿಕ್ಕಿ: ಮಾಜಿ ಪ್ರವಾಸಿಯ ದಾರುಣ ಅಂತ್ಯ : ಪುತ್ರ ಗಂಭೀರ
ಮಂಜೇಶ್ವರ: ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ತಾಳದ ನೆಲ್ಲಿಕಟ್ಟೆ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಪ್ರವಾಸಿಗೆ ದಾರುಣ ಅಂತ್ಯ.ನೆಲ್ಲಿಕಟ್ಟೆ ನಿವಾಸಿ ಶಂಸುದ್ದೀನ್ ಪೈಕ (68) ಸಾವನ್ನಪ್ಪಿದ ದುರ್ದೈವಿ. ಅವರ ಪುತ್ರ ಸಲ್ಮಾನ್ ಫಾರಿಸ್ (22) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಶಂಸುದ್ದೀನ್ ಅವರು ತಮ್ಮ ಮಗನೊಂದಿಗೆ ಕಾರಿನಲ್ಲಿ ಕಾಸರಗೋಡು ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿರುವ ಮಧ್ಯೆ ಕಾಸರಗೋಡು ಡಿಪೋದಿಂದ…