ಪೊಸೋಟ್ ಸೇತುವೆ ಕೆಳಗೆ ಶೌಚಾಲಯ ಮಲಿನ ನೀರು – ಸ್ಥಳೀಯರಲ್ಲಿ ಆತಂಕ
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೊಸೋಟ್ ಸೇತುವೆ ಕೆಳಭಾಗದಲ್ಲಿ ರಾತ್ರಿ ವೇಳೆ ಟ್ಯಾಂಕರ್ ಲಾರಿಗಳ ಮೂಲಕ ಶೌಚಾಲಯ ಮಲಿನ ನೀರನ್ನು ನದಿಗೆ ಬಿಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯದಿಂದ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯರ ಪ್ರಕಾರ, ಮಲಿನ ನೀರು ನದಿಗೆ ಹರಿಯುವುದರಿಂದ ದುರ್ವಾಸನೆ ವ್ಯಾಪಕವಾಗಿ ಹರಡುತ್ತಿದ್ದು, ಜನರು ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಮನೆಗಳ ಬಾವಿಗಳಿಗೂ ಈ ಮಲಿನ ನೀರು ಸೇರಿಕೊಂಡಿರುವುದಾಗಿ ಆರೋಪಿಸಲಾಗಿದೆ. ಇದೇ ಪ್ರದೇಶದಲ್ಲಿ…