Avatar

NAMMA MEDIA 24X7

ಡಿ. 29ರಂದು ಬೇಕಲ್ ಫೆಸ್ಟ್ ವೇಳೆ ರೈಲು ಬಡಿದು ಮಗ ಮೃತಪಟ್ಟ ಖಿನ್ನತೆಯಿಂದ ಸಾವಿಗೆ ಶರಣಾದ ದಂಪತಿ

ಕಾಸರಗೋಡು: ಬೇಕಲ ಬೀಚ್ ಫೆಸ್ಟ್ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಯ ತಂದೆ, ತಾಯಿ ಮನೆಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಯಿನಾಚಿಪರಂಬ್‌ನ ವೇಣುಗೋಪಾಲನ್ ನಾಯರ್ (55), ಪತ್ನಿ ಸ್ಮಿತಾ (45) ಎಂಬಿವರು ಮೃತಪಟ್ಟವರಾಗಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯ ಸೆಂಟ್ರಲ್ ಹಾಲ್‌ನಲ್ಲಿ ಮೃತದೇಹಗಳು ಕಂಡು ಬಂದಿವೆ. ವಿಷಯ ತಿಳಿದು ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ವೇಣುಗೋಪಾಲನ್ ನಾಯರ್- ಸ್ಮಿತಾ ದಂಪತಿಯ ಏಕೈಕ ಪುತ್ರನೂ, ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂ. ಶಿವನಂದನ್ (19) ಡಿಸೆಂಬರ್…

Read More

ಗುರುಪುರ ಜಂಕ್ಷನ್‌ನಲ್ಲಿ ನಿಯಂತ್ರಣ ತಪ್ಪಿದ ಲಾರಿ – ಬೇಕರಿ, ಮೊಬೈಲ್ ಅಂಗಡಿಗೆ ಡಿಕ್ಕಿ

ಗುರುಪುರ: ಕೆಂಪು ಬಾಕ್ಸೈಟ್ ತುಂಬಿಕೊಂಡು ಬರುತ್ತಿದ್ದ ಲಾರಿ ಗುರುಪುರ ಜಂಕ್ಷನ್‌ನಲ್ಲಿ ನಿಯಂತ್ರಣ ತಪ್ಪಿ ಅಂಗಡಿಗಳಿಗೆ ಗುದ್ದಿದ ಘಟನೆ ಇಂದು ಸಂಭವಿಸಿದೆ. ಲಾರಿ ನಿಯಂತ್ರಣ ತಪ್ಪಿ ಜಂಕ್ಷನ್ ಬಳಿ ಇರುವ ಮಿನಿ ಬಜಾರ್ ಬೇಕರಿ ಹಾಗೂ ಸಮೀಪದ ಮೊಬೈಲ್ ಅಂಗಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಅಂಗಡಿಗಳ ಮುಂಭಾಗಕ್ಕೆ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ. ಘಟನೆಯ ವೇಳೆ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಕರಿಸಿದರು.

Read More

ಉಡುಪಿ ಅಬಕಾರಿ ಡಿಸಿ ಮನೆ ಸೇರಿದಂತೆ 15 ಕಡೆ ಲೋಕಾಯುಕ್ತ ದಾಳಿ-8.69 ಕೋಟಿ ಮೌಲ್ಯದ ಆಸ್ತಿ ಪತ್ತೆ !

ಉಡುಪಿ: ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ನಡೆದ ಲೋಕಾಯುಕ್ತ ದಾಳಿಯ ಭಾಗವಾಗಿ ಉಡುಪಿ ಜಿಲ್ಲಾ ಅಬಕಾರಿ ಡಿಸಿ ಶ್ರೀನಿವಾಸ್ ಟಿ.ಎಂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೂ ಮಹತ್ವದ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು ರೂ.8 ಕೋಟಿ 69 ಲಕ್ಷ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಮಾರ್ಚ್ 11ರಿಂದ ಮಾರ್ಚ್ 12ರವರೆಗೆ ಎರಡು ದಿನಗಳ ಕಾಲ ಈ ಶೋಧ ಕಾರ್ಯಾಚರಣೆ ನಡೆಯಿತು. ಅಧಿಕಾರಿಗೆ ಸಂಬಂಧಿಸಿದಂತೆ ಒಟ್ಟು 15 ಸ್ಥಳಗಳಲ್ಲಿ…

Read More

ಉಡುಪಿ: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎನ್‌ಆರ್‌ಸಿ ಕೇಂದ್ರ ಇಲ್ಲದಿರುವುದು ಖೇಧಕರ- ಶಶಿಧರ್ ಕೋಸಂಬೆ

ಉಡುಪಿ: ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಶುಕ್ರವಾರ ಸದಸ್ಯರೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಆಹಾರ, ಚಿಕಿತ್ಸೆ ಮತ್ತು ಆರೈಕೆ ನೀಡಿ ಆರೋಗ್ಯವನ್ನು ಸುಧಾರಿಸುವ ಮಕ್ಕಳ ಪೌಷ್ಠಿಕಾಂಶ ಪುನರ್ವಸತಿ ಕೇಂದ್ರ(ಎನ್‌ಆರ್‌ಸಿ)ವೇ ಉಡುಪಿ ಜಿಲ್ಲಾ ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಲ್ಲದೆ ಇರುವುದು ಖೇಧಕರ ಹೇಳಿದರು….

Read More

ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ನೈಸರ್ಗಿಕ ಅನಿಲವನ್ನು ಪೂರೈಸಲು ನಗರ ಅನಿಲ ವಿತರಣಾ ಜಾಲವನ್ನು ಅಭಿವೃದ್ಧಿಪಡಿಸುತ್ತಿರುವ ಭಾರತ ಸರ್ಕಾರದ ಸಂಸ್ಥೆಯಾದ ಗೈಲ್ (ಇಂಡಿಯಾ) ಲಿಮಿಟೆಡ್‍ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಗೈಲ್ ಗ್ಯಾಸ್ ಲಿಮಿಟೆಡ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದೊಂದಿಗೆ ಬೈಕಂಪಾಡಿಯಲ್ಲಿ ಗುರುವಾರ ಆಫ್-ಸೈಟ್ ತುರ್ತು ಅಣಕು ಡ್ರಿಲ್ ಅನ್ನು ನಡೆಸಿತು. ಕಾರ್ಖಾನೆಗಳ ಉಪನಿರ್ದೇಶಕ ಡಾ.ರಾಜೇಶ್ ಮಿಶ್ರಿಕೋಟಿ, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯ್, ಕಂದಾಯ ಇಲಾಖೆ, ಕರ್ನಾಟಕ ಅಗ್ನಿಶಾಮಕ…

Read More

ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಶ್ವ ವಿದ್ಯಾಲಯ ಕಾಲೇಜು ಮಂಗಳೂರು ಹಾಗೂ ವುಮೆನ್ಸ್ ವಿಂಗ್ ಐ.ಕ್ಯೂ.ಎ.ಸಿ. ಇನ್ ಅಸೋಸಿಯೆಶನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ಆರ್.ತಿಮ್ಮಯ್ಯ ಮಾತನಾಡಿ, ಲಿಂಗಾನುಪಾತದ ಅಸಮಾನತೆಯ ಬಗ್ಗೆ, ಹೆಣ್ಣಿನ ಮಹತ್ವದ ಕುರಿತು ಹಾಗೂ ಲಿಂಗ ಸಮಾನತೆಯನ್ನು ಕಾಪಾಡುವಲ್ಲಿ ಯುವ ಪೀಳಿಗೆಗಳು ಹೆಚ್ಚಿನ ಪ್ರಾಮುಖ್ಯತೆ ವಹಿಸಬೇಕು ಎಂದರು….

Read More

ಶ್ರೀ ಗುಳಿಗ – ಶ್ರೀ ಕೊರಗ ತನಿಯ ಸನ್ನಿಧಿ ಕಾಯಿಮಲೆನಲ್ಲಿ ನೇಮೋತ್ಸವ ಮಾರ್ಚ್ 14–15ರಂದು

ಕಾಸರಗೋಡು: ಅಂಜೆ ಸಮೀಪದ ಬೆಳ್ಳೂರು, ಕಾಯಿಮಲೆದಲ್ಲಿರುವ ಶ್ರೀ ಗುಳಿಗ – ಶ್ರೀ ಕೊರಗ ತನಿಯ ಸನ್ನಿಧಿಯಲ್ಲಿ ನೇಮೋತ್ಸವವು ಮಾರ್ಚ್ 14 ಮತ್ತು 15, 2026 ರಂದು ಶನಿವಾರ ಮತ್ತು ರವಿವಾರ ಭಕ್ತಿಭಾವದಿಂದ ನಡೆಯಲಿದೆ. ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭಮಾಸದ 20ನೇ ದಿನವಾದ ಮಾರ್ಚ್ 14ರಂದು ಶ್ರೀ ಸನ್ನಿಧಿಯಲ್ಲಿ ಶ್ರೀ ಗುಳಿಗ ಹಾಗೂ ಶ್ರೀ ಕೊರಗತನಿಯ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು–ಮನ–ಧನಗಳಿಂದ ಸಹಕರಿಸಿ ದೈವಗಳ ಅರಸಿನ ಹುಡಿ…

Read More

ನಾಳೆ ಶ್ರೀ ಕ್ಷೇತ್ರ ಶಂಕರಪುರಕ್ಕೆ ಬಜರಂಗಿ ಪ್ರವೇಶ….

ಕಟಪಾಡಿ, ಮಾ. 12: ಶ್ರೀ ಕ್ಷೇತ್ರ ಶಂಕರಪುರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 19 ಅಡಿ ಎತ್ತರದ ಏಕಶಿಲಾ ಬಜರಂಗಿ ಮೂರ್ತಿಯ ಪ್ರವೇಶವು ಮಾ. 14ರಂದು ಭವ್ಯ ಮೆರವಣಿಗೆಯೊಂದಿಗೆ ನಡೆಯಲಿದೆ ಎಂದು ಶ್ರೀ ಸಾಯಿ ಈಶ್ವರ ಗುರೂಜಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 14ರಂದು ಸಂಜೆ 3.30ಕ್ಕೆ ಉಡುಪಿ ಜೋಡುಕಟ್ಟೆಯಿಂದ ವಾಹನಗಳ ಭವ್ಯ ಮೆರವಣಿಗೆಯೊಂದಿಗೆ ಬಜರಂಗಿ ಮೂರ್ತಿಯ ಪ್ರವೇಶ ಆರಂಭಗೊಳ್ಳಲಿದೆ ಎಂದು ತಿಳಿಸಿದರು. ಕಳೆದ 11 ವರ್ಷಗಳಿಂದ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಶ್ರೀ…

Read More

ಇರಾನ್–ಇಸ್ರೇಲ್–ಅಮೆರಿಕಾ ಸಂಘರ್ಷ: ಭಾರತಕ್ಕೆ ಇಂಧನ ಮತ್ತು ಆರ್ಥಿಕ ಆತಂಕ

ನವದೆಹಲಿ: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕಾ ನಡೆಸುತ್ತಿರುವ ದಾಳಿಗೆ ಈಗ ಎರಡು ವಾರಗಳು ಪೂರೈಸಿದ್ದು, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಈ ಸಂಘರ್ಷವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ವಿಶೇಷವಾಗಿ ಇಂಧನ ಅವಲಂಬಿತ ದೇಶಗಳಾದ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಭಾರತ ತನ್ನ ಇಂಧನ ಅವಶ್ಯಕತೆಗಳಿಗೆ ಕೊಲ್ಲಿ ರಾಷ್ಟ್ರಗಳನ್ನೇ ಬಹಳ ಮಟ್ಟಿಗೆ ಅವಲಂಬಿಸಿದ್ದು, ದೇಶಕ್ಕೆ ಬರುವ ಸುಮಾರು 80 ಶೇಕಡಾ ಅನಿಲ ಹಾಗೂ 60 ಶೇಕಡಾ ತೈಲವು ಹೊರ್ಮುಜ್…

Read More

‘ಮುಟ್ಟಿನ ರಜೆ ಕಡ್ಡಾಯ ಮಾಡಬೇಡಿ’: ಪಿಐಎಲ್ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ದೇಶಾದ್ಯಂತ ಮಹಿಳಾ ಉದ್ಯೋಗಿಗಳು ಮತ್ತು ವಿದ್ಯಾರ್ಥಿನಿಯರಿಗೆ ಮುಟ್ಟಿನ (ಮೆನ್ಸ್ಟ್ರುಯಲ್) ರಜೆ ಕಡ್ಡಾಯಗೊಳಿಸಬೇಕು ಎಂಬ ಬೇಡಿಕೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಯಲ್ಯ ಬಾಗ್ನಿ ಅವರ ಪೀಠ ಈ ವಿಚಾರಣೆ ನಡೆಸಿ, ರಜೆ ನೀಡುವುದು ಸ್ವಯಂಪ್ರೇರಿತವಾಗಿ ಇದ್ದರೆ ಉತ್ತಮವಾದರೂ ಅದನ್ನು ಕಾನೂನು ಮೂಲಕ ಕಡ್ಡಾಯಗೊಳಿಸುವುದು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿತು. “ಒಂದು ವೇಳೆ ಈ ರೀತಿಯ ರಜೆಯನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಿದರೆ, ಕೆಲವು ಉದ್ಯೋಗದಾತರು…

Read More
error: Content is protected !!