Avatar

NAMMA MEDIA 24X7

ರೈಲ್ವೇ ಜಾಗದಲ್ಲಿ ಅಕ್ರಮ ಮರ ಕಟಾವು: ಉಪ್ಪಳದ ನಾಲ್ವರು ಆರ್‌ಪಿಎಫ್ ಬಲೆಗೆ

ಮಂಜೇಶ್ವರ: ರೈಲ್ವೇ ಇಲಾಖೆಯ ಸ್ವಾಧೀನದಲ್ಲಿರುವ ಜಾಗದಿಂದ ತೇಗು ಸೇರಿದಂತೆ 11 ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ ಪ್ರಕರಣದಲ್ಲಿ ಉಪ್ಪಳದ ನಾಲ್ಕು ಮಂದಿಯನ್ನು ಆರ್‌ಪಿಎಫ್ ಬಂಧಿಸಿದೆ. ರೋಶನ್ ಸಮೀರ್, ದಾದಪೀರ್, ಅಬ್ದುಲ್ಲ ಕುಂಣಿ ಹಾಗೂ ರಾಜೇಶ್ ಬಂಧಿತರು. ಮಂಗಳೂರು ಆರ್‌ಪಿಎಫ್ ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಕಟಾವು ಮಾಡಿದ ಮರಗಳು, ಸಾಗಾಣಿಕೆ ವಾಹನ ಮತ್ತು ಕತ್ತರಿಸುವ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ರೈಲ್ವೇ ಜಾಗಕ್ಕೆ ಹೊಂದಿಕೊಂಡಿರುವ ಆರೋಪಿಗಳ ಭೂಮಿಯಿಂದ ಕಡಿಯುವ ನೆಪದಲ್ಲಿ ರೈಲ್ವೇ ಭೂಮಿಯಲ್ಲೂ ಮರಗಳನ್ನು ಕಡಿದಿರುವುದು…

Read More

ಕಾಸರಗೋಡು ನಗರಸಭೆಯ ಪ್ರಥಮ ವಾರ್ಡು ಸಭೆ. ಮಾದರಿ ನಗರಸಭೆಯ ನಿರ್ಮಾಣ- ಶಾಹಿನಾ ಸಲೀಂ.

ಕಾಸರಗೋಡು: ಕಾಸರಗೋಡು ನಗರಸಭೆಯ 2026- 27ನೇ ವಾರ್ಷಿಕ ಯೋಜನೆಯ ರೂಪೀಕರಣಕ್ಕಾಗಿ 9ನೇ ವಾರ್ಡ್ ನುಳ್ಳಿಪಾಡಿ ( ಅಣoಗೂರು, ಜೆ.ಪಿ ನಗರ, ಕನ್ನಡ ಗ್ರಾಮ) ದ ವಾರ್ಡ್ ಸದಸ್ಯರ ಸಭೆಯು ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ಫೆಬ್ರವರಿ 9ರಂದು ಜರುಗಿತು. ವಾರ್ಡ್ ಸಭೆಯನ್ನು ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಉದ್ಘಾಟಿಸಿದರು. ಅವರು ಕಾಸರಗೋಡು ನಗರ ಸಭೆಯನ್ನು ರಾಜ್ಯದಲ್ಲಿ ಅತ್ಯುತ್ತಮ ನಗರಸಭೆಯನ್ನಾಗಿ ಜನರ ಸಹಕಾರದಿಂದ ರೂಪೀ ಕರಿಸುವುದಕ್ಕಾಗಿ ನಗರಸಭೆಯ ಎಲ್ಲಾ ವಾರ್ಡ್ ಸಭೆಗಳಿಗೆ ಮುಖತ ಭೇಟಿಯಾಗಿ ವಾರ್ಡ್ ಸದಸ್ಯರ…

Read More

ಉಚಿತ ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರ – ಫೆ.22ರಂದು

ಮಂಜೇಶ್ವರ: ಪಟ್ಲ ಫ್ರೆಂಡ್ಸ್ ಕ್ಲಬ್ (ರಿ.) ಚೇವಾರು ಪಟ್ಲ ವತಿಯಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಬಾಯಾರು ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಫೆಬ್ರವರಿ 22, 2026ರಂದು ಆಯೋಜಿಸಲಾಗಿದೆ. ನೇತ್ರ ತಪಾಸಣಾ ಶಿಬಿರವನ್ನು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣು ಆಸ್ಪತ್ರೆ, ಮಂಗಳೂರು ಇವರ ಸಹಕಾರದೊಂದಿಗೆ ನಡೆಸಲಾಗುತ್ತದೆ. ರಕ್ತದಾನ ಶಿಬಿರಕ್ಕೆ ನಿಟ್ಟೆ (Deemed to be University) ಜಸ್ಟಿನ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಮಂಗಳೂರು ಸಹಯೋಗ ನೀಡಲಿದೆ….

Read More

ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ – ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ ಹಾಗೂ ಪ್ರತಿಭಟನಾ ಸಭೆ

ಮಂಗಳೂರು: 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ 4 ಕಾರ್ಮಿಕ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ವಿರುದ್ಧ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತಂದ ತಿದ್ದುಪಡಿ ವಿರೋಧಿಸಿ ರೈತ ಕಾರ್ಮಿಕರ ನೇತೃತ್ವದಲ್ಲಿ ನಾಳೆ(ಫೆಬ್ರವರಿ 12) ಅಖಿಲ ಭಾರತ ಮಹಾಮುಷ್ಕರ ನಡೆಯಲಿದ್ದು,ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ,ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಗಳನ್ನು ನಡೆಸುವ ಮೂಲಕ ರೈತ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಲಿದ್ದಾರೆ…

Read More

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಲೋಕೇಶ್.ಯು ಮುಂಡಾನ್ ತ್ತಡ್ಕ ಇನ್ನಿಲ್ಲ

ಪುತ್ತಿಗೆ : ಅರ್ಧಿಕ ರಕ್ತದೊತ್ತಡದಿಂದ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಾಲಾಗಿದ್ದ ಪುತ್ತಿಗೆ ಬಳಿಯ ಮುಂಡಾನ್ ತ್ತಡ್ಕ ನಿವಾಸಿ ದಿl ರಾಮಚಂದ್ರ ಮತ್ತು ಸುಮತಿ ದಂಪತಿಗಳ ಏಕೈಕ ಪುತ್ರರಾದ ಲೋಕೇಶ್. ಯು (48) ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು . ಮೃತ ಇವರು ಶ್ರೀ ರಾಮ ಫೈನಾನ್ಸ್ ಕಂಪೆನಿಯ ಉದ್ಯೋಗದಲ್ಲಿ ತೊಡಗಿ ಕೆಲವು ವರ್ಷಗಳ ಬಳಿಕ ಡಿಸ್ಕ್ ಸಂಬಂಧಿತ ಅನಾರೋಗ್ಯದಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಮೃತ ಲೋಕೇಶ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರು…

Read More

ಪ್ರೊ. ಬಿ.ಎ. ವಿವೇಕ ರೈ ಇವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ … !

ಮಂಗಳೂರು: ಆಕೃತಿ ಆಶಯ ಪಬ್ಲಿಕೇಶನ್ಸ್ ಇದರ ವತಿಯಿಂದ ಪ್ರೊ. ಬಿ.ಎ. ವಿವೇಕ ರೈ ಇವರ ಕೃತಿ ಬಿಡುಗಡೆ ಸರಣಿ -1 ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆಯು ನಗರದ ಪತ್ರಿಕಾಭವನದಲ್ಲಿ ಇಂದು ನಡೆಯಿತು . ಕೃತಿ ಲೋಕಾರ್ಪಣೆಯ ನಂತರ ಪ್ರೊ. ಬಿ.ಎ. ವಿವೇಕ ರೈ ಪ್ರಾಸ್ತಾವಿಕ ನುಡಿಯನ್ನು ಆಡಿ, ಪತ್ರಿಕಾಭವನದಲ್ಲಿ ಈ ವರ್ಷದ ನನ್ನ ಮೊದಲ ಕೃತಿ ಬಿಡುಗಡೆ ಮಾಡುತ್ತಿರುವುದು ಖುಷಿ ತಂದಿದೆ . ಇದು ನನ್ನ ಅಸೆ ಕೂಡ ಆಗಿತ್ತು . ಈ ಕೃತಿಯಲ್ಲಿ…

Read More

ಜಾಲ್ಸೂರು ಭಾಗದ ರೈತರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ: ನೂತನ 33/11 ಕೆವಿ ಉಪಕೇಂದ್ರ ಮಂಜೂರಾತಿಗೆ ಶಾಸಕ ಕಿಶೋರ್ ಕುಮಾರ್ ಒತ್ತಾಯ

ಬೆಂಗಳೂರು: ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ, ನೂತನ 33/11 ಕೆವಿ (33/11 KV) ವಿದ್ಯುತ್ ಉಪಕೇಂದ್ರವನ್ನು ತುರ್ತಾಗಿ ಮಂಜೂರು ಮಾಡುವಂತೆ ಕೋರಿ ಪುತ್ತೂರು ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಗೌರವ್ ಗುಪ್ತ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬೆಂಗಳೂರಿನ ವಿಕಾಸ ಸೌಧದಲ್ಲಿ ಶ್ರೀ ಗೌರವ್ ಗುಪ್ತ ಅವರನ್ನು ಭೇಟಿಯಾದ…

Read More

ಅಬ್ಬಕ್ಕ @ 500 ರಾಷ್ಟ್ರೀಯ ವಿಚಾರ ಸಂಕೀರ್ಣಕ್ಕೆ 100ರ ಸಂಭ್ರಮ

ಮಂಗಳೂರು: ಭಾರತ ಉತ್ಕೃಷ್ಟ ಕ್ಷಾತ್ರ ಪರಂಪರೆಯನ್ನು ಹೊಂದಿರುವ ಮಹಾನ್ ರಾಷ್ಟ್ರ. ಪುರುಷರು ಮಹಿಳೆಯರಾದಿಯಾಗಿ ಅನೇಕರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ನೀಡಿದ್ದಾರೆ. ಅದೆಷ್ಟೋ ವೀರಗಾಥೆ ಇತಿಹಾಸದ ಪುಟಗಳಲ್ಲಿ ಅಳಿದು ಹೋಗಿದೆ. ಇನ್ನೊಂದಷ್ಟು ವಿಚಾರಗಳು ಬಲವಂತಕ್ಕೆ ಮಣಿದು ತೆರೆಮರೆಗೆ ಸರಿಸಲ್ಪಟ್ಟಿವೆ. ಅಂತಹ ಪರಂಪರೆಯಲ್ಲಿ ಕ್ಷಾತ್ರ ತೇಜದಲ್ಲಿ ಹೊಳೆಯಬೇಕಾಗಿದ್ದ ಮಹಿಳೆಯರದ್ದೂ ಸೇರಿಕೊಂಡಿದೆ ಅನ್ನುವುದು ದುರಂತ. ಹೆಣ್ಣನ್ನು ಅಬಲೆ, ಶೋಷಿತೆ ಎಂದು ನಮ್ಮ ಇತಿಹಾಸ ಪುಸ್ತಕಗಳು ಬಿಂಬಿಸಿದ್ದೇ ಹೆಚ್ಚು. ಆದರೆ ನಿಜವಾದ ಭಾರತದ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಅಪ್ರತಿಮ ಧೈರ್ಯ,…

Read More

ಪಲ್ಗುಣಿ ನದಿ ಮಾಲಿನ್ಯ ತೀವ್ರ – ಕೈಗಾರಿಕೆಗಳ ವಿರುದ್ಧ ಆಕ್ರೋಶ

ಮಂಗಳೂರು:ಕೂಳೂರು ಬಳಿಯ ರಾಯಿಕಟ್ಟೆ ಪ್ರದೇಶದಲ್ಲಿ ಹರಿಯುವ ಪಲ್ಗುಣಿ ನದಿಗೆ ಸೇರುವ ಹಳ್ಳದಲ್ಲಿ ನೀರು ಕೊಳೆತು ನಾರುತ್ತಿದೆ. ಮೀನುಗಳು ಸತ್ತಿವೆ.ಕಳೆದ ಒಂದು ವಾರದಿಂದ ಈ ಸ್ಥಿತಿ ಇದ್ದರೂ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಈ ಭಾಗದ ಕೈಗಾರಿಕೆಗಳು ಹಲವು ವರ್ಷಗಳಿಂದ ತಮ್ಮ ಕೈಗಾರಿಕಾ ಮಾಲಿನ್ಯವನ್ನು ಆನಧಿಕೃತವಾಗಿ ಪಲ್ಗುಣಿಯನ್ನು ಸೇರುವ ಹಲವು ಹಳ್ಳಗಳಿಗೆ ನೇರವಾಗಿ ಹರಿಸುತ್ತಿವೆ. ಈ ಕುರಿತು ಪ್ರತಿಭಟನೆಗಳನ್ಜು ನಡೆಸಿದರೂ ಸೂಕ್ತವಾದ ಕ್ರಮಗಳು ಜರುಗುತ್ತಿಲ್ಲ. ಈಗ ಪರಿಸ್ಥಿತಿ ಅತಿರೇಕಕ್ಕೆ ತಲುಪಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

Read More

ಮಂಗಳೂರು-ಬೆಂಗಳೂರು ಪ್ರಯಾಣಿಕರಿಗೆ ಆತಂಕ – ಜನಪ್ರಿಯ ರೈಲು ಸಮಯ ಬದಲಾವಣೆಯ ಚರ್ಚೆ

ಮಂಗಳೂರು : ಅದ್ಯಾಕೋ ಏನೋ ರೈಲ್ವೇಗೆ ಮಂಗಳೂರಿಗರೆಂದರೆ ಭಾರಿ ಸದರ, ಏನು ಮಾಡಿದರೂ ಮಾತನಾಡುವುದಿಲ್ಲ ಎಂಬ ನಂಬಿಕೆ. ಆದ್ದರಿಂದ ಅದು ಇರುವ ಸೌಲಭ್ಯಗಳನ್ನು ಮೊಟಕು ಮಾಡಲು ಹೊರಟಿದೆ. ಆ ಕುರಿತ ಒಂದು ಸ್ಟೋರಿ ಇದು.ಮಂಗಳೂರು ರೈಲು ನಿಲ್ದಾಣ ಅತ್ಯಂತ ಹಳೆಯ ನಿಲ್ದಾಣಗಳಲ್ಲಿ ಒಂದು. ಮಂಗಳೂರಿನ ಹಂಚು ಸಾಗಾಟಕ್ಕಾಗಿ ಇಲ್ಲಿಗೆ ರೈಲು ಮಾರ್ಗ ಬಂತು. ಹಂಚಿನ ಕಾಲ ಮುಗಿಯಿತು. ರೈಲು ಪ್ರಯಾಣ ಮರುರೂಪಿಸಲ್ಪಟ್ಟ ಕಾಲಘಟ್ಟ ಇದು.ಆದರೆ ಮಂಗಳೂರಿನ ಮಟ್ಟಿಗೆ ನೆಮ್ಮದಿಯ ರೈಲು ಪ್ರಯಾಣ ಎಂದರೆ ಅದೊಂದು ಕನಸು ಎಂಬಂತಾಗುತ್ತಿದೆ….

Read More
error: Content is protected !!