ವೈಭವದ ಕರಾವಳಿ ಉತ್ಸವ, ಕಂಬಳದ ಅಬ್ಬರದಲ್ಲಿ ಬಡವರು, ದುರ್ಬಲ ಸಮುದಾಯಗಳ ಸಂಕಷ್ಟಗಳನ್ನು ಜಿಲ್ಲಾಡಳಿತ ಕಡೆಗಣಿಸಿದೆ : ಮುನೀರ್ ಕಾಟಿಪಳ್ಳ
ಮನೆ, ನಿವೇಶನ ಹಸ್ತಾಂತರಿಸಲು ಆಗ್ರಹಿಸಿ ಫಲಾನುಭವಿ ಕೊರಗ ಕುಟುಂಬಗಳಿಂದ 12 ತಾಸುಗಳ ಧರಣಿ.ಕುಡುಪು ಗ್ರಾಮದ ಮಂಗಳಜ್ಯೋತಿಯಲ್ಲಿ ಕೊರಗ ಕುಟುಂಬಗಳಿಗೆ 2018 ರಲ್ಲಿ ನಗರ ಪಾಲಿಕೆ ಮಂಜೂರಾಗಿರುವ ಮನೆ ನಿವೇಶನ ಹಸ್ತಾಂತರಿಸದೆ ಸತಾಯಿಸುತ್ತಿರುವ ಮಂಗಳೂರು ನಗರ ಪಾಲಿಕೆ ಹಾಗು ಜಿಲ್ಲಾಡಳಿತದ ಅಮಾನವೀಯ ಧೋರಣೆಯನ್ನು ಖಂಡಿಸಿ, ತಕ್ಷಣವೆ ನಿವೇಶನ ಸ್ವಾಧೀನ ನೀಡುವಂತೆ ಆಗ್ರಹಿಸಿ ಫಲಾನುಭವಿ ಕುಟುಂಬಗಳು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮಂಗಳೂರು ನಗರ ಪಾಲಿಕೆ ಕಚೇರಿ ಮುಂಭಾಗ 12 ತಾಸುಗಳ ಧರಣಿ ಸತ್ಯಾಗ್ರಹ ನಡೆಸಿದರು. ಧರಣಿಯನ್ನು…