ಓಣಂ ಹಬ್ಬದ ಪ್ರಯುಕ್ತ ವಿತರಣೆಯ ಉಧ್ಘಾಟನೆ.

ಓಣಂ ಹಬ್ಬದ ಪ್ರಯುಕ್ತ ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಪೇರ್ ಸೊಸೈಟಿ ವತಿಯಿಂದ ನಿತ್ಯೋಪಯೋಗಿ ಸಾಮಾಗ್ರಿಗಳ ವಿತರಣೆಯ ಉಧ್ಘಾಟನೆಯು ಇಂದು ಸೊಸೈಟಿ ಯ ನೂತನ ಕಟ್ಟಡದಲ್ಲಿ ನಡೆಯಿತು.

ಸೊಸೈಟಿ ಅಧ್ಯಕ್ಷ ರಾದ ವಿಶ್ವನಾಥ ಕುದೂರು ರವರ ಅಧ್ಯಕ್ಷತೆಯಲ್ಲಿ ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಭಾರತಿ. ಎಸ್ ಉಧ್ಘಾಟಿಸಿದರು. ನಿರ್ದೇಶಕರಾದ ಸುಂದರ ಜೋಗಿಬೆಟ್ಟು, ಅಬ್ದುಲ್ ಲತೀಫ್, ರಮನಾಥ ಶೆಟ್ಟಿ, ಅಬೂಬಕ್ಕರ್ ಸಿಧ್ಧೀಕ್, ಸೀತಾ ಅಂಕದಕಳ, ಪ್ರಮೀಳಾ ವೇಗಸ್, ಶಾಂತರಾಮ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಮೊಯ್ದಿನ್ ಕುಂಞ ತಲೆಕ್ಕಿ,ಸಹಕಾರಿಗಳಾದ ಡಿ. ಬೂಬ, ಅಬೂಬಕ್ಕರ್ ಎಂ, ಗಣೇಶ್ ಪಾವೂರು ಹಾಗೂ ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸೊಸೈಟಿ ಕಾರ್ಯದರ್ಶಿ ರವೀಂದ್ರ ಎಂ ಸ್ವಾಗತಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!