ಇನ್ನು ಪ್ರಯಾಣದ ಹತ್ತು ಗಂಟೆ ಮೊದಲೇ ರೈಲ್ವೇ ರಿಸರ್ವೇಷನ್ ಚಾರ್ಟ್ ಸಿದ್ದ.. ! ರೈಲ್ವೆ ಇಲಖೆಯಿಂದ ಹೊಸ ಆದೇಶ.. !
ನವದೆಹಲಿ:ಇನ್ನು ಪ್ರಯಾಣದ ಹತ್ತು ಗಂಟೆ ಮೊದಲೇ ರೈಲ್ವೇ ರಿಸರ್ವೇಷನ್ ಚಾರ್ಟ್ ಸಿದ್ದಗೊಳ್ಳಲಿದೆ.ಇದರಿಂದ ರೈಲು ಪ್ರಯಾಣಿಕರಿಗೆ ದೊಡ್ಡ ರಿಲೀಫ್ ಸಿಗಲಿದೆ. ಇನ್ನು ರೈಲು ಪ್ರಯಾಣಿಕರು ತಮ್ಮ ಟಿಕೆಟ್‌ಗಳು ದೃಢೀಕರಿಸಲ್ಪಟ್ಟಿದೆಯೇ ಅಥವಾ ಇಲ್ಲವೇ ಎಂಬುದನ್ನು 10 ಗಂಟೆಗಳ ಮುಂಚಿತವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲಿ ರೈಲ್ವೆ ಹೊಸ ಆದೇಶ ಹೊರಡಿಸಿದೆ. ಇನ್ನು ಸೀಟ್ ರಿಸರ್ವೇಷನ್ ಚಾರ್ಟ್ ಮುಂಚಿತವಾಗಿ ಸಿದ್ಧಪಡಿಸಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ. ರೈಲ್ವೆ ಇಲಾಖೆಯ ಪ್ರಕಾರ, ಬೆಳಗ್ಗೆ 5:01ರಿಂದ ಮಧ್ಯಾಹ್ನ 2:00 ರವರೆಗೆ ಚಲಿಸುವ ರೈಲುಗಳಿಗೆ ಮೊದಲ ರಿಸರ್ವೇಷನ್ ಪಟ್ಟಿಯನ್ನು…