ಮಾನವೀಯತೆ ಮೆರೆದ ಮಂಜೇಶ್ವರದ ಪೀಸ್ ಕ್ರಿಯೇಟಿವ್ ಶಾಲಾ ವಿದ್ಯಾರ್ಥಿಗಳು: ವೆನ್ಲಾಕ್ ಆಸ್ಪತ್ರೆ ರೋಗಿಗಳಿಗೆ ಸಾಂತ್ವನ
ಮಂಜೇಶ್ವರ: ಗಡಿ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ಇಲ್ಲಿನ ಪೀಸ್ ಕ್ರಿಯೇಟಿವ್ ಶಾಲೆಯ ವಿದ್ಯಾರ್ಥಿಗಳು ಗುರುವಾರದಂದು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ಮೂಲಕ ವಿಭಿನ್ನ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕ್ಯಾನ್ಸರ್ ಸೇರಿದಂತೆ ವಿವಿಧ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು, ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಕೇವಲ ಭೇಟಿ ನೀಡುವಿಕೆಗೆ ಸೀಮಿತವಾಗದೆ, ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಿ ಅವರ ಮೊಗದಲ್ಲಿ ಮಂದಹಾಸ ಮೂಡಿಸುವ ಮೂಲಕ ಈ ಪುಟಾಣಿಗಳು ಸಮಾಜಕ್ಕೆ ಮಾದರಿಯಾದರು. ಆಸ್ಪತ್ರೆಯ…
