ಮಾರ್ಚ್ 6ರಂದು ಟಾಕೀಸ್ ಆ್ಯಪ್‌ನಲ್ಲಿ ‘ಧರ್ಮ ಚಾವಡಿ’ ಸಿನೆಮಾ ಬಿಡುಗಡೆ
ಕೃಷ್ಣವಾಣಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಜಗದೀಶ್ ಅಮೀನ್ ನಿರ್ಮಾಣದ, ಕಳೆದ ವರ್ಷ ಕರಾವಳಿಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡ ತುಳು ಚಲನಚಿತ್ರ ‘ಧರ್ಮ ಚಾವಡಿ’ ಇದೀಗ ಮಾರ್ಚ್ 6ರಂದು ಟಾಕೀಸ್ ಆ್ಯಪ್ (Talkies App) OTT ಮೂಲಕ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ರಮೇಶ್ ರೈ ಕುಕ್ಕುವಳ್ಳಿ ಮಾತನಾಡಿ, “ಮುಂದಿನ ದಿನಗಳಲ್ಲಿ ಈ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಿ ಕರ್ನಾಟಕದ ಇತರ ಭಾಗಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ” ಎಂದು ಮಾಹಿತಿ ನೀಡಿದರು….
