ದೇವಸ್ಥಾನದ ಭೂಮಿಯ ತೆರಿಗೆ ಪಾವತಿಗೆ ಲಂಚ ಪಡೆಯುತ್ತಿದ್ದ ಗ್ರಾಮ ಕಚೇರಿ ಸಿಬ್ಬಂದಿ ವಿಜಿಲೆನ್ಸ್ ಬಲೆಗೆ
ಮಂಜೇಶ್ವರ :: ದೇವಸ್ಥಾನಕ್ಕೆ ಭಕ್ತರೊಬ್ಬರು ದಾನವಾಗಿ ನೀಡಿದ ಭೂಮಿಯನ್ನು ಸಮಿತಿಯ ಹೆಸರಿಗೆ ವರ್ಗಾಯಿಸಿ, ತೆರಿಗೆ ಪಾವತಿಸಲು ಸಹಾಯ ಮಾಡುವುದಾಗಿ ನಂಬಿಸಿ ಲಂಚ ಪಡೆಯುತ್ತಿದ್ದ ಉಪ್ಪಳ ಗ್ರೂಪ್ ಗ್ರಾಮ ಕಚೇರಿಯ ಕ್ಯಾಶುಯಲ್ ಸ್ವೀಪರ್ ಓರ್ವನನ್ನು ಕಾಸರಗೋಡು ವಿಜಿಲೆನ್ಸ್ ತಂಡವು ಕೈಯಾರೆ ಬಂಧಿಸಿದೆ. ಕೊಡಿಬೈಲ್ ನಿವಾಸಿ ಶಿವಪ್ರಸಾದ್ ಕೆ. ಬಂಧಿತ ಆರೋಪಿ. ಮಂಗಲ್ಪಾಡಿ ಯ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರು ಭೂಮಿಯ ವರ್ಗಾವಣೆ ಮತ್ತು ತೆರಿಗೆ ಪಾವತಿಗಾಗಿ ಒಂದು ತಿಂಗಳ ಹಿಂದೆ ಉಪ್ಪಳ ಗ್ರಾಮ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ತೆರಿಗೆ…
