ಜೂನ್‌ನಲ್ಲಿ ಬೆಂಗಳೂರು-ಮಂಗಳೂರು ವಂದೇ ಭಾರತ್; ಘಾಟ್ ಮಾರ್ಗದಲ್ಲಿ ಟ್ರಯಲ್ ರನ್ ಆರಂಭ
ಮಂಗಳೂರು:ಜೂನ್ ಮೊದಲ ವಾರದಲ್ಲಿ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಮಾರ್ಗದಲ್ಲಿ ಇಲೆಕ್ಟ್ರಿಕ್ ರೈಲಿನ ಟ್ರಯಲ್ ರನ್‌ನಡೆಯಲಿದೆ. ಜೂನ್‌ನಲ್ಲೇ ಬೆಂಗಳೂರು-ಮಂಗಳೂರು ವಂದೇ ಭಾರತ್ ಆರಂಭವಾಗಲಿದೆ. ಬೆಂಗಳೂರು ಹಾಗೂ ಕರಾವಳಿ ಕರ್ನಾಟಕದ ನಡುವೆ ಬಹುನಿರೀಕ್ಷಿತ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ಕಾರ್ಯಾಚರಣೆಗೆ ದಿನಗಣನೆ ಆರಂಭವಾಗಿದೆ. ಹಾಸನ-ಮಂಗಳೂರು ರೈಲು ಭಾಗದ ಹೊಸದಾಗಿ ವಿದ್ಯುದ್ದೀಕರಿಸಲಾದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ಮಾರ್ಗದ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ರೈಲ್ವೆ ಸಚಿವಾಲಯದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯ ಉನ್ನತ ತಂಡವು ಸಜ್ಜಾಗಿದೆ. ಜೂನ್ 1 ರಿಂದ ಆರಂಭವಾಗಲಿರುವ ಈ…