ಜ.26ರಂದು ಸಂತೆಕಟ್ಟೆ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಬಾಲ ಯುಗ್ಮ ಭರತನಾಟ್ಯ
ಉಡುಪಿ ಅಮ್ಮುಂಜೆಯ ಶ್ರೀ ಭ್ರಾಮರಿ ನಾಟ್ಯಾಲಯದ ರಜತ ಸಂಭ್ರಮದ ಪ್ರಯುಕ್ತ ಬಾಲ ಪ್ರತಿಭೆಗಳಿಂದ ಭರತ ನಾಟ್ಯ ` ಬಾಲ ಯುಗ್ಮ ನೃತ್ಯ ‘ ಕಾರ್ಯಕ್ರಮ ಜ.26ರಂದು ಸಂತೆಕಟ್ಟೆ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಸಂಜೆ 5 ಗಂಟೆಯಿಂದ ನಡೆಯಲಿದೆ.ಈ ಬಗ್ಗೆ ಸಂಸ್ಥೆಯ ವಿದ್ವಾನ್ ಕೆ.ಭವಾನಿಶಂಕರ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಕಾರ್ಯಕ್ರಮವನ್ನು ಕೆಮ್ಮಣ್ಣು ಪಡುಕುದ್ರು ಶ್ರೀಗಣಪತಿ ಮಠದ ಅರ್ಚಕ ನೆಂಪು ಶ್ರೀಧರ ಭಟ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಿದ್ದಕಟ್ಟೆಯ ನಾಟ್ಯಾಯನ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್…
