Avatar

NAMMA MEDIA 24X7

ತೊಕ್ಕೊಟ್ಟುವಿನ ಕಲ್ಲಾಪು ಸೇವಂತಿಗುತ್ತು ಬಳಿ ನಿರ್ಮಾಣ ಕಾರ್ಯದ ಸಮಯದಲ್ಲಿ ಗುಡ್ಡ ಕುಸಿದು ಕಾರ್ಮಿಕನೊಬ್ಬನ ದುರ್ಮರಣ… !

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟುವಿನ ಕಲ್ಲಾಪು ಸೇವಂತಿಗುತ್ತು ಬಳಿ ನಿರ್ಮಾಣ ಕಾರ್ಯದ ಸಮಯದಲ್ಲಿ ಗುಡ್ಡ ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ . ಮೃತರನ್ನು ಹುನಗುಂದ ತಾಲೂಕಿನ ನಿವಾಸಿ ಬಾಳಪ್ಪ (45) ಎಂದು ಗುರುತಿಸಲಾಗಿದೆ. ಖಾಸಗಿ ಆಸ್ತಿಯಲ್ಲಿ ಐವರು ಕಾರ್ಮಿಕರು ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಕೆಲಸದ ಸಮಯದಲ್ಲಿ, ದಿಬ್ಬವನ್ನು ಅಗೆಯಲು ಜೆಸಿಬಿ ಬಳಸುತ್ತಿದ್ದಾಗ ಅದು ಇದ್ದಕ್ಕಿದ್ದಂತೆ ಕುಸಿದಿದೆ. ಸ್ಥಳದಲ್ಲಿ ಗಾರೆ ಹಿಡಿದು ಕೆಲಸ ನಿರ್ವಹಿಸುತ್ತಿದ್ದ ಬಾಳಪ್ಪ ದಿಡೀರ್‌ ಕುಸಿತಗೊಂಡ ಮಣ್ಣಿನಡಿಯಲ್ಲಿ ಹೂತುಹೋದರು. ಅವರು ತೀವ್ರವಾಗಿ…

Read More

ಬಾವಿಯಿಂದ ನೀರು ಸೇದುವ ವೇಳೆ ಬಾವಿಗೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ದಾರುಣ ಸಾವು … !

ಉಡುಪಿ:ತಾಯಿ ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಬಾವಿಗೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿ ತಾಲೂಕಿನ ಕಿನ್ನಿಮೂಲ್ಕಿಯಲ್ಲಿ ನಡೆದಿದೆ.ಮಗುವಿನ ತಾಯಿ ಮಗುವನ್ನು ಎತ್ತಿಕೊಂಡು ಮನೆ ಸಮೀಪದ ಬಾವಿಯಿಂದ ನೀರು ಸೇದುತ್ತಿದ್ದರು. ಈ ವೇಳೆ ಮಗು ಆಯತಪ್ಪಿ ಬಾವಿಗೆ ಬಿದ್ದಿದೆ. ಈ ವೇಳೆ ತಾಯಿ ತಕ್ಷಣವೇ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಮಗುವನ್ನು ರಕ್ಷಿಸಲು ಯತ್ನಿಸಿದರೂ, ಅಷ್ಟರಲ್ಲೇ ಮಗು ಮೃತಪಟ್ಟಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಭರತೇಶ್…

Read More

ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆ ಕುಂಜತ್ತೂರು , ಅಂತರ್ ಶಾಲಾ ಕುರಾನ್ ಪಠಣ, ಅರಬಿಕ್ ಕ್ಯಾಲಿಗ್ರಫಿ ಹಾಗೂ ಅಝಾನ್ ಸ್ಪರ್ಧೆ

ಮಂಜೇಶ್ವರ : ಅರಬಿಕ್ ದಿನಾಚರಣೆಯ ಪೂರ್ವಭಾವಿಯಾಗಿ ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆ, ಕುಂಜತ್ತೂರು ಇವರ ಆಶ್ರಯದಲ್ಲಿ ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳಿಂದ ಅಂತರಶಾಲಾ ಕುರಾನ್ ಪಠಣ, ಅರಬಿಕ್ ಕ್ಯಾಲಿಗ್ರಫಿ ಹಾಗೂ ಅಝಾನ್ ಸ್ಪರ್ಧೆಗಳು ವಿಜೃಂಭಿಸಿತು. ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮವು ಅರಬಿಕ್ ದಿನಾಚರಣೆಯ ಭಾಗವಾಗಿ ಆಯೋಜಿಸಲ್ಪಟ್ಟಿದ್ದು, ವಿದ್ಯಾರ್ಥಿಗಳಲ್ಲಿ ಕುರಾನ್ ಅಧ್ಯಯನ, ಅರಬಿಕ್ ಭಾಷೆ ಹಾಗೂ ಇಸ್ಲಾಮಿಕ್ ಸಂಸ್ಕೃತಿಯ ಬಗ್ಗೆ ಅರಿವು…

Read More

ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆ ಕುಂಜತ್ತೂರು, ಅಂತರಶಾಲಾ ಕುರಾನ್ ಪಠಣ, ಅರಬಿಕ್ ಕ್ಯಾಲಿಗ್ರಫಿ ಹಾಗೂ ಅಝಾನ್ ಸ್ಪರ್ಧೆ

ಮಂಜೇಶ್ವರ : ಅರಬಿಕ್ ದಿನಾಚರಣೆಯ ಪೂರ್ವಭಾವಿಯಾಗಿ ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆ, ಕುಂಜತ್ತೂರು ಇವರ ಆಶ್ರಯದಲ್ಲಿ ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳಿಂದ ಅಂತರಶಾಲಾ ಕುರಾನ್ ಪಠಣ, ಅರಬಿಕ್ ಕ್ಯಾಲಿಗ್ರಫಿ ಹಾಗೂ ಅಝಾನ್ ಸ್ಪರ್ಧೆಗಳು ವಿಜೃಂಭಿಸಿತು. ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮವು ಅರಬಿಕ್ ದಿನಾಚರಣೆಯ ಭಾಗವಾಗಿ ಆಯೋಜಿಸಲ್ಪಟ್ಟಿದ್ದು, ವಿದ್ಯಾರ್ಥಿಗಳಲ್ಲಿ ಕುರಾನ್ ಅಧ್ಯಯನ, ಅರಬಿಕ್ ಭಾಷೆ ಹಾಗೂ ಇಸ್ಲಾಮಿಕ್ ಸಂಸ್ಕೃತಿಯ ಬಗ್ಗೆ ಅರಿವು…

Read More

ಡಿ 19 ರಿಂದ 21 ರ ತನಕ ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಡ್ ಫೆಸ್ಟಿವೆಲ್ …. !

ಮಂಗಳೂರು: ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಡ್ ಫೆಸ್ಟಿವೆಲ್ ನಡೆಯಲಿದೆ ಎಂದು ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷರಾದ ಸರೋಜಾ ಟಿ ಶೆಟ್ಟಿ ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು . ಈ ಬಗ್ಗೆ ಸಂಘದ ಕಾರ್ಯದರ್ಶಿಗಳಾದ ರಾಜೇಶ್ವರಿ ಡಿ ಶೆಟ್ಟಿ ಹೆಚ್ಚಿನ ಮಾಹಿತಿಯನ್ನು ನೀಡಿ,…

Read More

ವೆಳ್ಳಾಟಂನ ಗುರಾಣಿ ಹೊಡೆತ ಪ್ರಕರಣ ಇತ್ಯರ್ಥ…. !

ಕಾಸರಗೋಡು:ವೆಳ್ಳಾಟಂನಲ್ಲಿ ಗುರಾಣಿಯಿಂದ ಹೊಡೆಯುವುದು ಸಂಪ್ರದಾಯವಾಗಿದ್ದು, ಶನಿವಾರದಂದು ಯುವಕನೋರ್ವನಿಗೆ ಬಿದ್ದ ಗುರಾಣಿ ಹೊಡೆತ ಪ್ರಕರಣವನ್ನು ಇತ್ಯರ್ಥ ಮಾಡಲಾಗಿದೆ.ನೀಲೇಶ್ವರದ ಪಲ್ಲಿಕ್ಕರದಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದ ವೇಳೆ ನಡೆದ ತೆಯ್ಯಂ ಆಚರಣೆಯಲ್ಲಿ ಮರದ ಗುರಾಣಿಯಿಂದ ತಲೆಗೆ ಬಿದ್ದ ಹೊಡೆತದಿಂದ ಯುವಕನೊಬ್ಬ ಕುಸಿದು ಬಿದ್ದ ಘಟನೆ ಶನಿವಾರ ನಡೆದಿತ್ತು.ತೆಯ್ಯಂ ವೇಳೆ ಸಾಂಪ್ರದಾಯಿಕವಾಗಿ ಒಂದು ಕೈಯಲ್ಲಿ ಕತ್ತಿ ಹಾಗೂ ಇನ್ನೊಂದು ಕೈಯಲ್ಲಿ ಮರದ ಗುರಾಣಿ ಹಿಡಿದು ಲಯಬದ್ಧ ಹಾಗೂ ತೀವ್ರ ಚಲನೆಯಲ್ಲಿ ನರ್ತನ ಇರುತ್ತದೆ. ಸಂಪ್ರದಾಯದ ಭಾಗವಾಗಿ, ತೆಯ್ಯಂ ದೈವ ದೇವಾಲಯದ ಧಾರ್ಮಿಕ ಸಹಾಯಕರಾದ…

Read More

ಮಣೇಲ್ ಗ್ರಾಮದಲ್ಲಿ ಅಬ್ಬಕ್ಕ ರಾಣಿ ಗ್ರಾಮೋತ್ಸವ ನಡೆಯಲಿ : ಡಾ.ಚಿನ್ನಪ್ಪ ಗೌಡ’ಮಣೇಲ್‌ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರಗೋಷ್ಠಿ

ಮಂಗಳೂರು: ರಾಣಿ ಅಬ್ಬಕ್ಕನ ಅರಮನೆ ಇದ್ದಂತಹ ಹಾಗೂ ವಿದೇಶಿ ಪ್ರವಾಸಿ ಅಬ್ಬಕ್ಕನನ್ನು ಭೇಟಿ ಮಾಡಿದ ಗಂಜೀಮಠ ಗ್ರಾಂ.ಪಂ ವ್ಯಾಪ್ತಿಯ ಮಣೇಲಿನಲ್ಲಿ ಅಬ್ಬಕ್ಕ ರಾಣಿಯ ಉತ್ಸವ ಗ್ರಾಮೋತ್ಸವದ ರೂಪದಲ್ಲಿ ಆರಂಭಗೊಳ್ಳಬೇಕು, ಸಹಬಾಳ್ವೆ, ಕೋಮು ಸಾಮರಸ್ಯ, ಬಹುತ್ವದ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ಜತೆಗೆ ಅಬ್ಬಕ್ಕ ರಾಣಿಯ ಐತಿಹ್ಯದ ದಿನಗಳನ್ನು ಸ್ಮರಿಸಿಕೊಳ್ಳುವಂತಹ ‘ಅಬ್ಬಕ್ಕ’ ಸಾಂಸ್ಕೃತಿಕ ಗ್ರಾಮವನ್ನು ಕಟ್ಟುವ ಕಾರ್ಯ ನಡೆಯಬೇಕು ಎಂದು ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು. ಅವರು ಕರ್ನಾಟಕ…

Read More

ದಟ್ಟ ಮಂಜು ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 61 ವಿಮಾನಗಳನ್ನು ರದ್ದು. ! 400 ಕ್ಕೂ ಹೆಚ್ಚು ವಿಮಾನಗಳು ವಿಳಂಬ.. !

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪದೇ ಪದೇ ಹವಾಮಾನ ವೈಪರೀತ್ಯ ಕಂಡುಬರುತ್ತದೆ. ಇದೀಗ ಮತ್ತೊಮ್ಮೆ ನವದೆಹಲಿಯಲ್ಲಿ ಅಸಾಧಾರಣ ಮಟ್ಟದಲ್ಲಿ ಮಂಜು ಕಾಣಿಸಿಕೊಂಡಿದೆ. ಇದರ ಪರಿಣಾಮವಾಗಿ 61 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು 400 ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಸಮೀರ್ ಆ್ಯಪ್ನ ಅಂಕಿಅಂಶದ ಆಧಾರದ ಮೇಲೆ ಬೆಳಿಗ್ಗೆ 7:05 ಕ್ಕೆ, ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 454 ರ ‘ತೀವ್ರ’ ಮಟ್ಟದಲ್ಲಿ ದಾಖಲಾಗಿದೆ. ಇದು…

Read More

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ-ರಾಹುಲ್ ಗಾಂಧಿಗೆ ಬಿಗ್ ರಿಲೀಫ್ …

ದೆಹಲಿ:ನ್ಯಾಷನಲ್ ಹೆರಾಲ್ಡ್ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿದ್ದ ಚಾರ್ಜ್‌ ಶೀಟ್ ಅನ್ನು ಪರಿಗಣಿಸಲು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ನಿರಾಕರಿಸಿದೆ.ಈ ಪ್ರಕರಣವನ್ನು ವಿಚಾರಿಸಿದ ವಿಶೇಷ ನ್ಯಾಯಮೂರ್ತಿ ವಿಶಾಲ್ ಗೋಗಾನೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಸಲ್ಲಿಸಿರುವ ಆರೋಪಪಟ್ಟಿ ವಿಚಾರಣೆಗೆ ಅರ್ಹವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇಡಿ ತನಿಖೆಯನ್ನು ಮುಂದುವರೆಸಲು…

Read More

ಸರಕು ವಾಹನದಲ್ಲಿ ಕಾರ್ಮಿಕರ ಸಾಗಾಟ: 10ಸಾವಿರ ದಂಡ ಹಾಕಿದ ಕೋರ್ಟ್ … !

ಉಡುಪಿ:ಪೋಲೀಸರ ಎಚ್ಚರಿಕೆಯನ್ನು ಲೆಕ್ಕಿಸದೆ ಗೂಡ್ಸ್ ವಾಹನದಲ್ಲಿ ಸೆಂಟ್ರಿಂಗ್ ಮಷೀನ್ ಗಳೊಂದಿಗೆ ಕೂಲಿ ಕಾರ್ಮಿಕರನ್ನು ಸಾಗಿಸುವ ಕೆಲಸ ನಿರಂತರ ಹಾಗೂ ನಿರಾತಂಕವಾಗಿ ನಡೆಯುತ್ತಿದ್ದು ಪೊಲೀಸರು ವಾಹನವನ್ನು ಬೆನ್ನಟ್ಟಿ ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾರ್ಕಳ ನ್ಯಾಯಾಲಯವು ವಾಹನದ ಮಾಲಕ ನಾಗಪ್ಪ ಎಂಬವರಿಗೆ 10 ಸಾವಿರ ದಂಡವಿಧಿಸಿದೆ. ಕಾರ್ಕಳ ಪರಿಸರದಲ್ಲಿ ಮಾತ್ರವಲ್ಲ ಜಿಲ್ಲೆಯದ್ಯಂತ ಬೆಳಿಗ್ಗೆ ಕೆಲಸಕ್ಕೆ ಕರೆದುಕೊಂಡು ಮತ್ತು ಕೆಲಸ ಮುಗಿಸಿ ಹಿಂದಿರುಗುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ಸಿಮೆಂಟ್ ಕಾಂಕ್ರೀಟ್ ಮಷೀನ್ ನೊಟ್ಟಿಗೆ ತುಂಬಿಕೊಂಡು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಪೊಲೀಸರು ಈ…

Read More
error: Content is protected !!