Avatar

NAMMA MEDIA 24X7

ಬೆದ್ರಂಪಳ್ಳ ಬನ ಪಾಟ್ಲದಳ ರಸ್ತೆ ಅಭಿವೃದ್ಧಿಯಲ್ಲಿ ಕಳಪೆ ಕಾಮಗಾರಿ : ನಾಗರಿಕರಿಂದ ತಡೆ

ಪೆರ್ಲ : ಎಣ್ಮಕಜೆ ಪಂಚಾಯತಿನ 16ನೇ ವಾರ್ಡಿನ ಬೆದ್ರಂಪಳ್ಳ ಬನ -ಬಲ್ತಕಲ್ಲು- ಪಾಟ್ಲದಳ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು ಗುತ್ತಿಗೆದಾರನ ಅವ್ಯವಹಾರ ಆರೋಪಿಸಿ ನಾಗರಿಕರು ಕಾಮಗಾರಿಗೆ ತಡೆಯೊಡ್ಡಿದರು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ 2023-24 ರರಾಜ್ಯ ಸರಕಾರದ ಬಜೆಟ್ ನಲ್ಲಿ ಸುಮಾರು 70 ಲಕ್ಷ ರೂ ಯೋಜನೆ ಮೀಸಲಿರಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಹಸೈನಾರ್ ಪೆರ್ಲ ಎಂಬವರ ಮಾಲಕತ್ವದ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಇದೀಗ ಕಳಪೆ ಮಟ್ಟದ ಡಾಮರು, ಜಲ್ಲಿ ಕಲ್ಲುಗಳನ್ನು ಉಪಯೋಗಿಸಿ ಯೋಜನೆಯಲ್ಲಿ…

Read More

ಮಂಗಳೂರು: “ಅಪೆಕ್ಸ್ ರನ್ 2026” ಯಶಸ್ವಿ: 1500ಕ್ಕೂ ಅಧಿಕ ಓಟಗಾರರ ಭಾಗಿ

ಮಂಗಳೂರು: ಮಿಲಾಗ್ರಿಸ್ ಕಾಲೇಜು, ICYM Mangalore Diocese ಹಾಗೂ Mangalore Runners Club ಸಹಯೋಗದಲ್ಲಿ “ಅಪೆಕ್ಸ್ ರನ್ 2026” ನಗರ ಮಟ್ಟದ ಮ್ಯಾರಥಾನ್ ಭಾನುವಾರ ಕಾಲೇಜು ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಬೆಳಗ್ಗೆ 5:30ಕ್ಕೆ ಆರಂಭವಾದ ಓಟಕ್ಕೆ ಮಿಲಾಗ್ರಿಸ್ ಸಮೂಹ ಸಂಸ್ಥೆಗಳ ಸಂಚಾಲಕರಾದ ರೆ. ಫಾ. ಬೊನವೆಂಜರ್ ನಜರತ್, ರೆ. ಫಾ. ಮ್ಯಾಕ್ಸಿಮ್ ಮೋಂತೆರೋ ಹಾಗೂ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಲ್ವಿನ್ ಸೆರಾವೋ ಚಾಲನೆ ನೀಡಿದರು. ದೈಹಿಕ ಕ್ಷಮತೆ, ಆರೋಗ್ಯ ಜಾಗೃತಿ ಮತ್ತು ಸಮುದಾಯದ ಒಗ್ಗಟ್ಟನ್ನು…

Read More

ಬಂಟರ ಯಾನೆ ನಾಡವರ ಮಾತೃ ಸಂಘ : 2026 -29 ರ ಸಾಲಿನ ಪದಾಧಿಕಾರಿಗಳ ಅವಿರೋಧ ಆಯ್ಕೆ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ 2026 -29 ಸಾಲಿನ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು, ಉಪಾಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಎಮ್ ಕರುಣಾಕರ ಶೆಟ್ಟಿ, ಕೋಶಾಧಿಕಾರಿಯಾಗಿ ಸಿಎ ರಾಮ್ ಮೋಹನ್ ರೈ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪುಂಚಮೆ ಪದ್ಮನಾಭ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು ಸೇರಿ 83 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿದೆ. ಮುಖ್ಯ ಚುನಾವಣಾಧಿಕಾರಿಯಾಗಿದ್ದ ವಕೀಲರಾದ ಉಮೇಶ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ…

Read More

ಕರ್ನಾಟಕ ರಾಜ್ಯ ಎಫ್‌ಐಪಿ 8ನೇ ಪಾಲುದಾರರ ಸಭೆ

ಉಡುಪಿ: ಕರ್ನಾಟಕ ರಾಜ್ಯ ಮೀನುಗಾರಿಕೆ ಸುಧಾರಣಾ ಯೋಜನೆ (ಎಫ್‌ಐಪಿ) ಅಡಿಯಲ್ಲಿ ಸ್ಮಾಲ್ ಪೆಲಾಜಿಕ್ ಪರ್ಸ್‌ಸೈನ್ ಮೀನುಗಾರಿಕೆ ಯೋಜನೆಯ 8ನೇ ಪಾಲುದಾರರ ಸಭೆ ಎರ್ಮಾಳಿನ ಪೆನಿನ್ಸುಲಾ ಡೆಲ್ ಮಾರ್ ಬೀಚ್ ರೆಸಾರ್ಟ್‌ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅವಂತಿ ಫೀಡ್ಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅಲ್ಲೂರಿ ಇಂದ್ರಕುಮಾರ್ ವಹಿಸಿದ್ದರು. ಸಭೆಯಲ್ಲಿ ಸುಸ್ಥಿರ ಹಾಗೂ ಜವಾಬ್ದಾರಿಯುತ ಮೀನುಗಾರಿಕೆ ಪದ್ಧತಿಗಳು, ಸಮುದ್ರ ಆಹಾರದ ಪತ್ತೆಹಚ್ಚುವಿಕೆ ವ್ಯವಸ್ಥೆ ಹಾಗೂ ಭಾರತದ ಸಮುದ್ರ ಆಹಾರ ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಲಾಯಿತು….

Read More

ಭೀಕರ ರಸ್ತೆ ಅಪಘಾತದಲ್ಲಿ ನಟ ಭರತ್ ಕಾಂತ್ ಸಾವು; ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಕೂಡ ಬಲಿ

ಹೈದರಾಬಾದ್: ತೆಲುಗು ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯೊಂದು ಎದುರಾಗಿದ್ದು, ಉದಯೋನ್ಮುಖ ನಟ ಭರತ್ ಕಾಂತ್ (31) ಅವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೈದರಾಬಾದ್ ಹೊರವಲಯದ ಅದಿಬಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಔಟರ್ ರಿಂಗ್ ರೋಡ್‌ನ ಎಕ್ಸಿಟ್ ನಂ.12 ಸಮೀಪ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಟ್ರಕ್‌ಗೆ ಹಿಂಬದಿಯಿಂದ…

Read More

ಕಡಬದಲ್ಲಿ ಮತಾಂತರ ಯತ್ನ ಆರೋಪ: ಕ್ರಮಕ್ಕೆ ವಿಹಿಂಪ ಆಗ್ರಹ, ಪ್ರತಿಭಟನೆ ಎಚ್ಚರಿಕೆ

ಕಡಬ ತಾಲೂಕಿನ ಹಲವು ಗ್ರಾಮಗಳಲ್ಲಿ ಹಿಂದೂಗಳನ್ನು ಮತಾಂತರ ಮಾಡುವ ಷಡ್ಯಂತರ ನಡೆಯುತ್ತಲೇ ಇದೆ, ಈh ಬಗ್ಗೆ ನಾವು ಪೋಲೀಸ್ ಇಲಾಖೆಗೆ ದೂರು ನೀಡುತ್ತೇವೆ, ತಕ್ಷಣ ಮತಾಂರಗಳ ಅಡ್ಡೆಗಳನ್ನು ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು, ತಪ್ಪಿದ್ದಲ್ಲಿ ಉಗ್ರ ಪ್ರತಿಭನೆ ಎದುರಿಸಬೇಕಾದೀತು ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಎಚ್ಚರಿಸಿದರು. ಅವರು ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹಿಂದೂಗಳ ದೌರ್ಬಲ್ಯ ಹಾಗೂ ಬಡತನದಂತಹ ಸಮಸ್ಯೆಗಳನ್ನು ಬಂಡವಾಳ ಮಾಡಿಕೊಂಡು ವಿವಿಧ ಆಮಿಷಗಳನ್ನು ಒಡ್ಡಿ ಮತಾಂತರ ಯತ್ನಗಳು…

Read More

ಕಾರ್ಕಳ: ಬಾವಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ರಕ್ಷಣೆ:ಅಗ್ನಿಶಾಮಕ ಇಲಾಖೆಯಿಂದ ಸಾಹಸಮಯ ಕಾರ್ಯಾಚರಣೆ

ಉಡುಪಿ: ಬಾವಿಗೆ ಇಳಿದು ಮಣ್ಣು ತೆಗೆಯುತ್ತಿದ್ದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಮೂವರು ಕಾರ್ಮಿಕರನ್ನು ಕಾರ್ಕಳ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕಾರ್ಕಳ ತಾಲೂಕಿನ ಕುಕ್ಕುಂದೂರು ಸಮೀಪದ ಅಶ್ವಥಪುರ ಎಂಬಲ್ಲಿ‌ ಈ‌ ಘಟನೆ ನಡೆದಿದೆ.ರಾಜೇಶ್ (42), ಪವನ್ (29) ಹಾಗೂ ಗೋಪಾಲ್ ನಾಯ್ಕ (52) ಬಾವಿಯ ಮಣ್ಣು ತೆಗೆಯುವ ಕೆಲಸಕ್ಕಾಗಿ ಬಾವಿಗಿಳಿದಿದ್ದರು. ಈ ವೇಳೆ ಮೇಲಕ್ಕೆ ಬರುತ್ತಿದ್ದ ರಾಜೇಶ್ ಅವರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರನ್ನು ರಕ್ಷಿಸಲು ಮುಂದಾದ ಪವನ್ ಹಾಗೂ ಗೋಪಾಲ್…

Read More

ಬೆಜ್ಜದಗುತ್ತು ಕುಟುಂಬದ ಮನೆಯಲ್ಲಿ ಜೀರ್ಣೋದ್ಧಾರ ಶಿಲಾನ್ಯಾಸ ಕಾರ್ಯಕ್ರಮ

ಐಲ ಮಾಗಣೆಯ ಪ್ರಧಾನ ಮನೆಗಳಲ್ಲಿ ಒಂದಾದ ಬೆಜ್ಜದಗುತ್ತು ಕುಟುಂಬದ ಮನೆಯು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲಕೃಷ್ಣ ತಂತ್ರಿಗಳ ಪೌರೋಹಿತ್ವದಲ್ಲಿ ಬೆದ್ರಡ್ಕ ರಮೇಶ್ ಕಾರಂತರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರಕ್ಕಾಗಿ ಶಿಲಾನ್ಯಾಸ‌ ಕಾರ್ಯಕ್ರಮ ನಡೆಯಿತು

Read More

ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಕುಸಿತ: ಮಂಗಳೂರು ಕುಡಿಯುವ ನೀರು ನಿರ್ವಹಣೆಗೆ ಜಿಲ್ಲಾಡಳಿತದ ತುರ್ತು ಕ್ರಮ

ಬಂಟ್ವಾಳ: ದ.ಕ.ಜಿಲ್ಲೆಯ ಜೀವನಾಡಿಯಾಗಿರುವ ನೇತ್ರಾವತಿ ನದಿಯಲ್ಲಿ ನೀರಿನ‌ ಮಟ್ಟ ಗಣನೀಯವಾಗಿ ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಬಿಸಿಲಿನ ತಾಪ ಇನ್ನಷ್ಟು ಹೆಚ್ಚಳವಾದರೆ ನೀರಿನ ಮಟ್ಟ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಬಂಟ್ವಾಳ ಜಕ್ರಿಬೆಟ್ಟು ಡ್ಯಾಂ ನ ಕೆಳಭಾಗದಿಂದ ಪಾಣೆಮಂಗಳೂರು ನೂತನ ಸೇತುವೆವರೆಗೆ ನದಿಯಲ್ಲಿ ನೀರಿಲ್ಲದೆ ಬತ್ತಿಹೋಗಿದ್ದು, ಮರಳು ಮತ್ತು ಕಲ್ಲುಗಳು ಎದ್ದು ಕಾಣುತ್ತಿವೆ.ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ಅಭಾವ ತಲೆತೊರದಿದ್ದರೂ, ಕುಡಿಯುವ ನೀರು ಪೂರೈಕೆ ಮತ್ತು ಬಳಕೆಯ ಬಗ್ಗೆ ಅಧಿಕಾರಿಗಳು ಜಾಗೃತೆವಹಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು…

Read More

ಸಚಿವ ಸುಧಾಕರ್ ನಿಧನ: ಕರಾವಳಿ ಮಂಡಳಿಯಲ್ಲಿ ಶ್ರದ್ಧಾಂಜಲಿ

ಮಂಗಳೂರು- ಕರ್ನಾಟಕ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ. ಸುಧಾಕರ್ ಅವರು ಅನಾರೋಗ್ಯದ ಕಾರಣದಿಂದ ಮೇ 10 ರಂದು ವಿಧಿವಶರಾಗಿದ್ದಾರೆ. ಈ ಪ್ರಯುಕ್ತ ಸೋಮವಾರ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಪೂರ್, ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ಮಂಡಳಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮಂಗಳೂರಿನ ಮಂಡಳಿಯ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಯೋಜನಾ ಇಲಾಖೆಯ ಸಚಿವ ಡಿ. ಸುಧಾಕರ್ ಅವರ ಅಗಲಿಕೆಯ ಕುರಿತು ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ…

Read More
error: Content is protected !!