Avatar

Rashmitha Acharya

ಉಪ್ಪಳ ತುರ್ತಿ ಪಡೆಂಕುಡಿಯ ತರವಾಡಿನಲ್ಲಿ 2026 ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ವಿಶೇಷ ಸಮಾಲೋಚನಾ ಸಭೆ

ಉಪ್ಪಳ ತುರ್ತಿ ಪಡೆಂಕುಡಿಯ ತರವಾಡಿನಲ್ಲಿ 2026 ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ವಿಶೇಷ ಸಮಾಲೋಚನಾ ಸಭೆ ತರವಾಡು ಕ್ಷೇತ್ರದಲ್ಲಿ ನಡೆಯಿತು. ಸಭೆಯಲ್ಲಿ ಉತ್ತರ ಮಲಬಾರ್ ತೀಯಾ ಕ್ಷೇತ್ರ ಸಂರಕ್ಷಣಾ ಸಮಿತಿ ಇದರ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಜನ್ ಪೆರಿಯ ಉಪಸ್ಥಿತರಿದ್ದು ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ಸಮಗ್ರ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಸುಕುಮಾರ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಆಚಾರ ಪಟ್ಟವರಾದ ಶ್ರೀ ಹರಿಪ್ರಸಾದ್…

Read More

ಡಾ. ವಾಮನ್ ರಾವ್ ಬೇಕಲ್ ರೀಗೆ -ವಿಶ್ವ ರಾಮಕ್ಷತ್ರಿಯ ಮಹಾಸಂಘ ಮಹಾಸಭೆ ಯಲ್ಲಿ ಸನ್ಮಾನ

ಕಾಸರಗೋಡು : ವಿಶ್ವ ರಾಮಕ್ಷತ್ರಿಯ ಮಹಾಸಂಘದ ವತಿಯಿಂದ ದಿನಾಂಕ 14.09.2025ರಂದು ಶ್ರೀ ಸೀತಾ ರಾಮಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವ ಸದಸ್ಯರ ದ್ವೈವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ, ಇತ್ತೀಚಿಗೆ ಸಾಮಾಜಿಕ ಕ್ಷೇತ್ರದಲ್ಲಿನ ಸರ್ವತೋಮುಖ ಸೇವೆಯನ್ನು ಪರಿಗಣಿಸಿ ಲಭಿಸಿದ ಡಾಕ್ಟ್ರೇರೇಟ್ ಪದವಿಯನ್ನು, ಹಾಗೂ ಕಾಸರಗೋಡು ಕನ್ನಡ ಭವನ ಮುಖಾಂತರ ನಡೆಸುತ್ತಿರುವ ಕನ್ನಡ ಪರ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆ, ಕನ್ನಡ ಭವನ ಉಚಿತ ವಸತಿ ಸೌಕರ್ಯ, ಉಚಿತ ಸಾರ್ವಜನಿಕ ವಾಚನಾಲಯ ಸೇವೆ, ಕನ್ನಡ ಭವನ ಪ್ರಕಾಶನ ಮೂಲಕ ರಾಮಕ್ಷತ್ರಿಯ…

Read More

ಶ್ರೀ ಗೌರಿ ಗಣೇಶ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪನಗರ ಮಂಗಲ್ಪಾಡಿಇದರ ವಾರ್ಷಿಕ ಮಹಾ ಸಭೆ

ಶ್ರೀ ಗೌರಿ ಗಣೇಶ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪನಗರ ಮಂಗಲ್ಪಾಡಿ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 14/09/25 ನೇ ರವಿವಾರ ಗೌರಿ ಗಣೇಶ ಮಂದಿರದಲ್ಲಿ ಶ್ರೀ ಪರಪ್ಪು ಲೋಕನಾಥ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರ್ಥನೆಯ ಬಳಿಕ. ಶ್ರೀ ಆನಂದ ಮಾಸ್ತರ್ ಸ್ವಾಗತಿಸಿದರು. ಗೌರವ ನಿರ್ದೇಶಕರಾದ ಶ್ರೀ ನಾರಾಯಣ ಮಣಿಯಾಣಿ ಹಾಗೂ ಶ್ರೀ ಗಣೇಶಸುಧಾ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನಿತ್ತರು. ಯಕ್ಷಗುರುಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನೂತನ ಚೆಂಡೆ ಮದ್ದಳೆ ಖರೀದಿಸುವರೇ ತೀರ್ಮಾನ…

Read More

ಮಂಗಳೂರಿಗೆ ಕೀರ್ತಿ ತಂದ ಸಹೋದರ ಸಹೋದರಿಯರು

ಮಂಗಳೂರು : ಮಂಗಳೂರು ನಗರದ ಬಜಾಲ್ ನಿವಾಸಿಯಾದ ಕೇವಲ ಐದೂ ವರ್ಷದ ಹಾಗೂ 11 ವರ್ಷದ ಸಹೋದರ ಸಹೋದರಿಯವರು ತಮ್ಮ ಅನನ್ಯ ಪ್ರತಿಭೆಯೊಂದಿಗೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರತಿನಿಧಿಸುತ್ತಾ ಸೆಪ್ಟೆಂಬರ್ 6 ,2025 ಬೆಂಗಳೂರಿನ , ಕಿಂಗ್ಸ್ ಮೆಡವ್ಸ್ ಹೋಟೆಲ್ ನಲ್ಲಿ ಆಯೋಜಿಸಲಾದ ಮಿಸ್ ಪ್ರತಿಭಾ ಸಂಶಿಮಠ ಇವರ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಮಿಸ್ ಅಂಡ್ ಮಿಸ್ಸೆಸ್ ಅಸ್ತ್ರಲ್ ಸೌಂದರ್ಯ ಸ್ಪರ್ಧೆಯಲ್ಲಿ ಲಿಟಲ್ ಮಿಸ್ಟರ್ ಇಂಡಿಯಾ ರನ್ನರ್ ಅಪ್ ಅನ್ನು ಲಹರ್ ಸಾಯಿ ಇವರು ಹಾಗೂ ಅವರ ಸಹೋದರಿ…

Read More

ಪ್ರತಿಭೆಗಳಿಂದ ಪ್ರಶಸ್ತಿಯನ್ನು ಬಾಚಿಕೊಳ್ಳುತ್ತಿರುವ ಮಂಗಳೂರಿನ ಪುಟಾಣಿ ಪ್ರತಿಭೆಯ ಕಿರೀಟಕ್ಕೆ ಮತ್ತೊಂದು ಗರಿ

ಬೆಂಗಳೂರಿನಲ್ಲಿ ನಡೆದ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಿ ಜೂನಿಯರ್ ಮಿ.ಇಂಡಿಯಾ ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡ ಮಂಗಳೂರಿನ ಪುಟಾಣಿ ಪ್ರತಿಭೆ ಶೌರ್ಯ ರಾವ್. ಮಂಗಳೂರು ನಗರದ ಶ್ರೀನಿಧಿ ರಾವ್ ಮತ್ತು ಅಶ್ವಿನಿ ರಾವ್ ದಂಪತಿಯ ಪುತ್ರ , ಕೇವಲ 8 ವರ್ಷ ದ ಬಾಲಕ ಶೌರ್ಯ ರಾವ್. ಮಂಗಳೂರಿನ ಎಸ್‌ಡಿಎಂ ಶಾಲೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿದ್ದಾರೆ. ನೃತ್ಯ, ನಟನೆ, ಈಜು, ಯೋಗ, ತಲೀಮ್, ಕ್ಯಾಲಾಸ್ಟಿಕ್ನಿಕ್ಸ್, ಫ್ರೀಸ್ಟೈಲ್ ಜಿಮ್ನಾಸ್ಟಿಕ್,…

Read More

ಮೀಂಜ-ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ

ಮೀಯಪದವು ಚಿಗುರುಪಾದೆಯಲ್ಲಿ ಕಾರ್ಯವೆಸಗುತ್ತಿರುವ “ಮೀಂಜ_ ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ”ಯ ಮಹಾಸಭೆಯು ದಿನಾಂಕ 14 ರಂದು ಚಿಗುರುಪಾದೆ ಸಿ.ಸಿ. ಕಾಂಪ್ಲೆಕ್ಸ್ ನಲ್ಲಿ ಜರಗಿತು. ಸೊಸೈಟಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ಯವರ ಅಧ್ಯಕ್ಷತೆ ಯಲ್ಲಿ , ಮಂಜೇಶ್ವರ ವಿಭಾಗದ ಸಹಕಾರಿ ಸಹಾಯಕ ನಿಬಂಧಕ ಶ್ರೀ ರವೀಂದ್ರ ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೊಸೈಟಿ ಯ ಸದಸ್ಯರೂ, ಕರ್ನಾಟಕ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ಜಗದೀಶ್ ಶೆಟ್ಟಿ ಮಾಸ್ಟರ್, ಎಲಿಯಾಣ ಅವರಿಗೆ ಸಭೆಯಲ್ಲಿ…

Read More

ಮಂಗಳೂರು: ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ ಪಾರು

ಮಂಗಳೂರು: ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲೇ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಮರದ ದಿಮ್ಮಿಗಳನ್ನು ಹೊತ್ತ ಲಾರಿ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಸಾಗುತ್ತಿತ್ತು. ಈ ವೇಳೆ ಎಕ್ಕೂರು ಬಳಿ ಇಳಿಜಾರು ರಸ್ತೆಯಲ್ಲಿ ಲಾರಿ ಮಗುಚಿ ಬಿದ್ದಿದೆ.ಅಪಘಾತದ ವೇಳೆ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸುತ್ತಿದ್ದ. ಇದರಿಂದಾಗಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಲಾರಿ ರಸ್ತೆಯಲ್ಲಿ…

Read More

ಕೆಎಂಸಿ ಆಸ್ಪತ್ರೆಯ ಸುಧಾರಿತ ವೈದ್ಯಕೀಯ ತಂತ್ರಜ್ಞಾನ, ಉತ್ತಮ ಆರೈಕೆ ಗ್ಯಾಸ್ಟ್ರೋಎಂಟರ್ಲಾಜಿ ಸೇವೆ 25ನೇ ವರ್ಷಕ್ಕೆ ಪಾದಾರ್ಪಣೆ

ಮಂಗಳೂರು: ಕೆಎಂಸಿ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಾಜಿ ಸೇವೆಗೆ 25 ವರ್ಷ ತುಂಬಿದ್ದು . ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಸಹಾನುಭೂತಿಯ ರೋಗಿಯ ಆರೈಕೆಯನ್ನು ಸೂಚಿಸುತ್ತಿದೆ . 2000ನೇ ವರ್ಷದಲ್ಲಿ ಆರಂಭವಾದ ಈ ಸೇವೆಯು ಸುಧಾರಿತ ಡೈಯಾಗ್ನೋಸ್ಟಿಕ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುತ್ತಾ ಬರುತ್ತಿದೆ ಎಂದು ಗ್ಯಾಸ್ಟ್ರೋ ಎಂಟರಾಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಬಿ ವಿ ತಂತ್ರಿ ತಿಳಿಸಿದರು. ಅವರು ಕೆಎಂಸಿ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಕಳೆದ…

Read More

ಸೆ.15ರಂದು ಮಂಗಳೂರಿನಲ್ಲಿ ಜೀ಼ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಯ ಮಹಾ ಆಡಿಷನ್

ಮಂಗಳೂರು: ಜೀ಼ ಕನ್ನಡ ವಾಹಿನಿ ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕೊಡಲು ಮತ್ತೊಮ್ಮೆ ವೇದಿಕೆ ಸಿದ್ಧಮಾಡಿದೆ . ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಆಡಿಷನ್ 31 ಜಿಲ್ಲೆಗಳಲ್ಲಿ ನಡೆಯುತ್ತಿದೆ. ಪ್ರತಿಭೆ ಇದ್ದರೂ ಅವಕಾಶ ಸಿಗದೇ ಇರುವವವರಿಗೆ ಜೀ಼ಕನ್ನಡ ಒಂದು ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಭಾಗವಹಿಸುವವರ ವಯೋಮಿತಿ 6 ರಿಂದ 60 ರವರೆಗೆ ಇರಬೇಕು ಮತ್ತು ನೀವು ಉತ್ತಮವಾಗಿ ಡ್ಯಾನ್ಸ್ ಮಾಡುವವರಾಗಿರಬೇಕು. ಇನ್ನು, ಕಾಮಿಡಿ ಕಿಲಾಡಿಗಳಲ್ಲಿ ಭಾಗವಹಿಸುವುದಾದರೆ ನಿಮ್ಮ ವಯಸ್ಸು 16 ರಿಂದ…

Read More

ವೃದ್ಧೆಯ ಚಿನ್ನದ ಸರ ಕದ್ದ ಖದೀಮನ ಬಂಧನ

ಉಡುಪಿ:ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯ ಚಿನ್ನದ ಎಗರಿಸಿದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಸುನಿಲ್ ರಮೇಶ್ ಲಮಾಣಿ(29) ಬಂಧಿತ ಆರೋಪಿಯಾಗಿದ್ದು ಈತನಿಂದ ಕಳವು ಮಾಡಿದ ಚಿನ್ನದ ರೋಪ್ ಚೈನನ್ನು ವಶಪಡಿಸಿಕೊಳ್ಳಲಾಗಿದೆ. ಸೆ.9ರಂದು ಕಾರ್ಕಳ ಎಳ್ಳಾರ ಗ್ರಾಮದ ಮುಳ್ಳಾಡು ನಿವಾಸಿ ಕುಮುದಾ ಶೆಟ್ಟಿ (80) ಎಂಬವರು ಮನೆಯ ಅಂಗಳ ದಲ್ಲಿ ಕುಳಿತುಕೊಂಡಿದ್ದರು ಆಗ ತಾನು ಕಾರ್ಕಳದ ಸೂಪರ್ ವೈಸರ್ ಎಂದು ಹೇಳಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ ಮನೆಯಲ್ಲಿ ಸಿಸಿ ಕ್ಯಾಮರಾ ಇದೆಯೇ ಎಂದು ವಿಚಾರಿಸಿದನು ಬಳಿಕ…

Read More
error: Content is protected !!