ಸೆ.15ರಂದು ಮಂಗಳೂರಿನಲ್ಲಿ ಜೀ಼ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಯ ಮಹಾ ಆಡಿಷನ್

ಮಂಗಳೂರು: ಜೀ಼ ಕನ್ನಡ ವಾಹಿನಿ ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕೊಡಲು ಮತ್ತೊಮ್ಮೆ ವೇದಿಕೆ ಸಿದ್ಧಮಾಡಿದೆ . ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಆಡಿಷನ್ 31 ಜಿಲ್ಲೆಗಳಲ್ಲಿ ನಡೆಯುತ್ತಿದೆ. ಪ್ರತಿಭೆ ಇದ್ದರೂ ಅವಕಾಶ ಸಿಗದೇ ಇರುವವವರಿಗೆ ಜೀ಼ಕನ್ನಡ ಒಂದು ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಭಾಗವಹಿಸುವವರ ವಯೋಮಿತಿ 6 ರಿಂದ 60 ರವರೆಗೆ ಇರಬೇಕು ಮತ್ತು ನೀವು ಉತ್ತಮವಾಗಿ ಡ್ಯಾನ್ಸ್ ಮಾಡುವವರಾಗಿರಬೇಕು. ಇನ್ನು, ಕಾಮಿಡಿ ಕಿಲಾಡಿಗಳಲ್ಲಿ ಭಾಗವಹಿಸುವುದಾದರೆ ನಿಮ್ಮ ವಯಸ್ಸು 16 ರಿಂದ 60 ವರುಷದ ಒಳಗಿರಬೇಕು ಮತ್ತು ನಿಮ್ಮದೇ ಕಾಮಿಡಿ ಸ್ಕಿಟ್ ಇರಬೇಕು.

ರೀಲ್ಸ್ ವಿಡಿಯೋಗಳಿಗೆ ಅವಕಾಶವಿಲ್ಲ. ಸೆಪ್ಟೆಂಬರ್ 15 ಸೋಮವಾರದಂದು ಬೆಳಗ್ಗೆ 9 ಗಂಟೆಗೆ, ಮಂಗಳೂರಿನ ಕೊಡಿಯಾಲಬೈಲ್ ನ ಶಾರದ ವಿದ್ಯಾಲಯ(ಕೇಂದ್ರ ಪಠ್ಯಕ್ರಮ ಆಧಾರಿತ)ದಲ್ಲಿ ಆಡಿಷನ್ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಪಾಸ್ಪೋರ್ಟ್ ಸೈಜ್ ಪೋಟೋ ಹಾಗೂ ಅಡ್ರೆಸ್ ಪ್ರೂಪ್ ಜೆರಾಕ್ಸ್ ಜೊತೆಗೆ ತರಬೇಕು.

ಜೀ಼ಕನ್ನಡ ವಾಹಿನಿಯಲ್ಲಿ ಆಡಿಷನ್ ಗಳಿಗೆ ಯಾವುದೇ ಶುಲ್ಕ ಕಟ್ಟುವಂತಿಲ್ಲ. ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾಹಿನಿಯು ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!