ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಫೈನಲ್ ಪಿಚ್ ಡೇ’
ಮಂಗಳೂರು:ಕೆನರಾ ಎಂಜಿನಿಯರಿಂಗ್ ಕಾಲೇಜಿನ ಉದ್ಯಮಶೀಲತಾ ಅಭಿವೃದ್ಧಿ ಕೋಶ (ಇ.ಡಿ.ಸಿ.) ವತಿಯಿಂದ ಎಕ್ಸ್‌ಪ್ಲೋರಿಂಗ್ ಎಂಟ್ರಪ್ರಿನರ್ಶಿಪ್ ಪ್ರೋಗ್ರಾಂನ ಫೈನಲ್ ಪಿಚ್ ಡೇ ಆಯೋಜಿಸಲಾಯಿತು. ಉಡುಪಿ ಎಸ್.ಎಂ.ವಿ.ಐ.ಟಿ.ಎಂ. ಮತ್ತು ಮಂಗಳೂರು ಕೆನರಾ ಎಂಜಿನಿಯರಿಂಗ್ ಕಾಲೇಜುಗಳಿಂದ ಆಯ್ಕೆಯಾದ 14 ವಿದ್ಯಾರ್ಥಿ ತಂಡಗಳು ತಮ್ಮ ಸ್ಟಾರ್ಟ್‌ಅಪ್ ಕಲ್ಪನೆಗಳನ್ನು ಸೆಕ್ಷನ್ ಇನ್ಫಿನ್–8 ಫೌಂಡೇಶನ್ (ಎಸ್.ಐ.–8) ನೇಮಕ ಮಾಡಿದ ತೀರ್ಪುಗಾರರ ಮುಂದಿಡಿದರು. ತೀರ್ಪುಗಾರರಾಗಿ ಶ್ರೀ ಅಜಯ್ ಪ್ರಭು, ವ್ಯವಸ್ಥಾಪಕ ನಿರ್ದೇಶಕ, ಕೆ.ವಿ.ಪಿ. ಬಿಸಿನೆಸ್ ಸೊಲ್ಯೂಶನ್ಸ್, ಶ್ರೀ ಪುನೀತ್ ರೈ, ಇಂಕ್ಯುಬೇಶನ್ ಮ್ಯಾನೇಜರ್, ಅಟಲ್ ಇಂಕ್ಯುಬೇಶನ್ ಸೆಂಟರ್, ನಿಟ್ಟೆ,…