Avatar

Rashmitha Acharya

ಮುಳ್ಳೇರಿಯಾ ದಲ್ಲಿ ನಿಯಂತ್ರಣ ತಪ್ಪಿದ ಕಾರು ಮಗುಚಿ 2 ವರ್ಷದ ಮಗು ದಾರುಣ ಮೃತ್ಯು

ಮಂಜೇಶ್ವರ : ಮುಳ್ಳೇರಿಯ ಕಾರ್ಲೇ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮಗುಚಿ ಸಂಭವಿಸಿದ ಅಪಘಾತದಲ್ಲಿ ಎರಡು ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದೆ. ಬೆಳ್ಳಿಗೆಯ ಎಂ. ಹರಿದಾಸ್ – ಶ್ರೀವಿದ್ಯಾ ದಂಪತಿ ಪುತ್ರಿ ಹೃದ್ಯಾನಂದ ಸಾವನ್ನಪ್ಪಿದ ಮಗು. ಪೇಟೆಗೆ ತೆರಳಿ ಮರಳುತ್ತಿರುವ ಮನೆ ಸಮೀಪ ಕಾರು ಸ್ಟಾರ್ಟ್ ಆಗದ ಹಿನ್ನಲೆಯಲ್ಲಿ ಕಾರನ್ನು ತಳ್ಳುತ್ತಿರುವ ಮಧ್ಯೆ ಕಾರು ದಿಢೀರ್ ಮುಂದಕ್ಕೆ ಚಲಿಸಿದಾಗ ಮಗು ಕಾರಿನಡಿಗೆ ಸಿಲುಕಿ ಈ ದುರ್ಘ ಸಂಭವಿಸಿದೆ. ಘಟನೆಯಲ್ಲಿ ತಾಯಿ ಹೊರಗೆ ಎಸೆಯಲ್ಪಟ್ಟರೂ ಸಣ್ಣಪುಟ್ಟ ಗಾಯಗಳೊಂದಿಗೆ…

Read More

ಹಿರಿಯ ಕಾಂಗ್ರೆಸ್ ನಾಯಕ ಕೆಪಿಸಿಸಿ ಮಾಜಿ ಅಧ್ಯಕ್ಷ ತೆನ್ನಾಲ ಬಾಲಕೃಷ್ಣ ಪಿಳ್ಳೈ ಇನ್ನಿಲ್ಲ

ತಿರುವನಂತಪುರ: ಕೇರಳದ ಹಿರಿಯ ಕಾಂಗ್ರೆಸ್ ಧುರೀಣ, ಮಾಜಿ ಕೆಪಿಸಿಸಿ ಅಧ್ಯಕ್ಷ ತೆನ್ನಲ ಬಾಲಕೃಷ್ಣ ಪಿಳ್ಳೆ(95)ನಿಧನರಾದರು.ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜವಾಗಿ ಅವರು ವಿಧಿವಶರಾದರು. ಮೂರು ಬಾರಿ ರಾಜ್ಯಸಭಾ ಸಂಸದ, ಎರಡು ಬಾರಿ ಶಾಸಕ, ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವರು ಕಾಂಗ್ರೆಸ್ಸಿನ ವರ್ಚಸ್ವೀ, ಸೌಮ್ಯ ನಾಯಕನೆಂದು ಜನಪ್ರಿಯರು. ಕೊಲ್ಲಂ ಜಿಲ್ಲೆಯ ಶೂರನಾಡ್ ನಿವಾಸಿಯಾದ ಅವರು ಸಹಕಾರಿ ರಂಗದ ಜನಪ್ರಿಯ ನಾಯಕ. 1931ರಲ್ಲಿ ಶೂರನಾಡಿನ ತೆನ್ನಲ ಮನೆಯ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದ್ದ ಅವರು ತಿರುವನಂತಪುರ ಎಂ.ಜಿ.ಕಾಲೇಜಿನಿಂದ ಬಿಎಎಸ್ಸಿ ಪದವೀಧರನಾಗಿ ಶೂರನಾಡ್…

Read More

ವಿಧವೆಯರನ್ನು ಮರುಮದುವೆಯಾಗುವುದೆಂದು ನಂಬಿಸಿ ವಂಚಿಸಿದಆರೋಪಿಯ ಬಂಧನ

ಕಾಸರಗೋಡು: ಮರು ಮದುವೆಗೆ ಬಯಸುತ್ತಿದ್ದ ವಿಧವೆ ಮಹಿಳೆಯರನ್ನು ಮದುವೆಯಾಗುವ ಭರವಸೆಯಿಂದ ಬಲೆಗೆ ಬೀಳಿಸಿ , ಅವರ ಜೊತೆ ಸುತ್ತಾಡಿ ಲೈಂಗಿಕವಾಗಿ ಬಳಸಿಕೊಂಡು ವಿಲಾಸಿ ಜೀವನ ನಡೆಸಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಕಾಸರಗೋಡು ವನಿತಾ ಪೋಲೀಸರು ಬಂಧಿಸಿದ್ದಾರೆ. ಕೇರಳದ ತೃಶ್ಶೂರು ಜಿಲ್ಲೆಯ ಕೈಪಮಂಗಲಂ ಕೂರಿಕಳ ನಿವಾಸಿ ಶೋಭಿ ಯಾನೆ ಪ್ರಶೋಬ್ (36)ಬಂಧಿತ ವ್ಯಕ್ತಿಯಾಗಿದ್ದಾನೆ. ಕಾಸರಗೋಡು ವನಿತಾ ಪೋಲೀಸ್ ಠಾಣಾ ವ್ಯಾಪ್ತಿಯ ಓರ್ವ ಮಹಿಳೆ ಜಿಲ್ಲಾ ಪೋಲೀಸ್ ವರಿಷ್ಠರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈತನ ಕುರಿತು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ….

Read More

ಸಂಪೂರ್ಣ ಹದಗೆಟ್ಟಿದ ವರ್ಕಾಡಿ ರಸ್ತೆ ಸ್ಥಳೀಯರ ಆಕ್ರೋಶ

ಮಂಜೇಶ್ವರ: ವರ್ಕಾಡಿ ಪಂಚಾಯತ್‌ ವ್ಯಾಪ್ತಿಯ 2 ಹಾಗೂ 15 ನೇ ವಾರ್ಡ್‌ಗಳಿಗೆ ಸೇರಿದ ಮುಡಿಮಾರ್ ಮತ್ತು ಸುಂಕದಕಟ್ಟೆಯನ್ನು ಹಾಗೂ ಕರ್ನಾಟಕದ ಗಡಿಯನ್ನು ಸುಲಭವಾಗಿ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದ್ದರೂ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಯಾರೂ ಇತ್ತ ಗಮನ ಹರಿಸದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆಯನ್ನು ಅವಲಂಬಿಸಿ ಸುಮಾರು 250 ಕುಟುಂಬಗಳು ಇಲ್ಲಿ ವಾಸಿಸುತ್ತಿದೆ. ಈ ರಸ್ತೆ ಭಾರೀ ಶೋಚನೀಯಾವಸ್ಥೆಗೆ ತಲುಪಿದೆ. 15 ವರ್ಷಗಳ ಹಿಂದೆ ನಿರ್ಮಿಸಲಾದ ಈ ರಸ್ತೆಗೆ ಮರು ಡಾಮಾರೀಕರಣ ಮಾಡುವ ಎಲ್ಲಾ ಸಿದ್ಧತೆಗಳು…

Read More

ಐಪಿಎಲ್ ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಆರ್.ಸಿ ಬಿ

ಅಹ್ಮದಾಬಾದ್: ಐಪಿಎಲ್ ಕ್ರಿಕೆಟ್ ಚರಿತೆಯ 18ವರ್ಷಗಳ ಕಾಯುವಿಕೆಗೆ ಕೊನೆಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪಾಲಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. “ಈ ಸಲ ಕಪ್ ನಮ್ದೇ ” ಎಂಬ ಭರವಸೆಯ ಮಾತು ಪೊಳ್ಳಾಗಲಿಲ್ಲ. ಐಪಿಎಲ್ ಸೀಸನ್ -18ರ ಕಿರೀಟವನ್ನು ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ವೀರೋಚಿತವಾಗಿ ಗೆದ್ದುಕೊಂಡಿದೆ. ಅಹ್ಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ನ ಕೆಚ್ಚೆದೆಯ ಹೋರಾಟವನ್ನು ನಿಷ್ಕ್ರಿಯಗೊಳಿಸಿದ ಟೀಂ ಬೆಂಗಳೂರು ಪ್ರಪ್ರಥಮ ಬಾರಿಗೆ ಐಪಿಎಲ್ ಕಿರೀಟ ಗೆದ್ದುಕೊಂಡಿದೆ. ಕನ್ನಡ ನಾಡೆಲ್ಲಾ ಸಂಭ್ರಮಿಸುತ್ತಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಸೋತು…

Read More

ವಿವಿಧ ನೂತನ ಸೌಕರ್ಯ ಉದ್ಘಾಟನೆಯೊಂದಿಗೆ ವಾಮಂಜೂರು ಜಿ.ಎಲ್ ಪಿ ಶಾಲೆಯ ಶಾಲಾ ಪ್ರವೇಶೋತ್ಸವ

ಜಿ.ಎಲ್ ಪಿ ಶಾಲೆ ವಾಮಂಜೂರಿನಲ್ಲಿ ಶಾಲಾ ಮಟ್ಟದ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡು ಸದಸ್ಯರಾದ ಶ್ರೀಯುತ ಆದರ್ಶ್ ಬಿ.ಎಂ ವಹಿಸಿದ್ದರು. ಪ್ರವೇಶೋತ್ಸವದ ಉದ್ಘಾಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಮೆಂಬರ್ ಆದ ಶ್ರೀಯುತ ಅಬ್ದುಲ್ ಹಮೀದ್ ಅವರು ನೆರವೇರಿಸಿದರು. ವಾಮಂಜೂರು ಶಾಲಾ ಹಳೆ ವಿದ್ಯಾರ್ಥಿಯಾದ ಶ್ರೀಯುತ ಮುಜಿಬು ರಹಿಮಾನ್ ಇವರು ಕೊಡುಗೆಯಾಗಿ ನೀಡಿದ ಇಂಗಿಷ್ ಭಾಷೆಯ ಲ್ಯಾಬ್ ಹಾಗೂ ಇಂಟರಾಕ್ಟಿವ್ ಪ್ಲಾಟ್ ಪ್ಯಾನಲ್ನ ಉದ್ಘಾಟನೆಯನ್ನು ನಿವೃತ್ತ ಡಿಡಿಇ ಶ್ರೀಯುತ ದಿನೇಶ್ ನೆರವೇರಿಸಿದರು. ಯುಕೆಜಿ ತರಗತಿಯನ್ನು…

Read More

ತುಳುನಾಡ ಕೊಡುಗೈ ದಾನಿಯ ಹುಟ್ಟೂರ ಪ್ರೇಮ; ತನ್ನೂರ ಶಾಲೆಯ ಎಲ್.ಕೆ.ಜಿ., ಯು.ಕೆ.ಜಿ. ವಿಭಾಗವನ್ನು ದತ್ತು ಪಡೆದ ಡಾ. ಸದಾಶಿವ ಕೆ. ಶೆಟ್ಟಿ ಕುಳೂರು ಕನ್ಯಾನ

ಮಂಜೇಶ್ವರ : ಸಮಾಜದಲ್ಲಿ ಕಷ್ಟ ಕಾರ್ಪಣ್ಯಗಳಿಂದ ಬಳಲಿ ಬೆಂಡಾಗಿರುವ ಅದೆಷ್ಟೋ ಜೀವಗಳಿವೆ. ಬಡತನ ಇನ್ನಷ್ಟು ಅವರ ಜೀವ ಹಿಂಡುತ್ತದೆ. ಯಾವುದಾದರೂ ಕಾಣುವ ಕೈಗಳ ಸಹಾಯಕ್ಕೆ ಕಾಯುತ್ತವೆ. ಆದರೆ ಎಲ್ಲರೂ ಮರುಗುವರೇ ಹೊರತು ಸಹಾಯಕ್ಕಾಗಿ ಮುಂದೆ ಬರುವುದು ವಿರಳ. ಇಂತಹ ಸಂದರ್ಭಗಳಲ್ಲಿ ನಮಗೆ ಹೊಳೆಯುವ ಹೆಸರೆಂದರೆ‌ ಅದು ಡಾ. ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ. ತಮ್ಮ ನಿಸ್ವಾರ್ಥವಾದ ಸಮಾಜ ಸೇವೆ ಇಂದು ಅವರನ್ನು ಬಹಳ ಎತ್ತರಕ್ಕೆ ತಂದು ನಿಲ್ಲಿಸಿದೆ.‌ ಜಾತಿ-ಮತ-ಧರ್ಮ ಎನ್ನುವ ಯಾವುದೇ ಭೇದವಿಲ್ಲದೆ ಸಮಾಜದಲ್ಲಿನ ಅಸಕ್ತರಿಗೆ…

Read More

ಪ್ರಶಾಂತಿಯಲ್ಲಿ ದೈವಿಕ ಅನುಗ್ರಹದೊಂದಿಗೆ ಹೊಸ ಶೈಕ್ಷಣಿಕ ವರ್ಷದ ಪ್ರಾರಂಭ

ಬಾಯಾರು, ಜೂನ್ 2: ಬಾಯಾರಿನ ಪ್ರಶಾಂತಿ ವಿದ್ಯಾ ಕೇಂದ್ರವು ತನ್ನ 2025-2026ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವನ್ನು ಸಾಂಪ್ರದಾಯಿಕ ಸಂಸ್ಕೃತಿ ಆಚಾರಗಳ ವಿಧಿವಿಧಾನ ದೊಂದಿಗೆ ಉತ್ಸಾಹ ಮತ್ತು ಆಧ್ಯಾತ್ಮಿಕ ವೈಭವದೊಂದಿಗೆ ಆಚರಿಸಲಾಯಿತು. ಹೊಸ ಶೈಕ್ಷಣಿಕ ವರ್ಷಕ್ಕೆ ದೈವಿಕ ಆಶೀರ್ವಾದವನ್ನು ಕೋರುತ್ತಾ, ಅರ್ಚಕ ವೇದಮೂರ್ತಿ ಶ್ರೀ ನವನೀತ ಕೃಷ್ಣ ಬೋಳoತಕೋಡಿ ಮತ್ತು ಸಹ-ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನ ಮತ್ತು ಸರಸ್ವತಿ ಹವನದೊಂದಿಗೆ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೀಡಿದ ಭಾವಪೂರ್ಣ ಭಕ್ತಿಪೂರ್ವ ಭಜನೆಗಳಿಂದ ಪ್ರಶಾಂತ ವಾತಾವರಣವು ಸಮೃದ್ಧವಾಗಿತ್ತು. ನಂತರ…

Read More

ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆ

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆಯು ಇತ್ತೀಚೆಗೆ ಕಯ್ಯಾರು ಪರಂಬಳ ಭಾರತಾ ಮಾತಾ ಸೇವಾ ಟ್ರಸ್ಟ್ ಸಭಾ ಭವನದಲ್ಲಿ ದಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ರಮ್ಯಾ .ಯನ್ ಸೀತಾ0ಗೊಳಿ ಮಕ್ಕಳ ಸಹಾಯ ವಾಣಿ ಕೇಂದ್ರದ ಮುಖ್ಯಸ್ಥೆ , ಗೌರವ ಮಾರ್ಗದರ್ಶಕಿ ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇವರು ವಹಿಸಿದರು. ಸಭೆಯನ್ನು ಕುಂಬಳೆ ಪೊಲೀಸ್ ಸ್ಟೇಷನ್ ಇದರ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ…

Read More

33.5ಕಿಲೋ ಗಾಂಜಾ ಸಹಿತ ಸೋಂಕಾಲ್ ನಿವಾಸಿಯ ಬಂಧನ

ಕುಂಬಳೆ: ಕಾಸರಗೋಡು ಜಿಲ್ಲೆಯ ಗಾಂಜಾ ವಿತರಣಾ ಜಾಲದ ಪ್ರಮುಖ ಕೊಂಡಿಯೆನ್ನಲಾದ ಉಪ್ಪಳ ಸಮೀಪದ ಸೋಂಕಾಲ್ ನಿವಾಸಿಯನ್ನು ಬಂಧಿಸಲಾಗಿದೆ. ಮಂಜೇಶ್ವರ ಪೋಲೀಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ್ಪಳ ಸೋಂಕಾಲಿನ ಎ.ಅಶೋಕ(45) ಎಂಬಾತನನ್ನು ಬಂಧಿಸಿ, ಈತ ಮಲಗುವ ಮಂಚದಡಿಯಲ್ಲಿ ದಾಸ್ತಾನಿರಿಸಿದ್ದ 33.5ಕಿಲೋ ಗಾಂಜ ನಶಪಡಿಸಲಾಗಿದೆ.ಕಾಸರಗೋಡು ಜಿಲ್ಲೆಯ ಗಾಂಜಾ ವಿತರಣಾ ಜಾಲದ ಪ್ರಮುಖ ಕೊಂಡಿಗಳಲ್ಲಿ ಈತನೂ ಒಬ್ಬನೆಂದು ಪೋಲೀಸರು ತಿಳಿಸಿದ್ದಾರೆ. ಮಂಜೇಶ್ವರ ಎಸ್.ಐ.ಕೆ.ಆರ್.ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

Read More
error: Content is protected !!